

ಹೊಸನಗರ: ಸತತ ಏಳು ವರ್ಷಗಳಿಂದ ಸ್ಕೀಮ್ ಉದ್ಯಮದ ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಅಯಾನ್ ಗ್ರೂಪ್ ಸಂಸ್ಥೆಯು ರಾಜ್ಯ ಮತ್ತು ಹೊರ ರಾಜ್ಯಗಳಲ್ಲೂ ತನ್ನ ಹಲವು ಶಾಖೆಗಳನ್ನು ವಿಸ್ತರಿಸಿದ್ದು, ಕಾರ್ಮಿಕರ ದಿನಾಚರಣೆ ಅಂಗವಾಗಿ ಇಲ್ಲಿನ ಶಾಖಾ ಕಛೇರಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸಂಸ್ಥೆ ವತಿಯಿಂದ ಅದ್ದೂರಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಇದೇ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆಗೆ ಪ್ರತ್ಯೇಕವಾಗಿ ಸಂಸ್ಥೆಯ 4ನೇ ಆವೃತಿಯ ಸ್ಕೀಮ್ ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಮಾಜದಲ್ಲಿ ತನ್ನದೇ ಆದ ವೃತ್ತಿ ಜೀವನದಲ್ಲಿ ಛಾಪು ಮೂಡಿಸಿರುವಂತಹ ರಾಧಕೃಷ್ಣ ಪೂಜಾರಿ (ಪರಿಸರ ಪ್ರೇಮಿ), ಶಿರ್ಶುಷ್ರಕಿ ಶೈಲಜಾ. ಎಂ. ಟಿ ( ಸರ್ಕಾರಿ ಆಸ್ಪತ್ರೆ ಮತ್ತು ರಾಜ್ಯ ಪತ್ರಕರ್ತರ ಸಂಘದಿಂದ ಪಂಚಾಯತ್ ಯುವ ಐಕಾನ್ ಪ್ರಶಸ್ತಿ ಪುರಸ್ಕೃತ ಎಂ.ಗುಡ್ಡೇಕೊಪ್ಪ ಗ್ರಾಮ ಪಂಚಾಯತಿ ಅಧ್ಯಕ್ಷ ಪ್ರವೀಣ್ ಜಿ.ಎನ್. ಇವರನ್ನು ಮಾಜಿ ಸಚಿವ ಹರತಾಳು ಹಾಲಪ್ಪ ಆತ್ಮೀಯವಾಗಿ ಸನ್ಮಾನಿಸಿದರು.
ಈ ವೇಳೆ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಸುರೇಶ್ ಸ್ವಾಮಿ ರಾವ್, ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ಹಾಲಗದ್ದೆ ಉಮೇಶ್, ಎಂ.ಗುಡ್ಡೇಕೊಪ್ಪ ಗ್ರಾಮ ಪಂಚಾಯತಿ ಸದಸ್ಯ ಮಹೇಂದ್ರ ಕುಮಾರ್, ಪಟ್ಟಣ ಪಂಚಾಯತಿ ಆಶ್ರಯ ಸಮಿತಿ ಸದಸ್ಯ ನಾಸಿರ್, ನಿವೃತ್ತ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸಿದ್ದಪ್ಪ, ಮಹೇಶ್ ಮಡೋಡಿ ಸೇರಿದಂತೆ ಅಯಾನ್ ಗ್ರೂಪ್ ನ ಎಲ್ಲಾ ನಿರ್ದೇಶಕರು ಉಪಸ್ಥಿತರಿದ್ದರು..
AYAAN GROUP..
Discover more from Prasarana news
Subscribe to get the latest posts sent to your email.