

ಹೊಸನಗರ: ಮೊಬೈಲ್ ನೆಟ್ವರ್ಕ್ ಸಮಸ್ಯೆ ಬಗೆಹರಿಸುವಂತೆ ಇಂದು ವಾರಂಬಳ್ಳಿ ಗ್ರಾಮಸ್ಥರು ಹಮ್ಮಿಕೊಂಡಿದ್ದ ಪಾದಯಾತ್ರೆ ಮತ್ತು ಪ್ರತಿಭಟನೆಯನ್ನ ಬಿಎಸ್ಎನ್ಎಲ್ DJM ಹಾಗೂ ತಾಲೂಕು ದಂಡಾಧಿಕಾರಿಗಳು ಭರವಸೆ ಮರೆಗೆ ಕೈ ಬಿಡಲಾಯಿತು.
ಇದಕ್ಕೂ ಮೊದಲು ವಾರಂಬಳ್ಳಿಯಿಂದ ಹೊಸನಗರ ತಾಲೂಕು ಕಚೇರಿ ಅವರಿಗೆ ಪಾದಯಾತ್ರೆ ಮೂಲಕ ಆಗಮಿಸಿದ ಗ್ರಾಮಸ್ಥರು ತಾಲೂಕು ಕಚೇರಿ ಮುಂಭಾಗ ಜಮಾಯಿಸಿ ಬಿಎಸ್ಎನ್ಎಲ್ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು ಬಳಿಕ ಪ್ರತಿಭಟನೆಯನ್ನ ಉದ್ದೇಶ ಮಾತನಾಡಿದ ನೆಟ್ವರ್ಕ್ ಹೋರಾಟ ಸಮಿತಿಯ ಅಧ್ಯಕ್ಷ ಶ್ರೀನಿವಾಸ್ ವಾರಂಬಳ್ಳಿ ಗ್ರಾಮಸ್ಥರು ತಮಗೆ ಬೇಕಿರುವ ಪ್ರತಿಯೊಂದು ಮೂಲಸೌಕರ್ಯವನ್ನು ಪ್ರತಿಪಟಿಸುವ ಮೂಲಕವೇ ಪಡೆಯಬೇಕಾದಂತ ಅನಿವಾರ್ಯತೆ ಉಂಟಾಗಿದೆ ಅಧಿಕಾರಿಗಳಿಗೆ ಶಾಸಕರಿಗೆ ಸಂಸದರಿಗೆ ನಮ್ಮ ಗ್ರಾಮದ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲದಿರುವುದು ನಮ್ಮ ದೌರ್ಭಾಗ್ಯ ಈ ನೆಟ್ವರ್ಕ್ ಸಮಸ್ಯೆಗಾಗಿ ಎಂಟು ವರ್ಷಗಳಿಂದ ನಿರಂತರವಾಗಿ ಪ್ರತಿಭಟನೆಯನ್ನು ಮಾಡುತ್ತಾ ಬಂದಿದ್ದೇವೆ ಇಂದಿಗೂ ಸಹ ಅದು ಸಮಸ್ಯೆಯಾಗಿಯೇ ಉಳಿದಿದೆ ಈ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ ಸಮಸ್ಯೆ ಶೀಘ್ರ ಬಗೆಹರಿಯದಿದ್ದಲ್ಲಿ ಮುಂದೆ ಇನ್ನು ಉಗ್ರವಾದ ಹೋರಾಟವನ್ನು ನಾವು ಕೈಗೊಳ್ಳಲಿದ್ದೇವೆ ಎಂದು ಎಚ್ಚರಿಸಿದರು.
ಬಳಿಕ ಮಾತನಾಡಿದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸುರೇಶ್ ಸ್ವಾಮಿ ರಾವ್ ಈಗ ನಾವು ಕೇವಲ ವಾರಂಬಳ್ಳಿ ಇಂದ ಹೊಸನಗರ ತಾಲೂಕು ಕಚೇರಿಯವರಿಗೆ ಪಾದಯಾತ್ರೆಯನ್ನ ಮಾಡಿದ್ದು ಇನ್ನೂ ಸಹ ಅಲ್ಲಿ ನೆಟ್ವರ್ಕ್ ಸಮಸ್ಯೆ ಬಗೆಹರಿಯದಿದ್ದಲ್ಲಿ ಶಿವಮೊಗ್ಗದಲ್ಲಿರುವ ಬಿಎಸ್ಎನ್ಎಲ್ ಕಚೇರಿಗೆ ಪಾದಯಾತ್ರೆಯ ಮೂಲಕ ತೆರಳಿ ಮುತ್ತಿಗೆಯನ್ನು ಹಾಕುವ ಎಚ್ಚರಿಕೆಯನ್ನು ನೀಡಿದರು.
ಬಳಿಕ ಸ್ಥಳಕ್ಕೆ ಆಗಮಿಸಿದ ಹೊಸನಗರ ತಾಲೂಕು ಬಿಎಸ್ಎನ್ಎಲ್ ಅಧಿಕಾರಿಗಳು ಗ್ರಾಮಸ್ಥರ ಮನವಲಿಕೆಗೆ ಮುಂದಾದರು ಈ ಸಂದರ್ಭದಲ್ಲಿ ಅಧಿಕಾರಿಗಳು ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ಏರ್ಪಟ್ಟು ಕೆಲ ಹೊತ್ತುಗಳ ಕಾಲ ಪರ ವಿರೋಧ ಚರ್ಚೆಗಳು ನಡೆದವು ಬಳಿಕ ಗ್ರಾಮಸ್ಥರು ಬಿಎಸ್ಎನ್ಎಲ್ ಡಿಜೆ ಎಂ ಪ್ರತಿಭಟನಾ ಸ್ಥಳಕ್ಕೆ ಬರಬೇಕೆಂದು ಆಗ್ರಹಿಸಿದರು ಅವರು ರಜೆಯಲ್ಲಿದ್ದು ಬರಲು ಸಾಧ್ಯವಿಲ್ಲ ಎಂದು ಅಲ್ಲಿದ್ದ ಅಧಿಕಾರಿಗಳು ತಿಳಿಸಿದಾಗ ದೂರವಾಣಿ ಮೂಲಕ ನಮ್ಮೊಂದಿಗೆ ಮಾತನಾಡಿಸಿ ಎಂದು ಗ್ರಾಮಸ್ಥರು ಒತ್ತಾಯಿಸಿದರು..
ತಿಂಗಳೊಳಗೆ ಟವರ್ ನಿರ್ಮಾಣ ಭರವಸೆ.
ಗ್ರಾಮಸ್ಥರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಡಿಜೆಎಂ ಅಧಿಕಾರಿ ಕೃಷ್ಣ ಮೊಗೇರ ಬಹಳಷ್ಟು ತಾಂತ್ರಿಕ ದೋಷಗಳಿಂದ ಟವರ್ ನಿರ್ಮಾಣ ಕಾಮಗಾರಿ ವಿಳಂಬವಾಗಿದ್ದು ಒಂದು ತಿಂಗಳ ಒಳಗಾಗಿ ಕಾಮಗಾರಿಯನ್ನು ಆರಂಭಿಸಲಿದ್ದೇವೆ. ಜೊತೆಗೆ ಈ ಕುರಿತಾಗಿ ಸಂಸದರ ಗಮನಕ್ಕೆ ತಂದು ಅವರ ಮೂಲಕ ಒತ್ತಡವನ್ನು ಹಾಕಿಸಿ ಕಾಮಗಾರಿಯನ್ನ ಬೇಗ ಪೂರ್ಣಗೊಳಿಸುತ್ತೇನೆ ಎಂದು ಭರವಸೆಯನ್ನು ನೀಡಿದ್ದಲ್ಲದೆ ಪ್ರತಿಭಟನೆಯನ್ನು ಕೈಬಿಡುವಂತೆ ಮನವಿಯನ್ನು ಮಾಡಿದರು ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಮಸ್ಥರು ನಿಮ್ಮ ಭರವಸೆಯ ಮೇಲೆ ಪ್ರತಿಭಟನೆಯನ್ನು ಕೈಬಿಡುತ್ತಿದ್ದು ನೀವು ತಿಳಿಸಿದ ಸಮಯದೊಳಗೆ ಕಾಮಗಾರಿ ಆರಂಭವಾಗದಿದ್ದಲ್ಲಿ ನಿಮ್ಮ ಕಚೇರಿಗೆ ಮುತ್ತಿಗೆಯನ್ನ ಹಾಕುವ ಎಚ್ಚರಿಕೆಯನ್ನು ನೀಡಿ ಪ್ರತಿಭಟನೆಯನ್ನ ಕೈ ಬಿಟ್ಟರು..ಸುಧೀಂದ್ರ ಪಾಂಡಿತ್, ಕೃಷ್ಣಮೂರ್ತಿ, ನಗರ ನಿತಿನ್, ವಿನಾಯಕ್ ವಾರಂಬಳ್ಳಿ, ದೇವಾನಂದ್, ಗಣಪತಿ ಬೆಳಗೋಡು, ಮಂಜುನಾಥ್ ಹಾಗೂ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು
MOBILE NETWORK..
Discover more from Prasarana news
Subscribe to get the latest posts sent to your email.