ILLEGAL TRUST:ದೇವಸ್ಥಾನದ ಹೆಸರಿನಲ್ಲಿ ಅಕ್ರಮ ಟ್ರಸ್ಟ್ ನೊಂದಾಯಿಸಿ ಸಾರ್ವಜನಿಕರ ಹಣ ದೋಚುವ ಹುನ್ನಾರ… ಮಾರಿಕಾಂಬಾ ಜಾತ್ರ ಾ ಆಡಳಿತ ಸಮಿತಿ ವಿರುದ್ಧ ತನಿಖೆಗೆ ಆಗ್ರಹ….

ಹೊಸನಗರ; ತಾಲೂಕಿನ ಇತಿಹಾಸ ಪ್ರಸಿದ್ದ ಶ್ರೀ ಮಾರಿಕಾಂಬಾ ಜಾತ್ರೆ ಆಚರಣೆಯಲ್ಲಿ ಪ್ರಸಕ್ತ ಆಡಳಿತ ಸಮಿತಿ ಸದಸ್ಯರಿಂದ ವ್ಯಾಪಕ ಭ್ರಷ್ಠಾಚಾರ ನಡೆದು ಸಾರ್ವಜನಿP್ಪರಿಗೆ ಜಾತ್ರೆಯ ಆಯಾ-ವ್ಯಯ ಪತ್ರ ನೀಡದೆ ಲಕ್ಷಾಂತರ ಹಣ ವಂಚಿಸಿ, ಅಕ್ರಮವಾಗಿ ಭಕ್ತರ ಹಣ ದೋಚುವ ಹುನ್ನಾರ ನಡೆದಿದೆ. ಇದು ಕಳೆದ ಸುಮಾರು ೨೦ ವರ್ಷಗಳಿಂದ ನಿರಂತರವಾಗಿ ನಡೆದಿದ್ದರೂ, ಸಂಬAಧಪಟ್ಟ ಯಾವುದೇ ಇಲಾಖೆಯ ಅಧಿಕಾರಿಗಳು ಇತ್ತ ಗಮನಹರಿಸದಿರುವುದು ಭಕ್ತಾದಿಗಳ ಸಕೇದಾಶ್ರ‍್ಯಕ್ಕೆ ಕಾರಣವಾಗಿದೆ. ಈ ಕುರಿತು ಶೀಘ್ರವಾಗಿ ತನಿಖೆ ನಡೆಸಿ, ಭಕ್ತರ ನಂಬಿಕೆಗಳಿಗೆ ಚ್ಯುತಿಬಾರದಂತೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ರಾಜ್ಯ ದಲಿತ ಸಂಘರ್ಷ ಸಮಿತಿ ಸಂಚಾಲಕ ಪರಮೇಶ್ವರ ದೂದೂರು, ಪ್ರಜಾಪ್ರಭುತ್ವ ವೇದಿಕೆ ಅಧ್ಯಕ್ಷ ಗಣೇಶ್ ಬೆಳ್ಳಿ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ, ಉದ್ಯಮಿ ಬಿ.ಜಿ.ನಾಗರಾಜ್ ತಹಶೀಲ್ದಾರ್ ರಶ್ಮಿ ಅವರಿಗೆ ಮನವಿಪತ್ರ ಸಲ್ಲಿಸುವ ಮೂಲಕ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಪತ್ರಕರ್ತ/ಸಾಮಾಜಿಕ ಹೋರಾಟಗಾರ ಗಣೇಶ್ ಬೆಳ್ಳಿ ನಂತರ ಮಾಧ್ಯಮದೊಂದಿಗೆ ಮಾತನಾಡಿ, ಪಟ್ಟಣದ ಶ್ರೀ ಮಾರಿಕಾಂಬಾ ಜಾತ್ರೆ ಆಚರಣೆ ಸಮಿತಿಗೆ ಸುಮಾರು ೬೫ ವರ್ಷಗಳ ಇತಿಹಾಸವಿದೆ. ಸೀನಪ್ಪ ಶೆಟ್ಟಿ ಅವರಿಂದ ಆರಂಭಗೊAಡು ನಂತರದಲ್ಲಿ ನರಸಿಂಹಯ್ಯ, ಸರ್ಕಲ್ ಶ್ರೀನಿವಾಸ್, ಸುಬ್ರಾವ್, ಪಿ.ಆರ್. ಸಂಜೀವಾ, ಮಹಾಬಲರಾವ್, ನಿಂಗಮೂರ್ತಿ, ಕೆ.ಗೋವಿಂದಪ್ಪ, ಮಹಾಬಲ ಸೇರಿದಂತೆ ಹಲವರು ದೇವಸ್ಥಾನ/ಜಾತ್ರಾ ಮಹೋತ್ಸವದ ನೇತೃತ್ವ ವಹಿಸಿ ಅದ್ದೂರಿಯಾಗಿ ಶ್ರೀ ದೇವಿಯ ಗದ್ದುಗೆ ನಿರ್ಮಿಸಿದ್ದು ಈಗ ಇತಿಹಾಸ. ನಾಗರಾಜು ನಂತರದಲ್ಲಿ ಕಳೆದ ೨೦ ವರ್ಷಗಳ ಹಿಂದಿನಿAದ ಲಕ್ಷಿö್ಮÃನಾರಾಯಣ ಎಂಬುವವರು ದೇವಸ್ಥಾನದ ಆಡಳಿತ ಹಾಗೂ ಜಾತ್ರಾ ಸಮಿತಿಯ ಅಧ್ಯಕ್ಷತೆ ವಹಿಸಿದ್ದು, ಈವರೆಗೂ ದೇವಸ್ಥಾನಕ್ಕೆ ಸಂಬAಧಿಸಿದAತೆ ಯಾವುದೇ ಆಡಳಿತ ಸಮಿತಿ ಅಧಿಕೃತವಾಗಿ ನೊಂದಣ  ಆಗಿಲ್ಲ. ವಾರ್ಷಿಕ ಲೆಕ್ಕಪತ್ರವನ್ನು ಸಾರ್ವಜನಿಕಗೊಳಿಸಿಲ್ಲ. ಪ್ರತಿ ವರ್ಷದ ಜಾತ್ರೆಯ ವಾರ್ಷಿಕ ಆಡಳಿತ ವರದಿಯಾಗಲಿ, ಉಳಿತಾಯ ಕುರಿತಂತೆ ಸಾರ್ವಜನಿಕವಾಗಿ  ಗುಟ್ಟು ಕೊಡದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇತ್ತೀಚೆಗಷ್ಟೇ ಹೊಸನಗರ ಉಪ ನೊಂದಣ  ಕಚೇರಿಯಲ್ಲಿ ಈ ಸಂಬAಧ ನೂತನ ಟ್ರಸ್ಟ್ ನೊಂದಣ  ಆಗಿದ್ದರೂ, ನೊಂದಾಯಿತಿ ಸಮಿತಿಯಲ್ಲಿ ಸರ್ಕಾರದ ಕಾಯ್ದೆಯ ಆದೇಶಗಳನ್ನು ಗಾಳಿಗೆ ತೂರಿದ್ದು, ಒಂದೇ ಕುಟುಂಬ/ಜಾತಿಯ ಸುಮಾರು ಎಂಟು ಮಂದಿಗೆ ಸಮಿತಿಯಲ್ಲಿ ಮಣೆ ಹಾಕಲಾಗಿದೆ. ಬೆರಳೆಣ ಕೆ ಮಾತ್ರಕ್ಕೆ ತಮ್ಮ ಹಿತ ಕಾಪಾಡುವ ಕೆಲವೇ ಸದಸ್ಯರನ್ನು ಸಮಿತಿಯಲ್ಲಿ ಸರ‍್ಪಡೆಗೊಳಿಸಲಾಗಿದೆ. ಸಮಿತಿಯಿಂದ ಪರಿಶಿಷöಜಾತಿ, ಪರಿಶಿಷ್ಟ ಪಂಗಡ ಹಾಗೂ ಮಹಿಳಾ ಮೀಸಲಾತಿಯನ್ನು ಕಡೆಗಣ ಸಲಾಗಿದೆ. ಮೇಲ್ನೋಟಕ್ಕೆ ಕೇವಲ ಒಂದು ವರ್ಗ/ಜಾತಿ/ಕುಟುಂಬಕ್ಕೆ ದೇವಸ್ಥಾನ ನೂತನ ಟ್ರಸ್ಟ್ ನೊಂದಣ  ಆದಂತೆ ತೋರಿಬರುತ್ತಿದೆ. ಅಲ್ಲದೆ, ಜಾತ್ರಾ ಮಹೋತ್ಸವದಿಂದ ವಾರ್ಷಿಕ ಒಂದು ಕೋಟಿಗೂ ಅಧಿಕ ಆದಾಯವಿದ್ದು, ಪಟ್ಟಣ ಪಂಚಾಯತಿಗೆ ಸೇರಿದ ೧೧ ವಾರ್ಡ್ನಲ್ಲಿ ನಡೆಯುವ ಜಾತ್ರೆಗೆ ಬರುವ ವ್ಯಾಪಾರಿಗಳಿಂದ ನೆಲಬಾಡಿಗೆ ರೂಪದಲ್ಲಿ ೧೦*೧೦ ಅಡಿ ಸ್ಥಳ ಒಂದಕ್ಕೆ ರೂ ೨ ಸಾವಿರ ಹಣ ಅಕ್ರಮ ವಸೂಲಾತಿ ನಡೆದಿದೆ ಎಂಬ ಗಂಭೀರ ಆರೋಪಗಳು ಸಾರ್ವಜನಿಕ ವಲಯದಲ್ಲಿ ನಿರಂತರವಾಗಿ ಕೇಳಿ ಬರುತ್ತಲೇ ಇದೆ. ಪಟ್ಟಣ ಪಂಚಾಯತಿ ಆಸ್ತಿಯನ್ನು ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಜಾತ್ರಾ ಮಹೋತ್ಸವ ಆಚರಣಾ ಸಮಿತಿಯು ಆಕ್ರಮವಾಗಿ ದರ‍್ಬಳಕೆ ಮಾಡಿಕೊಳ್ಳುತ್ತ ಲಕ್ಷಾಂತರ ಹಣ ಬಾಡಿಗೆ ವಸೂಲಿಗೆ ಮುಂದಾಗಿದೆ. ಇದರಲ್ಲಿ ಪಟ್ಟಣ ಪಂಚಾಯತಿ ಆಡಳಿತ ಸಮಿತಿಯ ಕೈವಾಡ ಸಹ ಇದೆ ಎಂಬ ಸಂಶಯವನ್ನು ಸಾರ್ವಜನಿಕರು ವ್ಯಕ್ತ ಪಡಿಸಿದ್ದಾರೆ. ಜಾತ್ರೆಯಲ್ಲಿನ ವ್ಯಾಪಾರಿಗಳಿಗೆ ನೀಡುವ ವಿದ್ಯುತ್ ಸಂಪರ್ಕದಿAದ ಕೆಲವು ಸಮಿತಿ ಸದಸ್ಯರು ಪ್ರತಿದಿನ ಅಕ್ರಮ ಬಾಡಿಗೆ ವಸೂಲಿಗೆ ಮುಂದಾಗುತ್ತಾರೆ. ಈ ಎಲ್ಲಾ ಕಾರಣಗಳಿಂದ ಪಟ್ಟಣ ಪಂಚಾಯತಿಗೆ ಸೇರಿದ್ದ ಜಾಗದಲ್ಲಿ ನಡೆಯವ ಜಾತ್ರೆಗೆ ಬರುವ ವ್ಯಾಪಾರಿಗಳಿಗೆ ಸ್ಥಳೀಯ ಆಡಳಿತ ಬಹಿರಂಗ ಹರಾಜಿನ ಮೂಲಕ ಸ್ಥಳಾವಕಾಶ ಕಲ್ಪಿಸಿ, ಪಂಚಾಯತ್ತಿಗೆ ಬರುವ ಆದಾಯವನ್ನು ಹೆಚ್ಚಿಸಿಕೊಳ್ಳುಬೇಕು. ವಿದ್ಯುತ್ ಸಂಪರ್ಕವನ್ನು ಓರ್ವ ಗುತ್ತಿಗೆದಾರನಿಗೆ ನಿಗದಿತ ಆದಾಯಕ್ಕೆ ನಿಗದಿಗೊಳಿಸಿ ಸೂಕ್ತ ಕ್ರಮಕೈಗೊಳ್ಳಬೇಕು. ಸಾರ್ವಜನಿಕರ ಆಸ್ತಿಯಾದ ಈ ದೇವಸ್ಥಾನಕ್ಕೆ  ಸದಸ್ಯತ್ವ ನೊಂದಣ  ಅಭಿಯಾನದ ಬಳಿಕ ಮುಜರಾಯಿ ಇಲಾಖೆಗೆ ಹಸ್ತಾಂತರಿಸಿ ಬಳಿಕ ಆಡಳಿತ ಸಮಿತಿ ರಚನೆಗೆ ಜಿಲ್ಲಾಡಳಿತ ಮಂದಾಗಬೇಕು. ಟ್ರಸ್ಟ್ ಕಾಯ್ದೆ ಅಡಿಯಲ್ಲಿ ನೊಂದಾವಣೆ ಆಗದ ಅಕ್ರಮ ಟ್ರಸ್ಟನ್ನು ತತಕ್ಷಣ ವಜಾಗೊಳಿಸಬೇಕು. ಈ ಎಲ್ಲಾ ಕಾರ್ಯಗಳನ್ನು ಜಿಲ್ಲಾಡಳಿತ ಬರುವ ಫೆಬ್ರವರಿ ೪ರ ಜಾತ್ರಾ ಮಹೋತ್ಸವದ ದಿನದೊಳಗೆ ಜಾರಿಗೊಳಿಸಬೇಕು. ತಪ್ಪಿದಲ್ಲಿ ತಹಶೀಲ್ದಾರ್ ಕಚೇರಿ ಎದುರು ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂಬ ಎಚ್ಚರಿಕೆ ನೀಡಿದ್ದಾರೆ..

ILLEGAL TRUST.


Discover more from Prasarana news

Subscribe to get the latest posts sent to your email.

  • Related Posts

    DEER ACCIDENT:ಕಾರಿಗೆ ಡಿಕ್ಕಿ ಜಿಂಕೆ ಸಾವು…

    ಹೊಸನಗರ: ಪಟ್ಟಣ ಸಮೀಪ ಕಲ್ಲುಹಳ್ಳ ಬಳಿ ಬೈಂದೂರು ರಾಣಿಬೆನ್ನೂರು ರಾಷ್ಟ್ರೀಯ ಹೆದ್ದಾರಿ 766ಸಿ ಯಲ್ಲಿ ಚಲಿಸುತ್ತಿದ್ದ ಕಾರಿಗೆ  ಜಿಂಕೆಯೊಂದು ಡಿಕ್ಕಿ ಹೊಡೆದು ಸಾವನ್ನಪ್ಪಿದ ಘಟನೆ ಶುಕ್ರವಾರ ನಡೆದಿದೆ.ಹೊಸನಗರದಿಂದ ಹೋಗುತ್ತಿದ್ದ ಕಾರಿಗೆ ರಸ್ತೆ ಪಕ್ಕದಿಂದ ರಭಸದಲ್ಲಿ ಓಡಿ ಬಂದ ಜಿಂಕೆ ಡಿಕ್ಕಿ ಹೊಡೆದಿದ್ದು…

    Read more

    BRAHMESHWAR:ಏ.20 ರಂದು ಇತಿಹಾಸ ಪ್ರಸಿದ್ಧ ಶ್ರೀ ವೀರಭದ್ರೇಶ್ವರ ದೇವಸ್ಥಾನದ ನೂತನ ಶಿಲಾಮಯ ದೇಗುಲದ ಅಡಿಗಲ್ಲು ಸಮಾರಂಭ..

    ಹೊಸನಗರ: ಐತಿಹಾಸಿಕ ಹಿನ್ನೆಲೆಯ ಬ್ರಹ್ಮೇಶ್ವರದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ನೂತನ ಶಿಲಾಮಯ ಅಧಿಷ್ಠಾನ ಅಡಿಗಲ್ಲು ಸಮಾರಂಭ ನಾಳೆ ಬೆಳಿಗ್ಗೆ 10.30 ಕ್ಕೆ ಸಂಸದರಾದ ಬಿ ವೈ ರಾಘವೇಂದ್ರ ನೆರವೇರಿಸಲಿದ್ದಾರೆ ಎಂದು ಶ್ರೀ ವೀರಭದ್ರೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಶ್ರೀ ಸುಧೀರ್…

    Read more

    Leave a Reply

    Discover more from Prasarana news

    Subscribe now to keep reading and get access to the full archive.

    Continue reading