PRATIBHA PURASKARA: ಸದಸ್ಯರುಗಳ ಸಹಕಾರವಿದ್ದರೆ ಮಾತ್ರ ಸಂಘಟನೆ ಯಶಸ್ವಿಯಾಗಲು ಸಾಧ್ಯ: ಅಶೋಕ್ ಕುಮಾರ್ ಶೆಟ್ಟಿ…

ಹೊಸನಗರ: ಒಂದು ಸಮುದಾಯ ಅಥವಾ ಸಂಘಟನೆ ಯಶಸ್ವಿಯಾಗಿ ಮುನ್ನಡೆಯಬೇಕಾದರೆ ಅದರಲ್ಲಿ ಇರುವಂತಹ ಸದಸ್ಯರುಗಳ ಸಹಕಾರ ಸಂಪೂರ್ಣವಾಗಿರಬೇಕು ಎಂದು  ಬಂಟರ ಸಂಘ ಬೆಂಗಳೂರು ಇದರ ಅಧ್ಯಕ್ಷರಾದ ಅಶೋಕ್ ಕುಮಾರ್ ಶೆಟ್ಟಿ ಎಂ ತಿಳಿಸಿದರು.
ಹೊಸನಗರ ಪಟ್ಟಣದ ಗಣಪತಿ ದೇವಸ್ಥಾನದ ಆವರಣದಲ್ಲಿ ಬಂಟರ ಯಾನೆ ನಾಡವರ ಸಂಘ ಹೊಸನಗರ ಹಾಗೂ ಬಂಟರ ಯಾನೆ ನಾಡವರ ಸಂಘ ಬೆಂಗಳೂರು ಸಂಯುಕ್ತಾಶ್ರಯದಲ್ಲಿ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ, ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು
ಬಂಡರ ಸಂಘದಲ್ಲಿ ಹಿಂದೆ ಸದಸ್ಯರಾಗಿ ಎಂದು ಮನೆ-ಮನೆಗೆ ಭೇಟಿ ನೀಡಿ ಕರೆದರೂ ಯಾರು ಮುಂದೆ ಬರುತ್ತಿರಲಿಲ್ಲ ಆದರೆ ಈಗ ಬಂಟರ ಸಂಘದ ನಿರ್ದೇಶಕರಾಗಬೇಕಾದರೆ ಚುನಾವಣೆ ಮೂಲಕವಾಗಿ ಆಯ್ಕೆಯಾಗಬೇಕಾದ ಸಂದರ್ಭ ಬಂದಿದೆ. ಜೊತೆಗೆ ಈಗ 18 ಸಾವಿರಕ್ಕಿಂತಲೂ ಹೆಚ್ಚು ಸದಸ್ಯರು ನಮ್ಮ ಸಂಘದಲ್ಲಿದ್ದು ಸಮುದಾಯದವರಿಗೆ ಆರ್ಥಿಕವಾಗಿ ಶೈಕ್ಷಣಿಕವಾಗಿ ಮುತ್ತೇಜನವನ್ನು ನೀಡುವಂತಹ ಕೆಲಸಗಳನ್ನು ಸಂಘಟನೆ ಮಾಡುತ್ತಿದ್ದು. ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಹಸ್ತ ನೀಡುತ್ತಿದೆ. ನಾವು ಈ ತಾಲ್ಲೂಕಿನಲ್ಲಿ ಅಲ್ಪ ಸಂಖ್ಯಾತರಾಗಿರಬಹುದು ಅದರೇ ಯಾವುದರಲ್ಲಿ ಹಿಂದೆ ಬಿದ್ದಿಲ್ಲ ಬಂಟರ ಸಂಘ ಎಂದೆಂದಿಗೂ ಬಡವರ ಆರ್ಥಿಕವಾಗಿ ಹಿಂದುಳಿದವರ ಹಾಗೂ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದು ಇದರ ಉಪಯೋಗವನ್ನು ಎಲ್ಲ ಸದಸ್ಯರು ಪಡೆದು ಕೊಳ್ಳುವ ಜೊತೆಗೆ ತಮ್ಮ ಮಕ್ಕಳನ್ನ ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳುವ ಮೂಲಕ ಉತ್ತಮ ಶಿಕ್ಷಣವನ್ನು ನೀಡಬೇಕು ಎಂದರು
ವಿದ್ಯಾರ್ಥಿವೇತನ ಮತ್ತು ಪ್ರಶಸ್ತಿ ಸಮಿತಿಯ ಬೆಂಗಳೂರಿನ ಬಂಟರ ಸಂಘದ ಅಧ್ಯಕ್ಷರಾದ ಉಮೇಶ ಕುಮಾರ್‌ ಮಾತನಾಡಿ, ನಾವು ಪ್ರತಿ ವರ್ಷ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರಶಸ್ತಿ ನೀಡುವುದರ ಜೊತೆಗೆ ಓದುತ್ತಿರುವ ವಿದ್ಯಾರ್ಥಿಗಳಿಗೆ 2 ಲಕ್ಷದವರೆಗೆ ಸುಮಾರು 60 ವಿದ್ಯಾರ್ಥಿಗಳಿಗೆ ಬೆಂಗಳೂರು ಸಂಘದಿಂದ ಧನ ಸಹಾಯ ಕಾರ್ಯಕ್ರಮವನ್ನು ಅಧ್ಯಕ್ಷರಾದ ಅಶೋಕಕುಮಾರ್‌ ನೇತೃತ್ವದಲ್ಲಿ ನಡೆಯಲಿದ್ದು ಈ ಸಹಾಯ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ನೀಡಲಾಗುತ್ತಿದೆ ಇದರ ಜೊತೆಗೆ ಡಿಗ್ರಿ ಮುಗಿಸಿ ಮುಂದಿನ ವಿದ್ಯಾಬ್ಯಾಸಕ್ಕಾಗಿ ಲೋನ್ ರೂಪದಲ್ಲಿ ಯಾವುದೇ ಬಡ್ಡಿ ರಹಿತ ಸಾಲವನ್ನು ಓದುವ ಉದ್ದೇಶದಿಂದ ನೀಡಲಾಗುತ್ತಿದೆ ಅರ್ಥಿಕವಾಗಿ ಹಿಂದುಳಿದ ಕುಟುಂಬಗಳನ್ನು ಆಯ್ಕೆ ಮಾಡಿಕೊಂಡು ಈ ಸಹಾಯ ಹಸ್ತ ನೀಡಲಾಗುತ್ತಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಸಮುದಾಯದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಬೆಂಗಳೂರು ಬಂಟರ ಸಂಘದ ನಿರ್ದೇಶಕಿ ಗೀತಾ ಶೆಟ್ಟಿ, ತಾಲ್ಲೂಕು ಬಂಟರ ಸಂಘದ ಅಧ್ಯಕ್ಷ ದಿವಾಕರ ಶೆಟ್ಟಿ, ಉಪಾಧ್ಯಕ್ಷ ನಗರ ಚಂದ್ರಶೇಖರ ಶೆಟ್ಟಿ, ಮುಡುಬಾ ಶಿವರಾಮ್ ಶೆಟ್ಟಿ, ಸಂಪೆಕಟ್ಟೆ ಚಂದ್ರಶೇಖರ ಶೆಟ್ಟಿ, ಕಾರ್ಯದರ್ಶಿ ಶಿಕ್ಷಕ ನಾಗರಾಜ್, ವಕೀಲ ಮೋಹನ್ ಶೆಟ್ಟಿ ಹಾಗೂ ಹೊಸನಗರ ತಾಲ್ಲೂಕಿನ ಕಾರ್ಯಕಾರಿ ಸಮಿತಿಯ ಎಲ್ಲ ನಿರ್ದೆಶಕರು ಹಾಗೂ ಸದಸ್ಯರು  ಉಪಸ್ಥಿತರಿದ್ದರು..

PRATIBHA PURASKARA...


Discover more from Prasarana news

Subscribe to get the latest posts sent to your email.

  • Related Posts

    DEER ACCIDENT:ಕಾರಿಗೆ ಡಿಕ್ಕಿ ಜಿಂಕೆ ಸಾವು…

    ಹೊಸನಗರ: ಪಟ್ಟಣ ಸಮೀಪ ಕಲ್ಲುಹಳ್ಳ ಬಳಿ ಬೈಂದೂರು ರಾಣಿಬೆನ್ನೂರು ರಾಷ್ಟ್ರೀಯ ಹೆದ್ದಾರಿ 766ಸಿ ಯಲ್ಲಿ ಚಲಿಸುತ್ತಿದ್ದ ಕಾರಿಗೆ  ಜಿಂಕೆಯೊಂದು ಡಿಕ್ಕಿ ಹೊಡೆದು ಸಾವನ್ನಪ್ಪಿದ ಘಟನೆ ಶುಕ್ರವಾರ ನಡೆದಿದೆ.ಹೊಸನಗರದಿಂದ ಹೋಗುತ್ತಿದ್ದ ಕಾರಿಗೆ ರಸ್ತೆ ಪಕ್ಕದಿಂದ ರಭಸದಲ್ಲಿ ಓಡಿ ಬಂದ ಜಿಂಕೆ ಡಿಕ್ಕಿ ಹೊಡೆದಿದ್ದು…

    Read more

    BRAHMESHWAR:ಏ.20 ರಂದು ಇತಿಹಾಸ ಪ್ರಸಿದ್ಧ ಶ್ರೀ ವೀರಭದ್ರೇಶ್ವರ ದೇವಸ್ಥಾನದ ನೂತನ ಶಿಲಾಮಯ ದೇಗುಲದ ಅಡಿಗಲ್ಲು ಸಮಾರಂಭ..

    ಹೊಸನಗರ: ಐತಿಹಾಸಿಕ ಹಿನ್ನೆಲೆಯ ಬ್ರಹ್ಮೇಶ್ವರದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ನೂತನ ಶಿಲಾಮಯ ಅಧಿಷ್ಠಾನ ಅಡಿಗಲ್ಲು ಸಮಾರಂಭ ನಾಳೆ ಬೆಳಿಗ್ಗೆ 10.30 ಕ್ಕೆ ಸಂಸದರಾದ ಬಿ ವೈ ರಾಘವೇಂದ್ರ ನೆರವೇರಿಸಲಿದ್ದಾರೆ ಎಂದು ಶ್ರೀ ವೀರಭದ್ರೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಶ್ರೀ ಸುಧೀರ್…

    Read more

    Leave a Reply

    Discover more from Prasarana news

    Subscribe now to keep reading and get access to the full archive.

    Continue reading