DELHI RESULTS:ದೆಹಲಿ ಚುನಾವಣಾ ಫಲಿತಾಂಶ.. ಪಟಾಕಿ ಸಿಡಿಸಿ ಸಂಭ್ರಮಿಸಿದ ಹೊಸನಗರ ಬಿಜೆಪಿ ಮಂಡಲ…

ಹೊಸನಗರ: ದೆಹಲಿ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಸ್ಪಷ್ಟ ಬಹುಮತದ ಸ್ಥಾನಗಳಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದ್ದು ಹಿನ್ನೆಲೆ ಹೊಸನಗರ ಬಿಜೆಪಿ ಮಂಡಲ ವತಿಯಿಂದ ಸಿಹಿ ಹಂಚಿ ಪಟಾಕಿ ಸಿಡಿಸಿ ಗೆಲುವನ್ನು ಸಂಭ್ರಮಿಸಲಾಯಿತು.
ಈ ಕುರಿತು ಮಾತನಾಡಿದ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಗಣಪತಿ ಬೆಳಗೊಡ್ ಬಿಜೆಪಿ ಪಕ್ಷಕ್ಕೆ ಸ್ಪಷ್ಟ ಬಹುಮತವನ್ನು ನೀಡುವಲ್ಲಿ ಸಹಕರಿಸಿದ ಎಲ್ಲ ಮತದಾರ ಬಾಂಧವರಿಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ ಅರವಿಂದ ಕ್ರೇಜಿ ವಾಲ್  ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇನೆ ಅದರ ವಿರುದ್ಧ ನಿರಂತರವಾಗಿ ಹೋರಾಟವನ್ನು ಮಾಡುತ್ತೇನೆ ಎಂದು ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗೋ ಮೂಲಕ ಆ ಹೋರಾಟಕ್ಕೆ ಒಂದು ಕಪ್ಪು ಚುಕ್ಕೆಯನ್ನು ತಂದವರು ಅವರಿಗೆ ಇಂದು ದೆಹಲಿಯ ಮತದಾರರು ತಕ್ಕ ಉತ್ತರವನ್ನು ಕೊಟ್ಟಿದ್ದು ಅದರಂತೆ ಬಿಜೆಪಿ ಸಂವಿಧಾನವನ್ನು ಬದಲಾವಣೆ ಮಾಡುತ್ತದೆ ಎಂದು ಬಿಜೆಪಿಯ ವಿರುದ್ಧ ಸುಳ್ಳು ಆರೋಪವನ್ನು ಮಾಡಿದ್ದ ರಾಹುಲ್ ಗಾಂಧಿ ಅವರಿಗೂ ಸಹ ಈ ಚುನಾವಣೆ ಮೂಲಕ ಮತದಾರ ಉತ್ತರವನ್ನು ನೀಡಿದ್ದಾನೆ ಈ ಫಲಿತಾಂಶ ದೇಶದ ಮುಂಬರುವ ಎಲ್ಲಾ ಚುನಾವಣೆಗಳ ಮೇಲು ಪರಿಣಾಮವನ್ನು ಬೀರಲಿದ್ದು ಜನಪರವಾದಂತ ಕೆಲಸವನ್ನು ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ದೇಶದ ಎಲ್ಲಾ ಭಾಗಗಳಲ್ಲಿಯೂ ಮತ್ತೆ ಅಧಿಕಾರವನ್ನು ಹಿಡಿಯಲಿದೆ ಎಂದರು ಈ ಸಂದರ್ಭದಲ್ಲಿ ಮುಖಂಡರಾದ ಶ್ರೀಪತಿ ರಾವ್, ಮಲ್ಲಿಕಾರ್ಜುನ್, ಹಾಲ್ ಗದ್ದೆ ಉಮೇಶ್, ದಿನೇಶ್, ಮೋಹನ್ ಮಂಡನಿ, ಸೀಮಾ ಸೆರಾವು, ನಾಗರತ್ನ, ಅಭಿಲಾಶ್ ಚಿಕ್ಕಮಣತಿ ಮುಂತಾದವರು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು..

DELHI RESULTS...


Discover more from Prasarana news

Subscribe to get the latest posts sent to your email.

  • Related Posts

    HARATHALU HALAPPA:   ಬಡ ಕುಟುಂಬಗಳನ್ನು ಬೀದಿಗೆ ತರುವ ಕೆಲಸವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮಾಡಿದ್ದಾರೆ: ಹರತಾಳು ಹಾಲಪ್ಪ…

    ಹೊಸನಗರ: ಅರಣ್ಯ ಒತ್ತುವರಿ ಜಾಗ ತೆರವು ನೆಪದಲ್ಲಿ ಬಡ ಕುಟುಂಬಗಳನ್ನು ಬೀದಿಗೆ ತರುವ ಕೆಲಸವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಡುತ್ತಿದ್ದಾರೆ ಎಂದು ಹರತಾಳು ಹಾಲಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.ತಾಲೂಕಿನ ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯ ಅರಳಿಕೊಪ್ಪ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು…

    Read more

    RIPPONPET NEWS: ಕಾಲಭೈರವೇಶ್ವರ ಮಹಿಳಾ ಸಂಘದಿಂದ ಶರ್ಮಿನ್ಯಾವತಿ ನದಿಗೆ ಬಾಗಿನ ಅರ್ಪಣೆ..

    ರಿಪ್ಪನ್ ಪೇಟೆ: ಈ ಬಾರಿ ಸಮೃದ್ಧ ಮಳೆಯಾಗಿರುವ ಹಿನ್ನೆಲೆಯಲ್ಲಿ ಪ್ರಕೃತಿಗೆ ಕೃತಜ್ಞತೆ ಸಲ್ಲಿಸುವ ನಿಟ್ಟಿನಲ್ಲಿ ಕಾಲಭೈರವೇಶ್ವರ ಮಹಿಳಾ ಸಂಘದ ವತಿಯಿಂದ ಗವಟೂರಿನ ಶರ್ಮಿನ್ಯಾವತಿ ನದಿಗೆ ಶುಕ್ರವಾರ ಬಾಗಿನ ಅರ್ಪಿಸಲಾಯಿತು. ಈ ಬಗೆಯ ಸಾಂಪ್ರದಾಯಿಕ ಹಾಗೂ ಧಾರ್ಮಿಕ ಆಚರಣೆ ಮಹಿಳಾ ಸಂಘದ ಸದಸ್ಯರ…

    Read more

    Leave a Reply

    Discover more from Prasarana news

    Subscribe now to keep reading and get access to the full archive.

    Continue reading