REPAIR: UPDATE:ಹೊಸನಗರ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ನವೀಕರಣಕ್ಕೆ ₹1.10 ಕೋಟಿ   ಬಿಡುಗಡೆ..

ಹೊಸನಗರ: ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ 1.10 ಕೋಟಿ ರೂ ಅನುದಾನ ಬಿಡುಗಡೆಗೊಂಡಿದ್ದು ಶೀಘ್ರದಲ್ಲಿ ಕಟ್ಟಡ ನವೀಕರಣ ಹಾಗೂ ನೂತನ ಕೊಠಡಿ ಕಾಮಗಾರಿ ಆರಂಭಗೊಳ್ಳಲಿದ್ದು ಹಾಗೂ ಇದಕ್ಕೆ ಕಾರಣೀಭೂತರಾದ ಶಾಸಕ ಗೋಪಾಲಕೃಷ್ಣ ಬೇಳೂರು ಆರೋಗ್ಯ ರಕ್ಷಾ ಸಮಿತಿ ಹೊಸನಗರ ಅಭಿನಂದನೆಗಳನ್ನು ತಿಳಿಸುತ್ತೇವೆ ಎಂದು ತಿಳಿಸಿದರು.
ಈ ಕುರಿತಾಗಿ ಹೊಸನಗರ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಆರೋಗ್ಯ ರಕ್ಷಾ ಸಮಿತಿ ಹಿಂದೆ ಆಸ್ಪತ್ರೆ ಕಟ್ಟಡ ಮಳೆಗಾಲದಲ್ಲಿ ಬಹಳಷ್ಟು ಸೋರುತ್ತಿದ್ದು ಈ ಬಗ್ಗೆ ಕೆಲ ತಿಂಗಳುಗಳ ಹಿಂದೆ ವರದಿಗಳು ಸಹ ಪತ್ರಿಕೆಗಳಲ್ಲಿ ಬಿತ್ತರವಾಗಿತ್ತು ಈ ಕುರಿತಾಗಿ ಸಮಿತಿ ಶಾಸಕರ ಗಮನಕ್ಕೆ ತಂದು ಶೀಘ್ರ ನವೀಕರಣ ಕಾಮಗಾರಿಗೆ ಅನುದಾನವನ್ನ ಬಿಡುಗಡೆಗೊಳಿಸುವಂತೆ ಕೋರಿದ್ದೆವು ಅದಕ್ಕೆ ಸ್ಪಂದಿಸಿದ ಸನ್ಮಾನ್ಯ ಶಾಸಕರು ಅತಿ ಕಡಿಮೆ ಅವಧಿಯಲ್ಲಿ ಆಸ್ಪತ್ರೆ ಕಟ್ಟಡ ದುರಸ್ತಿ ಹಾಗೂ ನವೀಕರಣ ಕಾಮಗಾರಿಗೆ 60 ಲಕ್ಷ ರೂಗಳನ್ನು ಜೊತೆಗೆ ಬ್ಲಾಕ್ ಲೆವೆಲ್ ಪಬ್ಲಿಕ್ ಹೆಲ್ತ್ ಲ್ಯಾಬ್ ನಿರ್ಮಾಣಕ್ಕೆ 50 ಲಕ್ಷ ರೂಗಳನ್ನು ಬಿಡುಗಡೆ ಗೊಳಿಸಿದ್ದಾರೆ ಜೊತೆಗೆ ಲ್ಯಾಬ್ ಕಾಮಗಾರಿ ಪೂರ್ಣಗೊಂಡ ಬಳಿಕ ಅಲ್ಲಿ ಕಾರ್ಯ ನಿರ್ವಹಿಸಲು ಲ್ಯಾಬ್ ತಂತ್ರಜ್ಞರು ಹಾಗೂ ಅಗತ್ಯ ಯಂತ್ರೋಪಕರಣಗಳನ್ನು ತರುವ ಮೂಲಕ ಎಲ್ಲಾ ಬಗೆಯ ಪರೀಕ್ಷೆಗಳನ್ನು ಇಲ್ಲಿ ನಡೆಸುವ ಮೂಲಕ ರೋಗಿಗಳಿಗೆ ಅನುಕೂಲವನ್ನು ಮಾಡಿಕೊಡಲಿದ್ದಾರೆ.
ಅಷ್ಟೇ ಅಲ್ಲದೆ ಆಸ್ಪತ್ರೆಯ ಸುತ್ತಮುತ್ತ ಕಾಂಪೌಂಡ್ ಹಾಗೂ ಇನ್ನಿತರ ಕಟ್ಟಡ ನವೀಕರಣ ಹಾಗೂ ರೋಗಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಒಂದಿಷ್ಟು ಕಾಮಗಾರಿಗಳನ್ನ ಗಮನದಲ್ಲಿಟ್ಟುಕೊಂಡು 1.40 ಕೋಟಿ ರೂಗಳ ಅನುದಾನಕ್ಕೆ ಅನುಮೋದನೆಯನ್ನು ಕಳಿಸಿದ್ದು ಮಾರ್ಚ್ ತಿಂಗಳ ಒಳಗಾಗಿ ಅದು ಬಿಡುಗಡೆಗೊಳ್ಳಲಿದ್ದು ಆಸ್ಪತ್ರೆ ಅಭಿವೃದ್ದಿಯಲ್ಲಿ ಶಾಸಕರು ನುಡಿದಂತೆ ನಡೆಯುತ್ತಿದ್ದಾರೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ತಾಲೂಕು ದಂಡಾಧಿಕಾರಿಗಳಾದ ರಶ್ಮಿ ಎಚ್ ಜೆ, ಡಾ. ಗುರುಮೂರ್ತಿ, ರಕ್ಷಾ ಸಮಿತಿಯ ಸದಸ್ಯರಾದ ಗೋಪಿನಾಥ್ ಜಯನಗರ, ಇಕ್ಬಾಲ್, ವಿನಯ್ ಕುಮಾರ್ ಶಾಸಕರ ಆಪ್ತ ಕಾರ್ಯದರ್ಶಿಯಾದ ಮಂಜು ಸಣ್ಣಕ್ಕಿ ರಮೇಶ್ ಮುಂತಾದವರು ಉಪಸ್ಥಿತರಿದ್ದರು..

REPAIR: UPDATE...


Discover more from Prasarana news

Subscribe to get the latest posts sent to your email.

  • Related Posts

    HARATHALU HALAPPA:   ಬಡ ಕುಟುಂಬಗಳನ್ನು ಬೀದಿಗೆ ತರುವ ಕೆಲಸವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮಾಡಿದ್ದಾರೆ: ಹರತಾಳು ಹಾಲಪ್ಪ…

    ಹೊಸನಗರ: ಅರಣ್ಯ ಒತ್ತುವರಿ ಜಾಗ ತೆರವು ನೆಪದಲ್ಲಿ ಬಡ ಕುಟುಂಬಗಳನ್ನು ಬೀದಿಗೆ ತರುವ ಕೆಲಸವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಡುತ್ತಿದ್ದಾರೆ ಎಂದು ಹರತಾಳು ಹಾಲಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.ತಾಲೂಕಿನ ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯ ಅರಳಿಕೊಪ್ಪ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು…

    Read more

    RIPPONPET NEWS: ಕಾಲಭೈರವೇಶ್ವರ ಮಹಿಳಾ ಸಂಘದಿಂದ ಶರ್ಮಿನ್ಯಾವತಿ ನದಿಗೆ ಬಾಗಿನ ಅರ್ಪಣೆ..

    ರಿಪ್ಪನ್ ಪೇಟೆ: ಈ ಬಾರಿ ಸಮೃದ್ಧ ಮಳೆಯಾಗಿರುವ ಹಿನ್ನೆಲೆಯಲ್ಲಿ ಪ್ರಕೃತಿಗೆ ಕೃತಜ್ಞತೆ ಸಲ್ಲಿಸುವ ನಿಟ್ಟಿನಲ್ಲಿ ಕಾಲಭೈರವೇಶ್ವರ ಮಹಿಳಾ ಸಂಘದ ವತಿಯಿಂದ ಗವಟೂರಿನ ಶರ್ಮಿನ್ಯಾವತಿ ನದಿಗೆ ಶುಕ್ರವಾರ ಬಾಗಿನ ಅರ್ಪಿಸಲಾಯಿತು. ಈ ಬಗೆಯ ಸಾಂಪ್ರದಾಯಿಕ ಹಾಗೂ ಧಾರ್ಮಿಕ ಆಚರಣೆ ಮಹಿಳಾ ಸಂಘದ ಸದಸ್ಯರ…

    Read more

    Leave a Reply

    Discover more from Prasarana news

    Subscribe now to keep reading and get access to the full archive.

    Continue reading

    Subscribe