

ಹೊಸನಗರ: ಪಟ್ಟಣದ ನೆಹರು ಕ್ರೀಡಾಂಗಣದಲ್ಲಿ ಫೆಬ್ರವರಿ 8 ಮತ್ತು 9ನೇ ತಾರೀಕಿನಂದು ಹೊಸನಗರ ಬ್ರದರ್ಸ್ ಇವರ ಆಶ್ರಯದಲ್ಲಿ ಕೋರಾರ್ ಹಾಗೂ ಕೊರಗ ಸಮಾಜ ಬಾಂಧವರ 90 ಗಜಗಳ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜನೆ ಮಾಡಲಾಗಿದೆ ಎಂದು ಹೊಸನಗರ ಬ್ರದರ್ಸ್ ನ ಅಧ್ಯಕ್ಷರಾದ ಚಂದ್ರಪ್ಪ ತಿಳಿಸಿದ್ದಾರೆ.
ಈ ಕುರಿತಾಗಿ ಕ್ರೀಡಾಭಿಮಾನಿಗಳಿಗೆ ಕ್ರೀಡಾಕೂಟ ವೀಕ್ಷಣೆಗೆ ಮುಕ್ತಾ ಆಹ್ವಾನ ನೀಡಿ ಮಾತನಾಡಿದ ಅವರು ನಾಳೆ ಬೆಳಿಗ್ಗೆ 9:00 ಗಂಟೆಗೇ ಕ್ರೀಡಾಕೂಟವನ್ನು ತೀರ್ಥಹಳ್ಳಿ ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಆರಗ ಜ್ಞಾನೇಂದ್ರ ಉದ್ಘಾಟಿಸಲಿದ್ದು ಮುಖ್ಯ ಅತಿಥಿಗಳಾಗಿ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ನಾಗಪ್ಪ ತಾಲೂಕು ದಂಡಾಧಿಕಾರಿಗಳಾದ ರಶ್ಮಿ ಹೆಚ್ ಜೆ, ಹೊಸನಗರ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಶಂಕರ್ ಗೌಡ ಪಾಟೀಲ್ ಹಾಗೂ ಪಟ್ಟಣ ಪಂಚಾಯಿತಿಯ ಸದಸ್ಯರುಗಳು ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಅಲ್ಲದೇ 09-02-2025 ರ ಶನಿವಾರದ ಸಮಾರೋಪ ಸಮಾರಂಭದಲ್ಲಿ ಸಾಗರ ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಗೋಪಾಲಕೃಷ್ಣ ಬೇಳೂರು ಕಾರ್ಯಕ್ರಮವನ್ನು ಉದ್ಘಾಟಿಸಿ ಗೆದ್ದಂತ ತಂಡಗಳಿಗೆ ಬಹುಮಾನವನ್ನು ವಿತರಿಸಲಿದ್ದು
ಕ್ರೀಡಾಕೂಟದಲ್ಲಿ ಕ್ರೀಡಾ ಅಭಿಮಾನಿಗಳು ಕ್ರೀಡಾಕೋಷಕರು ಆಗಮಿಸಿ ಕ್ರೀಡಾಕೂಟವನ್ನು ಯಶಸ್ವಿಗೊಳಿಸಿಕೊಳ್ಳುವಂತೆ ಈ ಮೂಲಕ ಕೋರಿದ್ದಾರೆ...
HOSANAGARA.
Discover more from Prasarana news
Subscribe to get the latest posts sent to your email.