

ಹೊಸನಗರ:ಉತ್ತಮ ಆಹಾರ ಪದ್ಧತಿ ಅಳವಡಿಸಿಕೊಳ್ಳುವುದರ ಜತೆಗೆ ದಿನನಿತ್ಯ ಒಂದಿಲ್ಲೊಂದು ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಡಾ ರಾಕೇಶ್ ಗ್ರಾಮಸ್ಥರಿಗೆ ಸಲಹೆಯನ್ನ ನೀಡಿದರು.
ಬಟ್ಟೆ ಮಲ್ಲಪ್ಪದ ಸಾರ ಸಂಸ್ಥೆಯಲ್ಲಿ ಮನ್ವಿತಾ ಹೆಲ್ತ್ ಕೇರ್ ಚೆನ್ನೈ ಹಾಗೂ ಸಾರ ಸಂಸ್ಥೆ ದೊಂಬೆಕೊಪ್ಪ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ಶಿಬಿರವನ್ನು ಉದ್ದೇಶಿಸಿ ಅವರು ಮಾತನಾಡಿದರು. ಶಿಬಿರದಲ್ಲಿ ಬಿ ಪಿ, ಶುಗರ್, ಇಸಿಜಿ ತಪಾಸಣೆ ನಡೆಸಿ ಸಲಹೆಗಳನ್ನು ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿಗಳಾದ ಡಾ|| ರಾಖೇಶ್ ಹಾಗೂ ಅವರ ತಂಡ ಬಟ್ಟೆಮಲ್ಲಪ್ಪ ಸುತ್ತಮತ್ತಲಿನ ನೂರಾರು ಗ್ರಾಮಸ್ಥರ ಆರೋಗ್ಯ ತಪಾಸಣೆ ನಡೆಸಿದರು
ಈ ಶಿಬಿರದಲ್ಲಿ ಮನ್ವಿತಾ ಹೆಲ್ತ್ ಕೇರ್ ಚೆನ್ನೈನ ಮಾದವ್ ಭಟ್, ಕೆ ಜಿ ಮಂಜುನಾಥ್ ಪಟೇಲ್, ಡಾ|| ಪತಂಜಲಿ, ಮೃತುಂಜಯ,ಕೆ ವಿ ಸುಬ್ಬಣ್ಣ ರಂಗ ಸಮೂಹದ ಪ್ರಸನ್ನ ಹುಣಸೆಕೊಪ್ಪ, ಗಣಪತಿ ಹೆಗಡೆ ನಂದೀತಳೆ, ನಾಗೇಶ್ ಕೆ ಜಿ, ಸಾರ ಸಂಸ್ಥೆಯ ಧನುಷ್ ಕುಮಾರ್, ಕುಮಾರ್, ಶಿವಕುಮಾರ್,ಆದರ್ಶ, ಸಿಂಚನ, ಆರೋಗ್ಯ ಸೇವಾ ನಿರತರು ಜೊತೆ ಗೂಡಿ ಶಿಬಿರವನ್ನು ಯಶಸ್ವಿಗೊಳಿಸಿದರು...
SARA:HOSANAGARA...
Discover more from Prasarana news
Subscribe to get the latest posts sent to your email.