SAVE THE SHARAVATI: ಶರಾವತಿ ನದಿ ಕಣಿವೆ ಉಳಿವಿಗಾಗಿ ಮತ್ತೊಂದು ಹೋರಾಟ…
ಮಾರ್ಚ್ 19ರಂದು ಶಿವಮೊಗ್ಗದಲ್ಲಿ ಪ್ರತಿಭಟನೆ…

ಶಿವಮೊಗ್ಗ: ಶರಾವತಿ ಅಂತರ್ಗತ ಜಲವಿದ್ಯುತ್ ಯೋಜನೆ ಮತ್ತು ಶರಾವತಿ ನದಿ ನೀರನ್ನು ಬೆಂಗಳೂರಿಗೆ ಕೊಂಡಯುವ ಯೋಜನೆ ವಿರುದ್ಧ ಶರಾವತಿ ನದಿ ಕಣಿವೆ ಉಳಿಸಿ ಹೋರಾಟ ಒಕ್ಕೂಟ ಮಾರ್ಚ್ 19ರಂದು ಶಿವಮೊಗ್ಗದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಪರಿಸರವಾದಿ ಅಖಿಲೇಶ್ ಚಿಪ್ಲಿ ತಿಳಿಸಿದರು.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಸರಿಯಾದ ನೀತಿ ನಿಯಮವನ್ನ ಅನುಸರಿಸದೆ ಅಂತರ್ಗತ ಜಲವಿದ್ಯುತ್ ಉತ್ಪಾದನೆ ಯನ್ನ ಮಾಡಲು ಕೆಪಿಟಿಸಿಎಲ್ ಮುಂದಾಗಿದೆ. ಆರ್ ಟಿಐ ನಲ್ಲಿ ಡಿಪಿಆರ್ ಕೇಳಿದಾಗ ವೈಯುಕ್ತಿಕ ಎಂದು ಹೇಳಲಾಗಿದೆ.ಯೋಜನೆಯನ್ನ  ಕೃತಿಕ್ಷೌರ್ಯ ಮಾಡಲಾಗುತ್ತದೆ ಎಂದು ಕೆಪಿಟಿಎಸ್ ಹೇಳಿದೆ. ಆಯೋಗದ ಮುಂದೆ ಅಪೀಲ್ ಆಗಲಿದ್ದು ಯೋಜನೆ ಡಿಪಿಆರ್ ಕೈಸೇರಲಿದೆ ಎಂದ ಅವರು   ಕೆಪಿಸಿಎಲ್ ಉದ್ದಕ್ಕೂ ಸುಳ್ಳು ಹೇಳಿಕೊಂಡು ಬರುತ್ತಿದೆ.
ಹೊನ್ನಾವರದಲ್ಲಿ ತರಕಾರಿ ಬೆಳೆಯಲು ಸಿಹಿನೀರು ಬೇಕು. ಈ ನದಿಯ ನೀರು ಬಳಕೆ ಮಾಡಲಾಗುತ್ತಿದೆ. ಸಾವಿರಾರು ಕುಟುಂಬ ಬೀದಿಪಾಲಾಗಿದೆ. ಬೆಂಗಳಯರಿನ ಮಾಲ್ ಗೆ ಜಗಮಗಿಸುವ ವಿದ್ಯುತ್ ಬೇಕಿದೆ ಅಷ್ಟೆ. ನ್ಯಾಷನಲ್ ವೈಲ್ಡ್ ಲೈಫ್ ಅನುಮೋದನೆ ನೀಡಿದೆ. ಎರಡು ಎರಡು ಬಾರಿ ಸ್ಥಳಪರಿಶೀಲನರ ಬಡೆಸಿ ಆರ್ ಎಫ್ ಒಗಳ ವರದಿ ತಿರಸ್ಕರಿಸಿ ಒಪ್ಪಿಗೆ ನೀಡಿದೆ.
ಎತ್ತಿನಹೊಳೆ ಯೋಜನೆಯಂತೆ ಇದೊಂದು ಕರೆಯುವ ಎಮ್ಮೆಯ ಯೋಜನೆಯಾಗಿದೆ. ತಮಿಳುನಾಡಿನಲ್ಲಿ ಒಂದು ಮರವನ್ನ ನಾಶ ಮಾಡದೆ ಅಂತರ್ಜಲ ವಿದ್ಯುತ್ ಯೋಜನೆ ನಿರ್ಮಿಸಲಾಗಿದೆ. ಅದನ್ನ ಬಳಸದೆ ಪಂಪ್ಡ ಯೋಜನೆ ಮಾಡಲಾಗಿದೆ. ಬೆಂಗಳೂರಿಗೆ ಸರಬರಾಜು ಮಾಡಲು ಕಂಬ ಹೇಗೆ ಹಾಕ್ತೀರಿ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲವಾಗಿದೆ. ತೆರಿಗೆ ಹಣ ದುರುಪಯೋಗ ಮಾಡುವ ಯೋಜನೆ ಆಗಿದೆ.

ವಿದ್ಯುತ್ ಉತ್ಪಾದನೆಗೆ ಪರ್ಯಾಯ ವಿದ್ಯುತ್ ಉತ್ಪಾದನೆಗೆ ಅವಕಾಶವಿದೆ. ಪರಿಸರ ನಾಶದ ಯೋಜನೆಯೇ ಸರ್ಕಾರಕ್ಕೆ ಬೇಕಿದೆ. ಹಾಗಾಗಿ ಹೋರಾಟವನ್ನ ಮಾ.19 ರಂದು ಗೋಪಿ ವೃತ್ತದಲ್ಲಿ ಬಹಿರಂಗ ಸಭೆ ನಡೆಸಲಾಗುವುದು. ಮೂಲಗದ್ದೆ, ಆನಂದಪುರ ಬೆಕ್ಕಿನ ಕಲ್ಮಠ ಶ್ರೀಗಳು ಭಾಗಿಯಾಗಲಿದ್ದಾರೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು ಎಂದು ಮನವಿ ಮಾಡಿದರು...

SAVE THE SHARAVATI...


Discover more from Prasarana news

Subscribe to get the latest posts sent to your email.

  • Related Posts

    SECOND P U C:              ವಾಣಿಜ್ಯ ವಿಭಾಗದಲ್ಲಿ ಪ್ರಜ್ವಲ್ ಜಿಲ್ಲೆಗೆ ಪ್ರಥಮ..
    ತಾಲೂಕು ಒಕ್ಕಲಿಗ ಸಂಘದಿಂದ ಸನ್ಮಾನ..

    ಹೊಸನಗರ: ದ್ವಿತೀಯ ಪಿಯುಸಿ ಯ ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ತಾಲೂಕಿನ ನಗರ ಹೋಬಳಿಯ ಪ್ರಜ್ವಲ್ ಹಿರಿಮನೆ ಅವರನ್ನು ತಾಲೂಕು ಒಕ್ಕಲಿಗರ ಸಂಘದ ಪರವಾಗಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಒಕ್ಕಲಿಗ ಸಂಘದ ಅಧ್ಯಕ್ಷರಾದ ಉಳೆಗದ್ದೆ ದೇವೇಂದ್ರಪ್ಪ…

    Read more

    RAMOTSAVA:ರಾಮಚಂದ್ರಾಪುರದ ವೈಭವದ ರಾಮೋತ್ಸವಕ್ಕೆ ತೆರೆ…

    ಹೊಸನಗರ : ಪರೀಕ್ಷೆಗೆ ನಾವು ಹೆದರಬಾರದು ಏಕೆಂದರೆ ಪರೀಕ್ಷೆ ಎನ್ನುವುದು ವಿದ್ಯಾರ್ಥಿಯೊಬ್ಬ ಉತ್ತೀರ್ಣಗೊಂಡು ಮುಂದಿನ ಮತ್ತು ಮೇಲಿನ ತರಗತಿಗಳಿಗೆ ಅರ್ಹತೆ ಪಡೆಯುವುದಕ್ಕೆ ಅತ್ಯಂತ ಅವಶ್ಯ ಅಂತಯೇ ಪ್ರತಿಯೊಂದು ವ್ಯಕ್ತಿಯ ಜೀವನದಲ್ಲಿ ಮತ್ತು ಪ್ರತಿಯೊಂದು ಉತ್ತಮ ಕಾರ್ಯದಲ್ಲಿ ಪರೀಕ್ಷೆ ಎನ್ನುವ ಸವಾಲು ಎದುರಿಸಿದಾಗ…

    Read more

    Leave a Reply

    Discover more from Prasarana news

    Subscribe now to keep reading and get access to the full archive.

    Continue reading