

ಹೊಸನಗರ:ತಾಲೂಕಿನ ಮೇಲಿನಬೆಸಿಗೆ ಗ್ರಾಮ ಪಂಚಾಯತಿ ವಾಸಿ ಕಾಂಗ್ರೆಸ್ ಮುಖಂಡ ಜಯನಗರ ಗೋಪಿನಾಥ್ ಅವರ ತಾಯಿ ಸೀತಮ್ಮ ರಾಮಚಂದ್ರ ರಾವ್ (87) ಗುರುವಾರ ಬೆಳಗ್ಗೆ 7-30 ಗಂಟೆಯ ಸುಮಾರಿಗೆ ತೀವ್ರ ಹೃದಯಾಘಾತದಿಂದ ಅವರ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ ನಾಲ್ಕು ಗಂಡು, ಎರಡು ಹೆಣ್ಣು ಮಕ್ಕಳಿದ್ದರು.
ಮೃತರ ನಿಧನಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ. ಚಂದ್ರಮೌಳಿ, ತಾಲೂಕು ಪಂಚಾಯತಿ ಮಾಜಿ ಸದಸ್ಯ ಎರಗಿ ಉಮೇಶ್, ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜುನಾಥ್, ವಕೀಲ ಬಸವರಾಜ್ ಗಗ್ಗ, ಬ್ರಹ್ಮೇಶ್ವರ ಸುಧೀರ್,ಜಂಬಳ್ಳಿ ಮಾಧವಶೆಟ್ಟಿ ಸೇರಿದಂತೆ ಹಲವರು ಅತೀವ ಸಂತಾಪ ಸೂಚಿಸಿದ್ದಾರೆ..
DEATH NEWS...