

ಹೊಸನಗರ: ಜೆಸಿಐ ಹೊಸನಗರ ಡೈಮಂಡ್ ಘಟಕದ ವಲಯ 24ರ ನೂತನ ಅಧ್ಯಕ್ಷರಾಗಿ ಜೆ ಸಿ ವಿನಾಯಕ ಫೆಬ್ರವರಿ 24ರ ಸೋಮವಾರ ಡಿಸಿಸಿ ಬ್ಯಾಂಕ್ ನ ಸಭಾಂಗಣದಲ್ಲಿ ಅಧಿಕಾರವನ್ನು ಸ್ವೀಕರಿಸಿದರು.ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ್ದ ವಲಯ 24ರ ವಲಯ್ಯಾಧ್ಯಕ್ಷ ರಾದ ಗೌರೀಶ್ ಭಾರ್ಗವ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಜೆಸಿ ಹೊಸನಗರ ಡೈಮಂಡ್ ಪ್ರಸ್ತುತ ಗಳಿಸಿರುವ ಸ್ಥಾನಮಾನಗಳು, ರಾಷ್ಟ್ರೀಯ ಪುರಸ್ಕಾರಗಳನ್ನು ಗಳಿಸಿದ ಸಂದರ್ಭಗಳನ್ನು ಮೇಲುಕು ಹಾಕಿ, ಈ ಸಂಸ್ಥೆ ಯುವಜನತೆಗೆ ಹೇಗೆ ಸ್ಪೂರ್ತಿ ತುಂಬುತ್ತದೆ ಮತ್ತು ಹೊಸ ಸದಸ್ಯರ ಸೇರ್ಪಡೆ ಇಂದ ಆಗುವ ಪ್ರಯೋಜನಗಳನ್ನು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ತೀರ್ಥಹಳ್ಳಿಯ ಪೂರ್ವ ಜೆಸಿಐಯ ವಲಯ ಅಧಿಕಾರಿಯಾಗಿರುವಂತಹ ಜೆಸಿ ನಂದ ಕಿಶೋರ್ ಕಾಮತ್ ರವರು ಆಗಮಿಸಿದ್ದರು. ತಮ್ಮ ಭಾಷಣದಲ್ಲಿ ಸಕಾರಾತ್ಮಕ ಯೋಚನೆಗಳ ಜೊತೆ ಜೊತೆಗೆ ಹೊಂದಿಕೊಳ್ಳುವ ನಮ್ಮ ವಯಸ್ಸು ನಮ್ಮ ಸ್ಥಾನಮಾನ ನಮ್ಮ ಆಚಾರ-ವಿಚಾರಗಳಿಗೆ ಹೊಂದಿಕೊಳ್ಳುವಂತಹ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಯುವಜನತೆ ಅದರಲ್ಲೇ ಮುಂದುವರಿದು ಸತತ ಪರಿಶ್ರಮದ ಮೂಲಕ ಸಾಧನೆಯನ್ನು ಮಾಡಬೇಕಾಗಿ ಹಾಗೆ ಜೆಸಿಐನ ಮಹತ್ವವನ್ನು ವಿವರಿಸುತ್ತಾ ಅದರಿಂದಾಗಿ ಅದರಿಂದಾಗಿ ತಾವು ಹೇಗೆ ಸಮಾಜದಲ್ಲಿ ಬೆಳೆದು ತಮ್ಮ ವ್ಯವಹಾರವನ್ನು ಬೆಳೆಸಿಕೊಂಡು ಸಮಸ್ತ ಸಂಪರ್ಕ ಸಾಧಿಸಿ ಜೀವನದಲ್ಲಿ ಮೇಲೆ ಬಂದಿದ್ದನ್ನು ನೆನಪಿಸಿಕೊಂಡು.
ನೂತನ ಅಧ್ಯಕ್ಷ 2025ಕ್ಕೇ ಜೆ ಸಿ ವಿನಾಯಕ ಕಾರ್ಯಭಾರಿ ಇವರಿಗೆ ಹಿಂದಿನ ಸಾಲಿನ ಅಧ್ಯಕ್ಷರಾದಂತಹ ಜೆಸಿ ಅರವಿಂದ್ ರವರು ಪ್ರಮಾಣವಚನ ಬೋಧನೆಯನ್ನು ಮಾಡಿದರು.
ಅಧಿಕಾರ ಸ್ವೀಕರಿಸಿದ ಜೆಸಿ ವಿನಾಯಕ ಕಾರ್ಯಭಾರಿ ರವರು ನಾನು ಪ್ರತಿಷ್ಠಿತ ಘಟಕದ ಅಧ್ಯಕ್ಷನಾಗಿ ಆಯ್ಕೆಯಾಗಿದ್ದು ಹೆಮ್ಮೆ ಇದ್ದು ಈ ಜವಾಬ್ದಾರಿ ವಹಿಸಿಕೊಳ್ಳಲು ಸರ್ವ ರೀತಿಯಲ್ಲಿ ಸಿದ್ಧನಿದ್ದೇನೆ. ನನಗೆ ಹಿರಿ ಕಿರಿಯ ಜೆಸಿಗಳ ಬೆಂಬಲದೊಂದಿಗೆ ಈ ಘಟಕವನ್ನು ಭಾರತದಾದ್ಯಂತ ಇನ್ನಷ್ಟು ಎತ್ತರಕ್ಕೆ ಕೊಂಡಯುವಲ್ಲಿ ಸಂಪೂರ್ಣ ಕೆಲಸ ನಿರ್ವಹಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಜೆಸಿಐ ಭಾರತದ ಆರ್ಥಿಕ ಸಮಿತಿಗೆ ಸದಸ್ಯರಾದಂತಹ ಜೆಸಿ ಮಧುಸೂದನ್ ನಾವಡ ಅವರನ್ನು ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ಜೆಸಿಐ ಭಾರತದ ರಾಷ್ಟ್ರೀಯ ನಿರ್ದೇಶಕರಾದ ಜೆಸಿ ಅನುಷ್ ಗೌಡ ಹಾಗೂ ವಲಯ ಉಪಾಧ್ಯಕ್ಷರಾದ ಜೆ ಸಿ ಪ್ರಮೋದ್ ಶಾಸ್ತ್ರಿ,, ಕಾರ್ಯದರ್ಶಿ ಜೆಸಿ ಚಂದ್ರಶೇಖರ್ ಹಾಗೂ ಪ್ರಾಜೆಕ್ಟ್ ಡೈರೆಕ್ಟರ್ ಆದಂತಹ ಆದರ್ಶ ಶೆಟ್ , ಹಾಗೂ ವೇದಿಕೆ ಮುಂಭಾಗದಲ್ಲಿ ಜೆಸಿ ಮುರಳಿಧರ್, ಜೆಸಿ ಸ್ವರೂಪ್, ಜೆಸಿ ವಿನಾಯಕ್ ಅರಮನೆ, ಜೆಸಿ ಉದಯ ಕದಂಬ, ಜೆಸಿ ಸುದರ್ಶನ್, ಜೆಸಿ ಮೋಹನ್, ಜೆಸಿ ಹರೀಶ್ ಸರ್ಜ, ಹಾಗೂ ಇನ್ನಿತರ ಜೆಸಿಐ ಗಣ್ಯರು ಆಗಮಿಸಿದ್ದರು.
JCI DIAMOND...
Discover more from Prasarana news
Subscribe to get the latest posts sent to your email.