

ಹೊಸನಗರ:ಕರ್ನಾಟಕ ಪರೀಕ್ಷಾ ಪ್ರಾಧಿಕಾರ ರಾಜ್ಯದಲ್ಲಿ ಎರಡು ದಿನಗಳ ಕಾಲ ನಡೆಸಿದ ಸಿ.ಇ.ಟಿ. ಪರೀಕ್ಷೆಯಲ್ಲಿ ಎರಡು ಕಡೆ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಜನಿವಾರ ತೆಗೆಸಿರುವುದನ್ನು ಖಂಡಿಸಿ ಬ್ರಾಹ್ಮಣ ಮಹಾಸಭಾ ಹೊಸನಗರ ವತಿಯಿಂದ ಗಾಯಿತ್ರಿ ಮಂದಿರದಿಂದ ಮೆರವಣಿಗೆ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ತಾಲೂಕು ಕಚೇರಿಗೆ ಆಗಮಿಸಿ ತಾಲೂಕು ದಂಡಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.
ಮನವಿ ಪತ್ರದಲ್ಲಿ ವಿದ್ಯಾರ್ಥಿಯೊಬ್ಬನಿಗೆ ಪರೀಕ್ಷೆ ಬರೆಯುವ ಅವಕಾಶವನ್ನೇ ನೀಡದ ಸಂವಿಧಾನ ಬಾಹಿರ ಘಟನೆ ನಡೆದಿರುತ್ತದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕೆಲವೆಡೆ ಜನಿವಾರವನ್ನು ಕತ್ತರಿಸಿ ಹಾಕಿದ ಕುಕೃತ್ಯವೂ ನಡೆದಿರುತ್ತದೆ.
ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದಲ್ಲಿ ನಮ್ಮ ಹೆಮ್ಮೆಯ ಸಂವಿಧಾನವು ಪ್ರತಿಯೊಬ್ಬರಿಗೂ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಿರುತ್ತದೆ. ಈ ನಿಟ್ಟಿನಲ್ಲಿ ಬ್ರಾಹ್ಮಣ್ಯದ ಸಂಕೇತವಾಗಿರುವ ಜನಿವಾರವನ್ನು ಬ್ರಹ್ಮಪದೇಶದ ಸಂದರ್ಭದಲ್ಲಿ ಧರಿಸಿದ ಇಟ್ಟುಕೊಳ್ಳಬೇಕಾಗಿರುತ್ತದೆ. ಹೀಗಿರುವಾಗ ಸಾಯುವವರೆಗೂ ದ್ವೇಷ ಕೇವಲ ವಿನಾಕಾರಣದಿಂದ ಜನಿವಾರವನ್ನು ತೆಗೆಸಿರುವುದು ಅತ್ಯಂತ ಹೀನಾಯ ಮತ್ತು ಇದು ಬ್ರಾಹ್ಮಣರ ಮೇಲೆ ನಡೆದ ದೌರ್ಜನ್ಯವೆಂದೇ ಪರಿಗಣಿಸಬೇಕಾಗಿರುತ್ತದೆ.
ಇಂದು ಬ್ರಾಹ್ಮಣ ಸಮಾಜವನ್ನು ಹಾಗೂ ಅವರ ಸಂಸ್ಕಾರಗಳನ್ನು ಅವಹೇಳನ ಮಾಡುವುದು ಕೆಲವರಿಗೆ ಒಂದು ಶೋಕಿಯಾಗಿಬಿಟ್ಟಿದೆ. ಸಮಾಜದಲ್ಲಿ ಏನೇ ಘಟಿಸಿದರೂ ಬ್ರಾಹ್ಮಣರನ್ನು ಬೈಯುವುದು ಮಾಮೂಲಿಯಾಗಿದೆ. ಸಾತ್ವಿಕತೆಯಿಂದ ತಾವಾಯಿತು ತಮ್ಮ ಪಾಡಾಯಿತು ಎಂಬಂತಿರುವ, ಸದಾ ದೇಶ ಮೊದಲು ಎಂದು ರಾಷ್ಟ್ರಹಿತವನ್ನು ಬಯಸಿ, ಧಾರ್ಮಿಕ ವಿಧಿವಿಧಾನಗಳೊಂದಿಗೆ "ಸರ್ವೇ ಜನಾಃ ಸುಖಿನೋ ಭವಂತು" ಎಂಬುದನ್ನು ಅಕ್ಷರಶಃ ಪಾಲಿಸಿಕೊಂಡು ಬರುತ್ತಿರುವ ಬ್ರಾಹ್ಮಣ ಸಮಾಜದ ಮೇಲಿನ ಈ ಅನಾವಶ್ಯಕ ದೌರ್ಜನ್ಯವನ್ನು ನಾವೆಲ್ಲರೂ ಒಮ್ಮತದಿಂದ ಖಂಡಿಸಬೇಕಾಗಿದೆ. ಏಕೆಂದರೆ ಸಹನೆಗೂ ಒಂದು ಮಿತಿ ಇದ್ದೇ
ಈ ನಿಟ್ಟಿನಲ್ಲಿ ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಲ್ಲದೆ ಅವರನ್ನು ಅಮಾನತ್ತು ಮಾಡುವ ಜೊತೆಗೆ ಶಿಕ್ಷಣ ಇಲಾಖೆ ಗ್ರಾಮೀಣ ಸಮಾಜವನ್ನು ಕ್ಷಮಿಯಾಚಿಸಬೇಕು ಎಂದು ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ ಇದ್ದಾರೆ ಈ ಪ್ರತಿಭಟನೆಯಲ್ಲಿ ಹೊಸನಗರ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾದ ಹೆಚ್ ಏನ್ ರಾಮಚಂದ್ರ ರಾವ್, ಕಾರ್ಯದರ್ಶಿ ಭೋಜರಾಜ್, ಕೋಶಾಧಿಕಾರಿ ಶ್ರೀಧರ್ ಉಡುಪ, ಕೆ ವಿ ಕೃಷ್ಣಮೂರ್ತಿ, ವಿನಾಯಕ್, ಸ್ವರೂಪ, ಸುಧೀಂದ್ರ ಪಂಡಿತ್ ಮುಂತಾದವರು ಪಾಲ್ಗೊಂಡಿದ್ದರು.
CET:HOSANAGARA..