

ಹೊಸನಗರ:ಕಲೆಯೊಂದಿಗೆ ಸಾಮಾಜಿಕ ಕಳಕಳಿಯ ಹೊಂದಿದ್ದ ಕಲಾವಿದ. ಭಟ್ಟೆಮಲ್ಲಪ್ಪದ ಸಾರಾ ಸಂಸ್ಥೆಯ ಮೂಲಕ ಜಲಸಾಕ್ಷರತೆ, ಇಂಗುಗುಂಡಿ ನಿರ್ಮಾಣ, ಹಸರೀಕರಣ, ಕೆರೆಗಳ ಪುನಶ್ಚೇತನದಂತಹ ಪರಿಸರ ರಕ್ಷಣೆ ಸಂಬಂಧಿ ತಮ್ಮನ್ನು ತೊಡಗಿಸಿಕೊಂಡವರು. ಕೆರೆಗಳ ಪುನಶ್ಚೇತನ ಕಾಮಗಾರಿಗೆ ಪ್ರೇರಕ ಶಕ್ತಿಯಾಗಿ ನಿಂತಿದ್ದ ಸಾಮಾಜಿಕ ಕಳಕಳಿಯ ನಟ ಯೇಸು ಪ್ರಕಾಶ್ ಅವರ ನೆನಪಿನ ಬುತ್ತಿಗಾಗಿ ನಾಳೆ ಇಂದ ದೊಂಬೆಕೊಪ್ಪದ ಸಾರ ಸಂಸ್ಥೆ ಯೇಸು ಪ್ರಕಾಶ್ ನೆನಪಿನ ನಾಟಕೋತ್ಸವ ಮತ್ತು ಬೇಸಿಗೆ ಶಿಬಿರವನ್ನು ಸಾರ ಕೇಂದ್ರ ಮತ್ತು ಕೆ ವಿ ಸುಬ್ಬಣ್ಣ ರಂಗಸಮುಹ ಹೆಗ್ಗೋಡು ಆಯೋಜಿಸಿದೆ.
ದಿನಾಂಕ 10- 4- 2025 ಸಂಜೆ 6:00ಗೆ ಕಾರ್ಯಕ್ರಮದ ಉದ್ಘಾಟನೆಯನ್ನು ರಂಗಭೂಮಿ ಹಾಗೂ ಚಿತ್ರನಟರು ನಿರ್ದೇಶಕರು ಆದಂತಹ ಶ್ರೀ ಪ್ರಕಾಶ್ ಬೆಳವಾಡಿ ಉದ್ಘಾಟಿಸಲಿದ್ದು ಕಾರ್ಯಕ್ರಮದಲ್ಲಿ ರಂಗಕರ್ಮಿ ಟಿ ನಾರಾಯಣ ಭಟ್ ಅವರನ್ನ ಸನ್ಮಾನಿಸಲಿದ್ದಾರೆ ಸಂಜೆ 7:00ಗೆ ಕಲಾಚಕ್ರ ನಾಟಕ ಪ್ರದರ್ಶನವಿದ್ದು ದಿನಾಂಕ 11- 4 -2025 ರ ಭಾನುವಾರ ನಲಿ-ಕಲಿ ಮಕ್ಕಳ ಬೇಸಿಗೆ ಶಿಬಿರ ಬೆಳಿಗ್ಗೆ 9:00 ರಿಂದ ಸಂಜೆ 5:00 ವರೆಗೆ ನಡೆಯಲಿದೆ ಅದೇ ದಿನ ಸಂಜೆ 7:00ಗೆ ಧರ್ಮನಟಿ ನಾಟಕ ಮರುದಿನ ಸಂಜೆ 7 ಗಂಟೆಗೆ ನಾಯಿ ಕಳೆದಿದೆ ನಾಟಕ ಪ್ರದರ್ಶನವು ಸಹ ಇರಲಿದೆ ಈ ವಿಶೇಷ ಕಾರ್ಯಕ್ರಮದಲ್ಲಿ ಸರ್ವರನ್ನು ಸಾರಾ ಸಂಸ್ಥೆಯ ಅಧ್ಯಕ್ಷರಾದ ಗುರುಪಾದಪ್ಪ ಗೌಡ ಆಹ್ವಾನಿಸಿದ್ದಾರೆ.
YESU PRAKASH...
Discover more from Prasarana news
Subscribe to get the latest posts sent to your email.