HOSANAGARA-KABADDI ಪಠ್ಯದ ಜೊತೆ ಕ್ರೀಡಾಸಕ್ತಿ ರೂಡಿಸಿಕೊಳ್ಳಿ  : ರಾಷ್ಟ್ರೀಯ ಪ್ರೋ ಕಬ್ಬಡಿ ಕ್ರೀಡಾಪಟು ಗಗನ್ ಗೌಡ.

ಹೊಸನಗರ: ವಿದ್ಯಾರ್ಥಿ ದಿಸೆಯಲ್ಲಿ ಪಠ್ಯದ ಜೊತೆ ಕ್ರೀಡಾಸಕ್ತಿ ವೃದ್ದಿಸಿಕೊಂಡಲ್ಲಿ ಉತ್ತಮ ಕ್ರೀಡಾಪಟುವಾಗಿ ರೂಪುಗೊಳ್ಳಲು ಸತತ ಪರಿಶ್ರಮ ಹಾಕಬೇಕೆಂದು ರಾಷ್ಟ್ರೀಯ ಪ್ರೋ ಕಬ್ಬಡಿ ಕ್ರೀಡಾಪಟು, ಸ್ಥಳೀಯರಾದ ಗಗನ್ ಗೌಡ ತಿಳಿಸಿದರು.

ಇದೇ ಅಕ್ಟೋಬರ್ 18 ಮತ್ತು 19 ರಂದು  ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ನಡೆದ 2024-25ನೇ ಸಾಲಿನ 17 ವರ್ಷ ವಯೋಮಿತಿ ಒಳಗಿನ ಬಾಲಕಿಯರ ರಾಜ್ಯಮಟ್ಟದ ಕಬ್ಬಡಿ ಪಂದ್ಯಾವಳಿಯಲ್ಲಿ ವಿಜೇತರಾಗಿ ರಾಷ್ಟ ಮಟ್ಟಕ್ಕೆ ಆಯ್ಕೆಯಾದ  ತಂಡಕ್ಕೆ ಪಟ್ಟಣದ ಶ್ರೀ ರಾಮಕೃಷ್ಣ ವಿದ್ಯಾಸಂಸ್ಥೆ ಆವರಣದಲ್ಲಿ ಆಯೋಜಿಸಿರುವ ಐದು ದಿನಗಳ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.



ಸಮಯಪಾಲನೆ, ಶಿಸ್ತು, ಸತತ ಪರಿಶ್ರಮದಿಂದ ಮಹತ್ತರ ಸಾಧಿಸಲು ಸಾಧ್ಯವಿದೆ ಎಂದ ಗಗನ್ ಗೌಡ, ರಾಷ್ಟ್ರೀಯ ಕ್ರೀಡಾಕೂಟದಲ್ಲಿ ವಿಜೇತರಾಗಿ ಹೆತ್ತವರಿಗೆ, ಓದಿದ ಶಾಲೆ, ನಾಡಿಗೆ ಕೀರ್ತಿ ತರುವಂತೆ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ರಿಪ್ಪನ್ ಪೇಟೆ ರಾಮಕೃಷ್ಣ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿಯರಾದ ಹೆಚ್.ಓ.ಶ್ರಾವ್ಯ, ಬಿ.ಆರ್.ಶ್ರೇಯಾ, ವಿ.ಎಸ್.ಐಶ್ವರ್ಯ, ಎನ್.ಸಂಜನ, ಆರ್. ದೀಕ್ಷಾ ಸೇರಿದಂತೆ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಬಾಲಚಂದ್ರ ರಾವ್, ರಾಮಕೃಷ್ಣ ವಿದ್ಯಾಸಂಸ್ಥೆ ಮುಖ್ಯಸ್ಥ  ದೇವರಾಜ್ ತರಬೇತುದಾರ ವಿನಯ್, ಧನಂಜಯ, ಪತ್ರಕರ್ತ ಶ್ರೀಕಂಠ, ಮನು ಸುರೇಶ್ ಉಪಸ್ಥಿತರಿದ್ದರು.

HOSANAGARA-KABADDI.


Discover more from Prasarana news

Subscribe to get the latest posts sent to your email.

  • Related Posts

    PAURAKARMIKA: ಕ್ರೀಡಾಕೂಟ ಸಂಬಂಧಗಳ ಬೆಸುಗೆಗೆ‌ ಸಹಕಾರಿ: ಶಾಸಕ ಬೇಳೂರು…

    ಹೊಸನಗರ: ಸಂಬಂಧಗಳ ಪರಸ್ಪರ ವೃದ್ದಿಗೆ ಕ್ರೀಡಾಕೂಟಗಳ ಆಯೋಜನೆ ಸಹಕಾರಿ ಆಗಲಿದೆ‌ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಅಭಿಪ್ರಾಯ ಪಟ್ಟರು.ಇಲ್ಲಿನ ನೆಹರು ಕ್ರೀಡಾಂಗಣದಲ್ಲಿ ಕೋರಾರ್ ಹಾಗೂ ಕೊರಗ ಸಮಾಜ ಬಾಂಧವರಿಗಾಗಿ ಹಮ್ಮಿಕೊಂಡಿದ್ದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯ ವಿಜೇತ ತಂಡಕ್ಕೆ ಬಹುಮಾನ ವಿತರಿಸಿ…

    Read more

    NETBALL:ಅಖಿಲ ಭಾರತ ಅಂತರ್ ವಿಶ್ವ ವಿದ್ಯಾಲಯ ನೆಟ್ ಬಾಲ್ ಪಂದ್ಯಾವಳಿಗೆ “ಎಂ.ಗಣೇಶ್ ಆಯ್ಕೆ”

    ಹೊಸನಗರ: ಮಂಗಳೂರು ವಿಶ್ವವಿದ್ಯಾನಿಲಯದ ಉಜಿರೆಯ  ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ವಿದ್ಯಾರ್ಥಿ ಎಂ. ಗಣೇಶ್ ಮುಂಬರುವ ಜನವರಿ 2ರಿಂದ 6ರ ವರಗೆ ರಾಜಸ್ಥಾನದ ಜೈಪುರದಲ್ಲಿ ನಡೆಯುವ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ನೆಟ್ ಬಾಲ್ ಚಾಂಪಿಯನ್ಷಿಪ್…

    Read more

    Leave a Reply

    Discover more from Prasarana news

    Subscribe now to keep reading and get access to the full archive.

    Continue reading