

ಹೊಸನಗರ: ಹೊಸನಗರದಿಂದ ಕುಂದಾಪುರ ಕಡೆ ಹೋಗುತ್ತಿದ್ದ ಬಡಾ ದೋಸ್ತ್ ವಾಹನ ಹುಲಿಕಲ್ ಬಳಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ (ಜು.31) ರಾತ್ರಿ ನಡೆದಿದೆ.
ಸಾಲಿಗ್ರಾಮದ ಮೂಲದ ಚಾಲಕ ಗೋಪಾಲ್ ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಕ್ಲೀನರ್ ಪ್ರಭಾಕರ ಗಾಯಗೊಂಡಿದ್ದು ಮಾಸ್ತಿಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು. ಡಾ.ಸುದೀಪ್ ಡಿಮೆಲ್ಲೋ ಚಿಕಿತ್ಸೆ ನೀಡಿದ್ದಾರೆ.
ಚಾಲಕನ ನಿಯಂತ್ರಣ ತಪ್ಪಿ ಈ ದುರ್ಘಟನೆ ನಡೆದಿದೆ. ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
HOSANAGARA NEWS
Discover more from Prasarana news
Subscribe to get the latest posts sent to your email.