

ಹೊಸನಗರ: ತಾಲೂಕಿನ ನಗರ ಸಮೀಪದ ಹಿರಿಮನೆಯಲ್ಲಿ ಬದುಕಿ ಬಾಳಬೇಕಿದ್ದ ಕಂದಮ್ಮ ದುರಂತ ಅಂತ್ಯವನ್ನು ಕಂಡಿದ್ದಾನೆ.
ಅ.24 ಗುರುವಾರ
ಶಾಸಕ ಆರಗ ಜ್ಞಾನೇಂದ್ರ ಹೊಸನಗರ ಭಾಗದ ಆಪ್ತ ಸಹಾಯಕ ರಾಜೇಶ ಹಿರಿಮನೆ, ತಾಪಂ ಮಾಜಿ ಸದಸ್ಯೆ ಅಶ್ವಿನಿ ಪಾಟೀಲ್ ಇವರ ಕರುಳಿನಕುಡಿ ಈ ದುರಂತದಲ್ಲಿ ಧಾರುಣ ಅಂತ್ಯ ಕಂಡಿದ್ದು ಕರುಳು ಹಿಚುಕುವಂತಿದೆ.
ರಾಜೇಶ ಹಿರೀಮನೆ ಕೊನೆಯ ಪುತ್ರ ಅಥರ್ವ ಕಳೆದ ಅ.24ರ ಗುರುವಾರ ಮೈಮೇಲೆ ಮಾಡಿಟ್ಟಿದ್ದ ಬಿಸಿ ಟೀ ಬೀಳಿಸಿಕೊಂಡು ಗಂಭೀರ ಗಾಯಗೊಂಡಿದ್ದ. ಕೂಡಲೇ ಮಗುವನ್ನು ಮಂಗಳೂರು ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಲಾಯ್ತು. ಕಳೆದ 8 ದಿನದಿಂದ ನೀಡುತ್ತಿದ್ದ ಚಿಕಿತ್ಸೆ ಫಲಕಾರಿಯಾಗಿದೆ ಇನ್ನಷ್ಟೇ ಜಗತ್ತು ನೋಡಬೇಕಿದ್ದ ಮಗು ನ.1 ಬೆಳಿಗ್ಗಿನ ಜಾವ ಅಸುನೀಗಿದೆ.
ಬದುಕಿ ಬಾಳಬೇಕಿದ್ದ ಪುಟ್ಟ ಕಂದಮ್ಮನ ದುರಂತ ಅಂತ್ಯ ಇಡೀ ಗ್ರಾಮವನ್ನು ಮರುಗುವಂತೆ ಮಾಡಿದ್ದು ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ.
CHILD DEATH:NAGARA
Discover more from Prasarana news
Subscribe to get the latest posts sent to your email.