HOSANAGARA:ಮಾರಿಕಾಂಬ ದೇವಿಯ ದರ್ಶನ ಪಡೆದ ಶಾಸಕ ಗೋಪಾಲಕೃಷ್ಣ ಬೇಳೂರು…

ಹೊಸನಗರ: ತಾಲೂಕಿನ ಪ್ರಸಿದ್ಧ ಶ್ರೀ ಮಾರಿಕಾಂಬ ದೇವಿಯ ಜಾತ್ರಾ ಮಹೋತ್ಸವದ ಮೂರನೇ ದಿನವಾದ ನಿನ್ನೆ ಹೊಸನಗರ ಸಾಗರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಗೋಪಾಲಕೃಷ್ಣ ಬೇಳೂರು ಜಾತ್ರಾ ಮಹೋತ್ಸವಕ್ಕೆ ಭೇಟಿ ನೀಡಿ ದೇವಿಯ ದರ್ಶನವನ್ನು ಪಡೆದರು.
ಬಳಿಕ ಮಾರಿಕಾಂಬ ದೇವಿಯ ಜಾತ್ರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಜಾತ್ರಾ ಮಹೋತ್ಸವಗಳು ನಮ್ಮ ಸಂಸ್ಕೃತಿಯ ಪ್ರತೀಕವಾದುದು ಅದನ್ನ ನಾವೆಲ್ಲರೂ ಸೇರಿ ವಿಜೃಂಭಣೆಯಿಂದ ಆಚರಿಸಬೇಕು ಜೊತೆಗೆ ಜಾತ್ರಾ ಸಮಿತಿಗಳು ಇಂತಹ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಒಂದಿಷ್ಟು ಸಮಾಜಮುಖಿಯಾದ ಕೆಲಸಗಳನ್ನು ಮಾಡಬೇಕು.

ಹೊಸನಗರ ಮಾರಿಕಾಂಬ ಜಾತ್ರಾ ಸಮಿತಿ ಪ್ರತಿ ವರ್ಷವೂ ಅದ್ದೂರಿಯಾಗಿ ಜಾತ್ರಾ ಮಹೋತ್ಸವವನ್ನು ಆಚರಿಸುತ್ತದೆ ಈ ಬಾರಿ ಶಾಸಕನಾಗಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಅ ದೇವಿ ಹಾಗೂ ಈ ಭಾಗದ ಸಾರ್ವಜನಿಕರು ನನಗೆ ಮಾಡಿಕೊಟ್ಟಿದ್ದಾರೆ ಎಂದರು.
ದೇವಸ್ಥಾನದ ಅಭಿವೃದ್ಧಿಯಲ್ಲಿ ನನ್ನ ಬೆಂಬಲ ಎಂದಿಗೂ ಸಮಿತಿಯ ಜೊತೆಗೆ ಇರುತ್ತದೆ ಈಗಾಗಲೇ ದೇವಾಲಯದ ಅಭಿವೃದ್ಧಿಗಾಗಿ 10 ಲಕ್ಷ ಹಣವನ್ನು ಬಿಡುಗಡೆ ಗೊಳಿಸಿದ್ದು ಅದು ಈ ದೇವಸ್ಥಾನದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಾತ್ರಾ ಸಮಿತಿಯ ಅಧ್ಯಕ್ಷರಾದ ಲಕ್ಷ್ಮೀನಾರಾಯಣ , ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ನಾಗಪ್ಪ , ಉಪಾಧ್ಯಕ್ಷೆ ಚಂದ್ರಕಲಾ ನಾಗರಾಜ್ , ಬಿಜಿ ಚಂದ್ರಮೌಳಿ ಮಸ್ತಿ ಕಟ್ಟೆ ಸುಬ್ರಮಣ್ಯ , ಬಾಬು ಕಾಮತ್ ,ಗುರುರಾಜ ಎನ್,ಮಂಜು ಸಣ್ಣಕ್ಕಿ, ಗಿರೀಶ್ ,ಗುರು ಜಯನಗರ, ಸುಲೋಚನಮ್ಮ , ನಿತ್ಯಾನಂದ  ಮುಂತಾದವರು ಉಪಸ್ಥಿತರಿದ್ದರು...

HOSANAGARA..


Discover more from Prasarana news

Subscribe to get the latest posts sent to your email.

  • Related Posts

    SUTTA BRIDGE:ಹೊಸನಗರ ಪ್ರವಾಸೋದ್ಯಮ ಕೇಂದ್ರವಾಗಿ ರೂಪುಗೊಳ್ಳುತ್ತಿದೆ: ಬಿ ವೈ ಆರ್.

    ಹೊಸನಗರ: ತಾಲೂಕು ಪ್ರವಾಸೋದ್ಯಮ ಕೇಂದ್ರವಾಗಿ ರೂಪುಗೊಳ್ಳುತ್ತಿದ್ದು ಇದಕ್ಕೆ ಪೂರಕವಾಗುವಂತಹ ಎಲ್ಲ ಕಾಮಗಾರಿಗಳು ಅತ್ಯಂತ ಬರದಿಂದ ಸಾಗುತ್ತಿದೆ ಎಂದು ಸಂಸದರಾದ ಬಿ ವೈ ರಾಘವೇಂದ್ರ ತಿಳಿಸಿದರು.ಹೊಸನಗರ ಪಟ್ಟಣ ಸಮೀಪ ನಿರ್ಮಾಣ ಹಂತದ ಸುತ್ತ ಪರ್ಯಾಯ ಸೇತುವೆ ಹಾಗೂ ಬೇಕ್ಕೊಡಿ ಸೇತುವೆ ಕಾಮಗಾರಿ ವೀಕ್ಷಿಸಿ…

    Read more

    BANGALORE:ಕರ್ನಾಟಕ ಪಂಚಾಯತ್ ಐಕಾನ್ ಪುರಸ್ಕಾರಕ್ಕೆ ಭಾಜನರಾದ ಪ್ರವೀಣ್ ಜಿ.ಎನ್.

    ಹೊಸನಗರ: ಎಂ.ಗುಡೇಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪ್ರವೀಣ.ಜಿ.ಎನ್ ತಮ್ಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಗ್ರಾಮ, ವ್ಯಾಪ್ತಿಯಲ್ಲಿ ರಸ್ತೆ ಒಳಚರಂಡಿ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಿಕೆ ನರೇಗಾ, ಜಲಜೀವನ್ ಮಿಷನ್ ಗಳಂತಹ ಹಲವಾರು…

    Read more

    Leave a Reply

    Discover more from Prasarana news

    Subscribe now to keep reading and get access to the full archive.

    Continue reading