

ಹೊಸನಗರ: ಹಳೆ ಮನೆಯ ಮೇಲ್ಚಾವಣಿ ರಿಪೇರಿ ಮಾಡುವಾಗ ಆಯತಪ್ಪಿ ಬಿದ್ದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ತಾಲೂಕಿನ ಕಲ್ಲುವಿಡಿ ಅಬ್ಬಿಗಲ್ಲು ಗ್ರಾಮದ ಇಟ್ಟಕ್ಕಿಯಲ್ಲಿ ನಿನ್ನೆ ನಡೆದಿದೆ.
ವೃತ್ತಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಸಂತೋಷ್ ಕುಮಾರ್ ( 35) ಇಟ್ಟಕ್ಕಿಯ ಪರಿಚಯಸ್ತರ ಹಳೆ ಮನೆಯ ರಿಪೇರಿ ಗೆ ತೆರಳಿದ್ದರೂ ಇವಳೇ ಗೋಡೆಯ ಮೇಲೆ ಹತ್ತಿಕೊಂಡು ಕೆಲಸವನ್ನು ಮಾಡುತ್ತಿದ್ದಾಗ ಅಕಸ್ಮಾತಾಗಿ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ ಕೂಡಲೇ ಅವರನ್ನು ಮನೆಯವರು ಹಾಗೂ ಸ್ಥಳೀಯರು ಹೊಸನಗರ ಸರ್ಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆಯನ್ನು ಕೊಡಿಸಲು ಮುಂದಾಗಿದ್ದು ಈ ವೇಳೆ ಸಂತೋಷ್ ಕುಮಾರ್ ಅವರನ್ನು ಪರೀಕ್ಷಿಸಿದ ವೈದ್ಯರು ಅವರು ವೃತ್ತಪಟ್ಟಿರುವುದಾಗಿ ತಿಳಿಸಿದ್ದಾರೆ
ಈ ಕುರಿತಾಗಿ ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
HOSANAGARA...
Discover more from Prasarana news
Subscribe to get the latest posts sent to your email.