

ಹೊಸನಗರ: ಸಾರ ಸಂಸ್ಥೆಯ ಹತ್ತು ವರ್ಷ ಪೂರೈಸಿದ ಅಂಗವಾಗಿ ಮೂರು ದಿನಗಳ ಕಾಲ ಆಯೋಜಿಸಲಾಗಿದ್ದ ಕಾರ್ಯಕ್ರಮಗಳು ಮತ್ತು ಸಾರ ಸಂಸ್ಥೆಯ ಪ್ರಧರ್ಶನಾಗಾರಗಳ ಉದ್ಘಾಟನೆಯನ್ನು ಸದಾನಂದ ಶಿವಯೋಗಾಶ್ರಮ ಮೂಲೆಗದ್ದೆಯ ಶ್ರೀ ಶ್ರೀ ಅಭಿನವ ಚನ್ನಬಸವ ಮಹಾಸ್ವಾಮಿಗಳು ಮತ್ತು ವಿಧಾನ ಪರಿಷತ್ ಸದಸ್ಯರಾದ ಶ್ರೀ ಡಾ||ಧನಂಜಯ ಸರ್ಜಿಯವರು ಶನಿವಾರ ನೆರವೇರಿಸಿದರು.
ಇದಕ್ಕೂ ಮೊದಲು ಬಟ್ಟೆಮಲ್ಲಪ್ಪದಿಂದ ಸಾರ ಸಂಸ್ಥೆಯವರೆಗೂ, ಸಾರ ಸಂಸ್ಥೆ ಜೀರ್ಣೋದ್ಧಾರಗೊಳಿಸಿದ ಎಲ್ಲಾ ಕೆರೆ ಫಲಾನುಭವಿಗಳಿಂದ ಜಲ ಕುಂಭ ಮೆರವಣಿಗೆಯನ್ನು ಜಂಡೆ ವಾದ್ಯದ ಮೂಲಕತರಲಾಯಿತು. ನಂತರ ಸಾರ ಸಂಸ್ಥೆ ಯ ಪ್ರದರ್ಶನಾಗರಗಳನ್ನು ಉದ್ಘಾಟನೆ ಯನ್ನು ಅಥಿತಿಗಳಿಂದ ದೀಪ ಬೆಳಗುವುದರ ಮೂಲಕ ನಡೆಸಲಾಯಿತು. ನಂತರ ಕೆರೆ ಗ್ರಾಮಸ್ಥರು ತಂದ ಎಲ್ಲಾ ಜಲ ಕುಂಭಗಳನ್ನು, ಮೂಲೆಗದ್ದೆ ಶ್ರೀ ಗಳ ಮೂಲಕ ಸಾರ ಸಂಸ್ಥೆ ಗೆ ಹಸ್ತಾಂತರಿಸಲಾಯಿತು.
ಈ ಸಂಧರ್ಭದಲ್ಲಿ ಸಾರ ಸಂಸ್ಥೆ ಅಧ್ಯಕ್ಷರಾದ ಗುರುಪಾದಪ್ಪ ಗೌಡ್ರು, ಸಂಸ್ಥಾಪಕರಾದ ಅರುಣ್ ಕುಮಾರ್ ಸಾರ ಸಂಸ್ಥೆ ಜೀರ್ಣೋದ್ಧಾರ ಮಾಡಿದ ಫಲಾನುಭವಿ ಗ್ರಾಮಸ್ಥರು ಭಾಗವಹಿಸಿದ್ದರು.
SARA ORGANIZATION..
Discover more from Prasarana news
Subscribe to get the latest posts sent to your email.