MANJUNATH G S: ಅಗಲಿದ ಯೋಧನಿಗೆ ಕಂಬನಿ ಮಿಡಿದ ಮಲೆನಾಡು…..
ಸಾವಿರಾರು ಜನರಿಂದ ಯೋಧನಿಗೆ ಅಂತಿಮ ನಮನ..

ಹೊಸನಗರ: ತರಬೇತಿ ವೇಳೆ ಪ್ಯಾರಾಚೂಟ್ ಅಪಘಾತದಿಂದ  ಹುತಾತ್ಮರಾದ ವಾರಂಟ್ ಆಫೀಸರ್ ಜಿಎಸ್ ಮಂಜುನಾಥ್ ಅವರ ನಿಧನಕ್ಕೆ ಇಡೀ ಮಲೆನಾಡು ಕಂಬನಿ ಮಿಡಿದಿದೆ.
ಮಂಜುನಾಥ್ ರವರ ಪಾರ್ಥಿವ ಶರೀರ ಮುಂಜಾನೆ11.30 ಕ್ಕ್ ಸೇನಾ ವಾಹನದಲ್ಲಿ ಹೊಸನಗರ ಪಟ್ಟಣವನ್ನ ಪ್ರವೇಶಿಸಿತು ಅವರ ಪಾರ್ಥಿವ ಶರೀರ ಆಗಮನಕ್ಕು ಮುನ್ನವೇ ಕೊಡಚಾದ್ರಿ ಕಾಲೇಜು ಸಮೀಪ ಸಾವಿರಾರು ಜನರು ಸೇರಿದ್ದು ಪಾರ್ಥಿವ ಶರೀರ ಆಗಮನದ ಬಳಿಕ ಮಂಜುನಾಥ್ ರವರ ಪಾರ್ಥಿವ ಶರೀರ ವಿದ್ದಾ ತೆರೆದ ವಾಹನದ ಜೊತೆಗೆ ಸಾವಿರಾರು ಮಂದಿ ಮೆರವಣಿಗೆಯ ಮೂಲಕ ಅವರ ಹುಟ್ಟೂರ ಕಡೆಗೆ ಹೆಜ್ಜೆಯನ್ನು ಹಾಕಿದರು.


ದಾರಿ ಉದ್ದಕ್ಕೂ ಸಾರ್ವಜನಿಕರು ಶಾಲಾ ಮಕ್ಕಳು ಹೂವುಗಳನ್ನ ಹಾಕುವ ಮೂಲಕ ಅಗಲಿದ ಯೋಧನಿಗೆ ನಮನವನ್ನ ಸಲ್ಲಿಸಿದರು ಸರ್ಕಾರದ ಪರವಾಗಿ ಶಾಸಕ ಬೇಳೂರು ಗೋಪಾಲಕೃಷ್ಣ ಮತ್ತು ತಾಲೂಕು ದಂಡಾಧಿಕಾರಿಗಳಾದ ರಶ್ಮಿ ಹಾಲೇಶ್ ಹಾಗೆ ಕಾಂಗ್ರೆಸ್ ಮುಖಂಡರಾದ ಕಲಗೋಡು ರತ್ನಾಕರ್ ಗೌರವವನ್ನು ಸಲ್ಲಿಸಿದರು.
ಅವರ ಮನೆಯ ಆವರಣದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶವನ್ನು ಮಾಡಿಕೊಡಲಾಗಿದ್ದು ಬಳಿಕ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ಇಂದೆ ನೆರವೇರಿಸಲಾಗುವುದು...

MANJUNATH G S..


Discover more from Prasarana news

Subscribe to get the latest posts sent to your email.

  • Related Posts

    HARATHALU HALAPPA:   ಬಡ ಕುಟುಂಬಗಳನ್ನು ಬೀದಿಗೆ ತರುವ ಕೆಲಸವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮಾಡಿದ್ದಾರೆ: ಹರತಾಳು ಹಾಲಪ್ಪ…

    ಹೊಸನಗರ: ಅರಣ್ಯ ಒತ್ತುವರಿ ಜಾಗ ತೆರವು ನೆಪದಲ್ಲಿ ಬಡ ಕುಟುಂಬಗಳನ್ನು ಬೀದಿಗೆ ತರುವ ಕೆಲಸವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಡುತ್ತಿದ್ದಾರೆ ಎಂದು ಹರತಾಳು ಹಾಲಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.ತಾಲೂಕಿನ ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯ ಅರಳಿಕೊಪ್ಪ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು…

    Read more

    RIPPONPET NEWS: ಕಾಲಭೈರವೇಶ್ವರ ಮಹಿಳಾ ಸಂಘದಿಂದ ಶರ್ಮಿನ್ಯಾವತಿ ನದಿಗೆ ಬಾಗಿನ ಅರ್ಪಣೆ..

    ರಿಪ್ಪನ್ ಪೇಟೆ: ಈ ಬಾರಿ ಸಮೃದ್ಧ ಮಳೆಯಾಗಿರುವ ಹಿನ್ನೆಲೆಯಲ್ಲಿ ಪ್ರಕೃತಿಗೆ ಕೃತಜ್ಞತೆ ಸಲ್ಲಿಸುವ ನಿಟ್ಟಿನಲ್ಲಿ ಕಾಲಭೈರವೇಶ್ವರ ಮಹಿಳಾ ಸಂಘದ ವತಿಯಿಂದ ಗವಟೂರಿನ ಶರ್ಮಿನ್ಯಾವತಿ ನದಿಗೆ ಶುಕ್ರವಾರ ಬಾಗಿನ ಅರ್ಪಿಸಲಾಯಿತು. ಈ ಬಗೆಯ ಸಾಂಪ್ರದಾಯಿಕ ಹಾಗೂ ಧಾರ್ಮಿಕ ಆಚರಣೆ ಮಹಿಳಾ ಸಂಘದ ಸದಸ್ಯರ…

    Read more

    Leave a Reply

    Discover more from Prasarana news

    Subscribe now to keep reading and get access to the full archive.

    Continue reading