
ಹೊಸನಗರ: ದೀಪಾವಳಿ ಹಬ್ಬ ಎಂದಾಕ್ಷಣ ನೆನಪಾಗುವುದು ಪಟಾಕಿ ಇದನ್ನು ಪಟಾಕಿ ಹಬ್ಬವೆಂದರೆ ತಪ್ಪಾಗಲಾರದು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರತಿಯೊಂದು ಕುಟುಂಬಗಳು ಪಟಾಕಿಗೆಂದೆ ಒಂದಿಷ್ಟು ಹಣವನ್ನ ವೇಹಿಸಿಯೇ ಇರುತ್ತದೆ. ಆದರೆ ಪಟಾಕಿಗಳನ್ನ ಎಲ್ಲೆಂದರಲ್ಲಿ ಮಾರುವಂತಿಲ್ಲ ಅದಕ್ಕೆ ಪಟ್ಟಣ ಪಂಚಾಯತ್, ಪೊಲೀಸರು ಇಲಾಖೆ ಒಂದಿಷ್ಟು ನಿಯಮವನ್ನ ಹಾಗೂ ನಿಗದಿತ ಸ್ಥಳವನ್ನು ಸೂಚಿಸಿರುತ್ತಾರೆ.
ಹಾಗಾದರೆ ಹೊಸನಗರ ಪಟ್ಟಣ ವ್ಯಾಪ್ತಿಯಲ್ಲಿ ಪಟಾಕಿ ಯನ್ನೂ ಎಲ್ಲಿ ಮಾರಾಟ ಮಾಡಲು ಸ್ಥಳ ನಿಗದಿಪಡಿಸಲಾಗಿದೆ ಹಾಗೂ ಕಳೆದ ವರ್ಷ ಇದ್ದಂತಹ ಸ್ಥಳದಲ್ಲಿ ಮಳಿಗೆಗಳು ಯಾಕಿಲ್ಲ ಎಂಬ ನಿಮ್ಮ ಗೊಂದಲಕ್ಕೆ ಉತ್ತರ ಇಲ್ಲಿದೆ.

"ನೆಹರು ಮೈದಾನ"
ಈ ಬಾರಿ ಪಟಾಕಿ ಮಳಿಗೆಗಳನ್ನು ಹೊಸನಗರ ಪಟ್ಟಣದ ಹೃದಯ ಭಾಗದಲ್ಲಿರುವ ನೆಹರು ಮೈದಾನದ ಮುಂಬಾಗದಲ್ಲಿ ಅಕ್ಟೋಬರ್ 29ರಿಂದ ನವೆಂಬರ್ 4 ವರೆಗಿನ ಏಳು ದಿನಗಳ ಕಾಲ ಪಟಾಕಿ ಅಂಗಡಿಗಳು ವ್ಯವಹರಿಸಲಿವೇ. ಹಲವು ಮುಂಜಾಗ್ರತಾ ಕ್ರಮದೊಂದಿಗೆ ರಾಜ್ಯ ಸರಕಾರ ಆದೇಶದಂತೆ ಹಸಿರು ಪಟಾಕಿಗಳನ್ನು ಮಾರಾಟ ಮಾಡಲು ಮತ್ತು ಸಿಡಿಸಲು ಅವಕಾಶವನ್ನ ನೀಡಿ ಮಳಿಗೆಗಳನ್ನು ತೆರೆಯಲು ಅವಕಾಶವನ್ನ ಕಲ್ಪಿಸಲಾಗಿದೆ ಇಂದಿನಿಂದ ಮಳಿಗೆಗಳಲ್ಲಿ ಪಟಾಕಿಗಳು ದೊರೆಯಲಿದ್ದು ದೀಪಾವಳಿ ಹಬ್ಬಕ್ಕೆ ಇನ್ನಷ್ಟು ಸಂಭ್ರಮವನ್ನು ನೀಡಲು ಸಾರ್ವಜನಿಕರು ಪಟಾಕಿ ಖರೀದಿಯೊಂದಿಗೆ ಜಾಗರೂಕತೆಯಿಂದ ಹಬ್ಬವನ್ನು ಆಚರಿಸಿ.
ಪಟಾಕಿ ಸಂಭ್ರಮಾಚರಣೆಯಲ್ಲಿ ಎಚ್ಚರಿಕೆ ಇರಲಿ..
ದೀಪಾವಳಿ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲು ಪಟಾಕಿಯನ್ನು ಸಿಡಿಸುವದು ವಾಡಿಕೆ ಒಂದು ದಿನದ ಸಂಭ್ರಮಚರಣೆಗೆ ಬಹಳಷ್ಟು ಮಕ್ಕಳು ಯುವಕರು ಕಣ್ಣು ಕಿವಿ ಜೀವವನ್ನು ಕಳೆದುಕೊಂಡಿದ್ದಾರೆ ಆದ್ದರಿಂದ ಪಟಾಕಿ ಸಿಡಿಸುವ ಸಂದರ್ಭದಲ್ಲಿ ಪೋಷಕರು ಮಕ್ಕಳ ಮೇಲೆ ಆದಷ್ಟು ನಿಗವಹಿಸಿ ಒಂದು ದಿನದ ಸಂಭ್ರಮಾಚರಣೆಗೆ ಮುಂದೆ ಬದುಕಿ ಬಾಳಬೇಕಾದ ಮಕ್ಕಳ ಭವಿಷ್ಯ ಬಲಿಯಾಗದಂತೆ ಎಚ್ಚರಿಕೆ ವಹಿಸಿ.
ದೀಪಾವಳಿ.
ಸಂಭ್ರಮದ ಜೊತೆಗೆ ಜಾಗೃತಿಯು ಇರಲಿ..
Discover more from Prasarana news
Subscribe to get the latest posts sent to your email.