HOSANAGARA-SPORTS ದೈಹಿಕ ಕುಬ್ಜತೆಯ ನಡುವೆಯು ಸಾಧನೆಯ ನಾಗಲೋಟ…
ರಾಜ್ಯಮಟ್ಟಕ್ಕೆ ಆಯ್ಕೆಯಾದ ಅರ್ಚನಾ…

ಅರ್ಚನಾ


ಹೊಸನಗರ :  ಸಾಧಿಸಬೇಕೆಂಬ ಛಲ ಇದ್ದರೆ ಯಾವುದು ಅಡ್ಡಿ ಆಗದು. ಎಂಬ ಮಾತಿಗೆ ತಾಲ್ಲೂಕಿನ ಅರ್ಚನಾ ಸಾಕ್ಷಿ ಆಗಿದ್ದಾಳೆ.
ತನ್ನ ದೈಹಿಕ ಕುಬ್ಜತೆಯ ನಡುವೆಯು ತನ್ನ  ಗುರಿಯನ್ನು ನಾಗಾಲೋಟದಲ್ಲಿ ಕ್ರಮಿಸಿ ಸಾಧನೆ ಮೆರೆದಿದ್ದಾಳೆ.
ಈಕೆ ಹೆಸರು ಅರ್ಚನಾ ಹೊಸನಗರ  ಮಲೆನಾಡು ಪ್ರೌಢಶಾಲೆಯ  ಒಂಬತ್ತನೇ ತರಗತಿ ವಿದ್ಯಾರ್ಥಿನಿ.
ಹೊಸನಗರ ತಾಲ್ಲೂಕು ನಗರ ಹೋಬಳಿಯ ಸಂಪೆಕಟ್ಟೆ ಬಳಿಯ ಕೊಡಸೆ ಹೆಬ್ಬುರಳಿಯ ಬಡ ಕುಟುಂಬದ ಕೃಷಿಕ ಕೃಷ್ಣ ಹಾಗೂ ಕಲಾವತಿ ದಂಪತಿಗಳ ಪುತ್ರಿ.
ಈಕೆ ಕೇವಲ 3.11 ಅಡಿ ಎತ್ತರ ಇದ್ದಾಳೆ. ಈ ಕುಬ್ಜತೆ ಇವಳ ಸಾಧನೆಗೆ ಯಾವುದೇ ಅಡ್ಡಿ ಆತಂಕ ತಂದಿಲ್ಲ. ಅವಳನ್ನು ರಾಜ್ಯ ಮಟ್ಟಕ್ಕೆ ಕೊಂಡೊಯ್ದಿದೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಓಟದ ಸ್ಪರ್ದೆಯಲ್ಲಿ ನಿಖರ ಗುರಿ ತಲುಪಿ ಶಹಬ್ಬಾಸ್ ಗಿರಿ ಗಿಟ್ಟಿಸಿದ್ದಾರೆ.

ಹೌದು, 17 ವರ್ಷ ವಯೋಮಿತಿಯೊಳಗಿನ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದ 3 ಸಾವಿರ ಮೀಟರ್ ಓಟದ ಸ್ಪರ್ಧೆಯಲ್ಲಿ ಹೊಸನಗರ ಮಲೆನಾಡು ಪ್ರೌಢ ಶಾಲೆಯ 9ನೇ ತರಗತಿ ಓದುತ್ತಿರುವ ಈಕೆ 3 ಸಾವಿರ ಮೀ. ಓಟವನ್ನು 11.4 ನಿಮಿಷಗಳಲ್ಲಿ ಕ್ರಮಿಸಿ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.



ಶಾಸಕ ಬೇಳೂರು ಗೋಪಾಲಕೃಷ್ಣ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಆರ್. ಕೃಷ್ಣಮೂರ್ತಿ ಮಲೆನಾಡು ಪ್ರೌಢಶಾಲೆಯ ಮುಖ್ಯ ಶಿಕ್ಷಕರ ಎನ್.ಸುಧಾಕರ್, ದೈಹಿಕ ಶಿಕ್ಷಕ, ತರಬೇತುದಾರ ಎಸ್.ಎಲ್.ಸುರೇಶ್, ಶಿಕ್ಷಕೇತರರು, ವಿದ್ಯಾರ್ಥಿ ವೃಂದದವರು ಇವಳ ಸಾಧನೆ ಕೊಂಡಾಡಿ ರಾಜ್ಯ ಮಟ್ಟದಲ್ಲೂ ಉತ್ತಮ ಸಾಧನೆ ಹೊಂದುವಂತೆ ಹಾರೈಸಿದ್ದಾರೆ.

HOSANAGARA-SPORTS


Discover more from Prasarana news

Subscribe to get the latest posts sent to your email.

  • Related Posts

    PAURAKARMIKA: ಕ್ರೀಡಾಕೂಟ ಸಂಬಂಧಗಳ ಬೆಸುಗೆಗೆ‌ ಸಹಕಾರಿ: ಶಾಸಕ ಬೇಳೂರು…

    ಹೊಸನಗರ: ಸಂಬಂಧಗಳ ಪರಸ್ಪರ ವೃದ್ದಿಗೆ ಕ್ರೀಡಾಕೂಟಗಳ ಆಯೋಜನೆ ಸಹಕಾರಿ ಆಗಲಿದೆ‌ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಅಭಿಪ್ರಾಯ ಪಟ್ಟರು.ಇಲ್ಲಿನ ನೆಹರು ಕ್ರೀಡಾಂಗಣದಲ್ಲಿ ಕೋರಾರ್ ಹಾಗೂ ಕೊರಗ ಸಮಾಜ ಬಾಂಧವರಿಗಾಗಿ ಹಮ್ಮಿಕೊಂಡಿದ್ದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯ ವಿಜೇತ ತಂಡಕ್ಕೆ ಬಹುಮಾನ ವಿತರಿಸಿ…

    Read more

    NETBALL:ಅಖಿಲ ಭಾರತ ಅಂತರ್ ವಿಶ್ವ ವಿದ್ಯಾಲಯ ನೆಟ್ ಬಾಲ್ ಪಂದ್ಯಾವಳಿಗೆ “ಎಂ.ಗಣೇಶ್ ಆಯ್ಕೆ”

    ಹೊಸನಗರ: ಮಂಗಳೂರು ವಿಶ್ವವಿದ್ಯಾನಿಲಯದ ಉಜಿರೆಯ  ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ವಿದ್ಯಾರ್ಥಿ ಎಂ. ಗಣೇಶ್ ಮುಂಬರುವ ಜನವರಿ 2ರಿಂದ 6ರ ವರಗೆ ರಾಜಸ್ಥಾನದ ಜೈಪುರದಲ್ಲಿ ನಡೆಯುವ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ನೆಟ್ ಬಾಲ್ ಚಾಂಪಿಯನ್ಷಿಪ್…

    Read more

    Leave a Reply

    Discover more from Prasarana news

    Subscribe now to keep reading and get access to the full archive.

    Continue reading