WORKSHOP:ಪರೀಕ್ಷೆ ಎದುರಿಸುವುದು ಹೇಗೆ?.. ಪರೀಕ್ಷೆ ನಂತರ ಮುಂದೇನು? …
“ಫೆಬ್ರವರಿ 1 ಮತ್ತು 2ರಂದು 10, 12ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ವಿಶೇಷ ಕಾರ್ಯಗಾರ”

ಹೊಸನಗರ: ಪರೀಕ್ಷೆ ಎಂದಾಕ್ಷಣ ಬಹುತೇಕರಿಗೆ ಅದೇನೋ ಗಾಬರಿ, ಭಯ. ಇದು ಕೇವಲ ವಿದ್ಯಾರ್ಥಿಗಳಿಗಷ್ಟೇ ಅಲ್ಲ, ಫೋಷಕರಿಗೂ ಇಂತಹ ಆತಂಕ ಸಹಜ...
ಹೀಗಾಗಿ ಇಂತಹ ಭಯ ಮತ್ತು ಗಾಬರಿಗಳನ್ನು ದೂರಮಾಡಿ ಮಕ್ಕಳಲ್ಲಿ ಆತ್ಮ ವಿಶ್ವಾಸ ತುಂಬುವ ದೃಷ್ಟಿಯಿಂದ ತಾಲ್ಲೂಕಿನ ಬಟ್ಟೆಮಲ್ಲಪ್ಪದ ಶ್ರೀ ಬಸವನ ಬ್ಯಾಣದ ಅಯ್ಯಪ್ಪ ಮೆಮೋರಿಯಲ್ ಟ್ರಸ್ಟ್ ಹಾಗೂ ಶ್ರೀ ವ್ಯಾಸ ಮಹರ್ಷಿ ಗುರುಕುಲ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಹೊಸನಗರ ಇವರ ಸಹಯೋಗದಲ್ಲಿ ಫೆ.1 ಮತ್ತು 2ರಂದು ವಿಶೇಷ ಕಾರ್ಯಗಾರವನ್ನ ಹಮ್ಮಿಕೊಳ್ಳಲಾಗಿದೆ ಎಂದು ಗುರುಕುಲ ಸಂಸ್ಥಾಪಕ ಅಧ್ಯಕ್ಷ ಮಂಜುನಾಥ್ ಎಸ್. ಬ್ಯಾಣದ ಹೇಳಿದರು.
ಅವರು ಇಂದು ಪಟ್ಟಣದಲ್ಲಿ ನಡೆದ ಸುದ್ದಗೋಷ್ಠಿ ಉದ್ದೇಶಿಸಿ ಮಾತನಾಡಿ, ಎರಡು ದಿನಗಳ ಕಾಲ ತಾಲ್ಲೂಕಿನ ಮೂರು ಕಡೆಗಳಲ್ಲಿ ಈ ಕಾರ್ಯಾಗಾರ ನಡೆಯಲಿದೆ. ಖ್ಯಾತ ಶಿಕ್ಷಣ ತಜ್ಞ, ಅಂತರರಾಷ್ಟ್ರೀಯ ಖ್ಯಾತಿಯ ಮಾನವ ಸಂಪನ್ಮೂಲ ಅಭಿವೃದ್ಧಿ ತರಬೇತುದಾರ ಧನರಾಜ್ ಈ. ಗಂಗಾವತಿ ಕಾರ್ಯಾಗಾರ ನಡೆಸಿಕೊಡಲಿದ್ದಾರೆ  ಎಂದು ಮಾಹಿತಿ ನೀಡಿದರು.
ಹೊಸನಗರ ತಾಲೂಕಿನ ವಿದ್ಯಾರ್ಥಿಗಳು ಕಳೆದ ಸಾಲಿನಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಪ್ರಸಕ್ತ ಸಾಲಿನಲ್ಲೂ ಈ ಸಾಧನೆ ಮುಂದುವರೆಯಬೇಕು. ಶಿಕ್ಷಣ ಇಲಾಖೆ ಈಗಾಗಲೇ ಸಾಕಷ್ಟು ಪ್ರಗತಿಯಲ್ಲಿದೆ. ಅದಕ್ಕೆ ನಮ್ಮ ಸಂಸ್ಥೆಯಿಂದ ಚಿಕ್ಕ ಬೆಂಬಲ ಎಂದರು.
ಫೆ. 1ರಂದು ಬಟ್ಟೆಮಲ್ಲಪ್ಪದ ಸಾರ ಕೇಂದ್ರದ ಸಭಾಂಗಣದಲ್ಲಿ ಬೆಳಿಗ್ಗೆ 9ರಿಂದ ಕಾರ್ಯಾಗಾರ ಆರಂಭವಾಗಲಿದೆ. ಮದ್ಯಾಹ್ನ 3 ಗಂಟೆವರೆಗೂ ನಡೆಯಲಿದೆ. ಕಾರ್ಯಾಗಾರದಲ್ಲಿ 10 ಮತ್ತು. 12ನೇ ತರಗತಿ ವಿದ್ಯಾರ್ಥಿಗಳು ಮತ್ತು ಪೋಷಕರು, ಶಿಕ್ಷಕರಿಗೆ ಭಾಗವಹಿಸಲು ಅವಕಾಶವಿದೆ.
ಫೆ.2ರಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 12.30ರವರೆಗೆ ರಿಪ್ಪನ್ ಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ಶಾಲೆ ವಿಭಾಗದ ಸಭಾಂಗಣದಲ್ಲಿ ಕಾರ್ಯಾಗಾರ ನಡೆಯಲಿದೆ. ಇಲ್ಲಿ ರಿಪ್ಪನ್ ಪೇಟೆಯ ಜಿ. ಆರ್.ಕೆ ಟ್ರಸ್ಟ್ ಹಾಗೂ ಶಾಲಾ ಕಾಲೇಜುಗಳು ಸಹಕಾರ ನೀಡಲಿವೆ.
ಅದೇ ದಿನ ಮಧ್ಯಾಹ್ನ 1ರಿಂದ ಸಂಜೆ 5.30ರವರೆಗೆ ಹೊಸನಗರ ಪಟ್ಟಣದ ಹೋಲಿ ರೆಡಿಮೈರ್ ಸ್ಕೂಲ್ ಸಭಾಂಗಣದಲ್ಲಿ ಕಾರ್ಯಾಗಾರ ನಡೆಯಲಿದೆ. ಇಲ್ಲಿ ಹೋಲಿ ರೆಡಿಮೈರ್ ಹಾಗೂ ಶ್ರೀ ಗುರೂಜಿ ಇಂಟರ್ನ್ಯಾಷನಲ್ ಸ್ಕೂಲ್ ಹಾಗೂ ಇತರೆ ಸಂಘ ಸಂಸ್ಥೆಗಳು ಸಹಕಾರ ನೀಡಲಿವೆ.
ಕಾರ್ಯಾಗಾರದಲ್ಲಿ 10 ಮತ್ತು 12ನೇ ತರಗತಿ ಮಕ್ಕಳಿಗೆ ಮಾತ್ರ ಅವಕಾಶವಿದ್ದು, ಜೊತೆಗೆ ಮಕ್ಕಳಿಗೆ ಸಂಬಂದಿಸಿದ ಪೋಷಕರು, ಶಿಕ್ಷಕ, ಉಪನ್ಯಾಸಕರು ಭಾಗವಹಿಸಬಹುದಾಗಿದೆ.
ಕಾರ್ಯಾಗಾರ ಸಂಪೂರ್ಣ ಉಚಿತವಾಗಿದ್ದು, ಮಕ್ಕಳು ನಿಗದಿತ ಸಮಯಕ್ಕೆ 10ನಿಮಿಷ ಮುಂಚಿತವಾಗಿ ಸ್ಥಳದಲ್ಲಿ ಹಾಜರಿ ಇರಬೇಕು. ಬರುವಾಗ ಪೆನ್ನು, ನೋಟ್ ಬುಕ್ ತರಬೇಕು. ಮೊದಲ ಅರ್ಧ ಗಂಟೆ ನೋಂದಾವಣೆ ಇರುವುದರಿಂದ ಎಲ್ಲರೂ ಸಮಯಕ್ಕೆ ಮುಂಚಿತವಾಗಿ ಇರಬೇಕು.
ಶ್ರೀ ವ್ಯಾಸ ಮಹರ್ಷಿ ಗುರುಕುಲ ತಾಲ್ಲೂಕಿನಲ್ಲಿ ನಿರಂತರ ಸೇವಾ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ. ಕಳೆದ 15 ವರ್ಷಗಳಲ್ಲಿ 14 ಉಚಿತ ನೇತ್ರ ಶಿಬಿರ, ಬೃಹತ್ ಆರೋಗ್ಯ ಶಿಬಿರ, ರಕ್ತದಾನ ಶಿಬಿರಗಳನ್ನು ನಡೆಸಿಕೊಂಡು ಬರುತ್ತಿದೆ. ಜೊತೆಗೆ ತಂದೆ ತಾಯಿ ಇಲ್ಲದ, ಅಥವಾ ಏಕ ಪೋಷಕ ಹಾಗೂ ಪೋಷಕರಿದ್ದೂ ಯಾರೊಬ್ಬರು ದೀರ್ಘ ಕಾಲಿಕ ಅನಾರೋಗ್ಯಕ್ಕೆ ತುತ್ತಾಗಿದ್ದಲ್ಲಿ ಅಂತವರ ಮಕ್ಕಳಿಗೂ ಗುರುಕುಲ ಕಳೆದ 15 ವರ್ಷಗಳಿಂದಲೂ ಉಚಿತ ಶಿಕ್ಷಣ ಯೋಜನೆ ಮುಂದುವರೆಸಿಕೊಂಡು ಬರುತ್ತಿದೆ ಎಂದು ಮಂಜುನಾಥ್ ಎಸ್. ಬ್ಯಾಣದ ತಿಳಿಸಿದರು.
ಈ ಶಿಬಿರದ ಸದುಪಯೋಗವನ್ನು ತಾಲ್ಲೂಕಿನ ಎಲ್ಲಾ ಶಾಲಾ, ಕಾಲೇಜಿನ ಮಕ್ಕಳೂ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.....

WORKSHOP.....


Discover more from Prasarana news

Subscribe to get the latest posts sent to your email.

  • Related Posts

    DEER ACCIDENT:ಕಾರಿಗೆ ಡಿಕ್ಕಿ ಜಿಂಕೆ ಸಾವು…

    ಹೊಸನಗರ: ಪಟ್ಟಣ ಸಮೀಪ ಕಲ್ಲುಹಳ್ಳ ಬಳಿ ಬೈಂದೂರು ರಾಣಿಬೆನ್ನೂರು ರಾಷ್ಟ್ರೀಯ ಹೆದ್ದಾರಿ 766ಸಿ ಯಲ್ಲಿ ಚಲಿಸುತ್ತಿದ್ದ ಕಾರಿಗೆ  ಜಿಂಕೆಯೊಂದು ಡಿಕ್ಕಿ ಹೊಡೆದು ಸಾವನ್ನಪ್ಪಿದ ಘಟನೆ ಶುಕ್ರವಾರ ನಡೆದಿದೆ.ಹೊಸನಗರದಿಂದ ಹೋಗುತ್ತಿದ್ದ ಕಾರಿಗೆ ರಸ್ತೆ ಪಕ್ಕದಿಂದ ರಭಸದಲ್ಲಿ ಓಡಿ ಬಂದ ಜಿಂಕೆ ಡಿಕ್ಕಿ ಹೊಡೆದಿದ್ದು…

    Read more

    BRAHMESHWAR:ಏ.20 ರಂದು ಇತಿಹಾಸ ಪ್ರಸಿದ್ಧ ಶ್ರೀ ವೀರಭದ್ರೇಶ್ವರ ದೇವಸ್ಥಾನದ ನೂತನ ಶಿಲಾಮಯ ದೇಗುಲದ ಅಡಿಗಲ್ಲು ಸಮಾರಂಭ..

    ಹೊಸನಗರ: ಐತಿಹಾಸಿಕ ಹಿನ್ನೆಲೆಯ ಬ್ರಹ್ಮೇಶ್ವರದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ನೂತನ ಶಿಲಾಮಯ ಅಧಿಷ್ಠಾನ ಅಡಿಗಲ್ಲು ಸಮಾರಂಭ ನಾಳೆ ಬೆಳಿಗ್ಗೆ 10.30 ಕ್ಕೆ ಸಂಸದರಾದ ಬಿ ವೈ ರಾಘವೇಂದ್ರ ನೆರವೇರಿಸಲಿದ್ದಾರೆ ಎಂದು ಶ್ರೀ ವೀರಭದ್ರೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಶ್ರೀ ಸುಧೀರ್…

    Read more

    Leave a Reply

    Discover more from Prasarana news

    Subscribe now to keep reading and get access to the full archive.

    Continue reading