

ಹೊಸನಗರ: ತಾಲ್ಲೂಕಿನ ಬಟ್ಟೆಮಲ್ಲಪ್ಪದ ಶ್ರೀ ಬಸವನ ಬ್ಯಾಣದ ಅಯ್ಯಪ್ಪ ಮೆಮೋರಿಯಲ್ ಟ್ರಸ್ಟ್ ಹಾಗೂ ಶ್ರೀ ವ್ಯಾಸ ಮಹರ್ಷಿ ಗುರುಕುಲ ಜಂಟಿಯಾಗಿ ಪ್ರತಿ ವರ್ಷ ನೀಡುವ ಶ್ರೀ ವೇದ ವ್ಯಾಸ ಗುರು ಪುರಸ್ಕಾರಕ್ಕೆ ಈ ಸಾಲಿನಲ್ಲಿ ಶಿಕ್ಷಕ ವೆಂಕಟೇಶ್ ಹೆಚ್ ಅವರು ಆಯ್ಕೆ ಆಗಿದ್ದಾರೆ.
ತಾಲ್ಲೂಕಿನ ಕಚ್ಚಿಗೆಬೈಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾಗಿರುವ ವೆಂಕಟೇಶ್ ಹೆಚ್ ಅವರಿಗೆ ಪ್ರಸಕ್ತ ಸಾಲಿನ 'ಶ್ರೀ ವೇದ ವ್ಯಾಸ ಗುರು ಪುರಸ್ಕಾರ 2025' ಲಭಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ಮಂಜುನಾಥ್ ಎಸ್. ಬ್ಯಾಣದ ಮಾಧ್ಯಮ ಪ್ರಕತೆಯಲ್ಲಿ ತಿಳಿಸಿದ್ದಾರೆ.
ಶ್ರೀ ಬಸವನ ಬ್ಯಾಣದ ಅಯ್ಯಪ್ಪ ಮೆಮೋರಿಯಲ್ ಟ್ರಸ್ಟ್ ಹಾಗೂ ಶ್ರೀ ವ್ಯಾಸ ಮಹರ್ಷಿ ಗುರುಕುಲ ಜಂಟಿಯಾಗಿ ಕಳೆದ 15 ವರ್ಷಗಳಿಂದ ಪ್ರತಿ ವರ್ಷ ಗ್ರಾಮೀಣ ಪ್ರದೇಶದಲ್ಲಿ ಅತೀ ಹೆಚ್ಚು ಸಮಯ ಅತ್ಯುತ್ತಮ ಸೇವೆ ಸಲ್ಲಿಸಿದ ಶಿಕ್ಷಕರನ್ನು ಗುರುತಿಸಿ ಈ ಪುರಸ್ಕಾರ ನೀಡುತ್ತಾ ಬಂದಿದೆ.
ಫೆಬ್ರವರಿ 7 ಮತ್ತು 8 ರಂದು ಶ್ರೀ ವ್ಯಾಸ ಮಹರ್ಷಿ ಗುರುಕುಲದಲ್ಲಿ ನಡೆಯುವ ಪಂಚ ದಶಿಯ ಪ್ರದರ್ಶಿನಿ ಸಂಭ್ರಮೊತ್ಸವದಲ್ಲಿ ತಾಲ್ಲೂಕು ದಂಡಾಧಿಕಾರಿ ರಶ್ಮಿ ಅವರು ಗುರು ಪುರಸ್ಕಾರ ಪ್ರಧಾನ ಮಾಡಲಿದ್ದಾರೆ.
ಫೆ.7ರ ಶುಕ್ರವಾರ ಸಂಜೆ 5.30ಕ್ಕೆ ನಡೆಯುವ ಕಾರ್ಯ್ರಮದ ದಿವ್ಯ ಸಾನಿಧ್ಯವನ್ನು ಮೂಲೆಗದ್ದೆ ಮಠದ ಪರಮ ಪೂಜ್ಯ ಶ್ರೀ ಅಭಿನವ ಚನ್ನಬಸವ ಮಹಾ ಸ್ವಾಮೀಜಿ ವಹಿಸಲಿದ್ದು, ಕ್ಷೇತ್ರದ ಶಾಸಕರು, ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ದಿ ನಿಗಮದ ಅಧ್ಯಕ್ಷರು ಆದ ಬೇಳೂರು ಗೋಪಾಲಕೃಷ್ಣ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಬೆಂಗಳೂರು ಇಂಡೋಗ್ಲೋಬಲ್ ಎಜುಕೇಶನ್ ಸೊಸೈಟಿ ಸಿ ಇ ಓ ಧನರಾಜ್ ಗಂಗಾವತಿ ಆಶಯ ನುಡಿಗಳನ್ನು ಆಡಲಿದ್ದಾರೆ.
ಕಾರ್ಯಕ್ರಮದಲ್ಲಿ ಹೆಸ್ಕಾಂ ನಿವೃತ್ತ ಹಣಕಾಸು ನಿರ್ದೇಶಕ ಮಂಜುನಾಥ್, ನಿವೃತ್ತ ಸೇನಾನಿ ಕೃಷ್ಣಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ
ಹೆಚ್. ಆರ್. ಕೃಷ್ಣಮೂರ್ತಿ, ಸಿಪಿಐ ಗುರುಣ್ಣ ಎಸ್ ಹೆಬ್ಬಾಳ್, ನೌಕರ ಸಂಘದ ತಾಲೂಕು ಕಾರ್ಯದರ್ಶಿ ಪ್ರುತ್ವಿರಾಜ್ ಜಿ ಜೆ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ ಎಂದು ಮಂಜುನಾಥ್ ಬ್ಯಾಣದ ತಿಳಿಸಿದ್ದಾರೆ...
HOSANAGARA.
Discover more from Prasarana news
Subscribe to get the latest posts sent to your email.