CULTURAL CELEBRATION: “ಶೈಕ್ಷಣಿಕ ಪ್ರಗತಿಗೆ ಸಾಂಸ್ಕೃತಿಕ ಕಾರ್ಯಕ್ರಮ ಸಹಕಾರಿ: “ಬೇಳೂರು ಗೋಪಾಲಕೃಷ್ಣ”

ಹೊಸನಗರ: ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಶಾಲೆಯಲ್ಲಿ ಆಯೋಜಿಸುವಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹಕಾರಿಯಾಗಲಿದ್ದು ಮಕ್ಕಳಿಗೆ ಶಿಕ್ಷಣದ ಜೊತೆಗೆ ಕಲೆ ಮತ್ತು ಸಂಸ್ಕೃತಿಯ ಬಗ್ಗೆ ಅರಿವನ್ನು ಮೂಡಿಸುತ್ತದೆ ಎಂದು ಶಾಸಕರಾದ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಪಟ್ಟಣದ ನೆಹರು ಮೈದಾನದಲ್ಲಿ ನಿನ್ನೆ ಸಂಜೆ ಹೊಸನಗರ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಸಾಂಸ್ಕೃತಿಕ ಸಂಭ್ರಮ-2024-25 ರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸರ್ಕಾರಿ ಶಾಲೆಗಳು ಗುಣಮಟ್ಟದ ಶಿಕ್ಷಣವನ್ನ ನೀಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದ್ದು ಪೋಷಕರು ಸಹ ಮಕ್ಕಳನ್ನು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಶಿಕ್ಷಣ, ಸಾಂಸ್ಕೃತಿಕ ಚಟುವಟಿಕೆ, ಕ್ರೀಡೆ, ಎಂದರೆ ಅದು ಕೇವಲ ಖಾಸಗಿ ಶಾಲೆಗಳಲ್ಲಿ ಮಾತ್ರ ಎಂಬಂತಹ ಕಲ್ಪನೆ ಇದೀಗ ಇಲ್ಲದಂತಾಗಿದೆ ಅದಕ್ಕೆ ಉದಾಹರಣೆ ಈ ಸರ್ಕಾರಿ ಶಾಲೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಇಷ್ಟೊಂದು ಅಚ್ಚುಕಟ್ಟಾಗಿ ವೈಭವದಿಂದ ಆಯೋಜನೆಯನ್ನು ಮಾಡಿರುವುದು. ಇದಕ್ಕೆ ಕಾರಣ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಅಶ್ವಿನಿ ಕುಮಾರ್ ಹಾಗೂ ಸದಸ್ಯರು ಮತ್ತು ಬೋಧಕ ಬೋಧಕೇತರ ತಂಡ ಎಂದರು.


ಸರ್ಕಾರಿ ಶಾಲೆಗಳಲ್ಲಿ ಈಗ ಮಕ್ಕಳಿಗೆ ಗುಣಮಟ್ಟದ ಉಚಿತ ಶಿಕ್ಷಣದ ಜೊತೆಗೆ ಪುಸ್ತಕ,ಸಮವಸ್ತ್ರ,ಶೂ, ಗುಡಮಟ್ಟದ ಪೌಷ್ಟಿಕ ಆಹಾರ, ಸಾಂಸ್ಕೃತಿಕ ಚಟುವಟಿಕೆ ಎಲ್ಲವನ್ನು ಸಹ ನೀಡುತ್ತಿದೆ ಪೋಷಕರು ಕೇವಲ ಮಕ್ಕಳನ್ನು ಶಾಲೆಗೆ ಕಳುಹಿಸುವ ಕೆಲಸವನ್ನು ಮಾಡಬೇಕು ಅಷ್ಟೇ. ಹಾಗೆ ಹೊಸನಗರ ತಾಲೂಕಿನಲ್ಲಿ  ಪ್ರೌಢಶಾಲಾ ವಿಭಾಗದಲ್ಲಿ 24 ಶಾಲೆಗಳು ನೂರರಷ್ಟು ಫಲಿತಾಂಶವನ್ನು ನೀಡಿದ್ದು ಸರ್ಕಾರಿ ಶಾಲೆಗಳ ಕಟ್ಟಡಗಳು ಹಳೆಯದಾಗಿ ಕಾಣಬಹುದಷ್ಟೇ ಹೊರತು ಅಲ್ಲಿ ಗುಣಮಟ್ಟದ ಶಿಕ್ಷಣ ಖಂಡಿತವಾಗಿಯೂ ವಿದ್ಯಾರ್ಥಿಗಳಿಗೆ ದೊರೆಯುತ್ತಿದೆ.
ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಅಶ್ವಿನಿ ಕುಮಾರ್ ಇನ್ನಷ್ಟು ಹೊಸ ಹೊಸ ಅಭಿವೃದ್ಧಿ ಕಾರ್ಯಗಳನ್ನು ಈ ಶಾಲೆಯಲ್ಲಿ ಮಾಡಲಿದ್ದು ಇಲ್ಲಿನ ಪೋಷಕರು ಅವರಿಗೆ ಬೆಂಬಲವನ್ನು ನೀಡಬೇಕು ಹಾಗೆಯೇ ಶಾಲೆಯನ್ನು ದೇವಸ್ಥಾನವೆಂದು ಭಾವಿಸಿರುವಂತಹ ನೂರಾರುದಾನಿಗಳು ಶಾಲೆಗಳ ಅಭಿವೃದ್ಧಿಗೆ ಸಹಕಾರವನ್ನು ನೀಡುತ್ತಿದ್ದಾರೆ ಅವರಿಗೆ ಅಭಿನಂದನೆಯನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕೃಷ್ಣಮೂರ್ತಿ, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಅಶ್ವಿನಿ ಕುಮಾರ್, ಸುಮಾ ಸುಬ್ರಹ್ಮಣ್ಯ, ಪಟ್ಟಣ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರುಗಳು ಇನ್ನೂ ಮುಂತಾದವರು ಉಪಸ್ಥಿತರಿದ್ದರು...

CULTURAL CELEBRATION..


Discover more from Prasarana news

Subscribe to get the latest posts sent to your email.

  • Related Posts

    SUMMER CAMP:ಶ್ರೀಧ‌ರ್ ರಂಗಾಯಣ ನೇತೃತ್ವದಲ್ಲಿ
    ಚಿಣ್ಣರಿಗಾಗಿ ಬೇಸಿಗೆ ಶಿಬಿರ…

    ಹೊಸನಗರ: ಮಕ್ಕಳ ಸೃಜನಶೀಲತೆ ವೃದ್ಧಿಗೆ ಪೂರಕವಾಗುವ ನಿಟ್ಟಿನಲ್ಲಿ ಶ್ರೀಧರ್ ಗಂಗಾಯಣ ಹಾಗೂ ನೀನಾಸ ಂ ಮತ್ತು ರಂಗಾಯಣದಲ್ಲಿ ಪದವಿಯನ್ನು ಪಡೆದಿರುವ ಕಲಾವಿದರಿಂದ ಮಕ್ಕಳಿಗೆ ದಿನಾಂಕ 11-4-2025 ರಿಂದ 26-4-2026 ವರೆಗೆ ವಿಶೇಷ ಮೂರನೇ ವರ್ಷದ ಬೇಸಿಗೆ ಶಿಬಿರವನ್ನು ಶಾಸಕರ ಸರ್ಕಾರಿ ಹಿರಿಯ…

    Read more

    SELEBRATION:SARA ಸಾರ ಸಂಸ್ಥೆಗೆ 10 ರ ಸಂಭ್ರಮ…
    ಏ.5 ರಿಂದ 7 ರ ವರೆಗೆ ಚಲನಚಿತ್ರ ಪ್ರದರ್ಶನ ಹಾಗೂ ವಿಶೇಷ ಕಾರ್ಯಕ್ರಮಗಳೊಂದಿಗೆ ಸಂಭ್ರಮಾಚರಣೆ….

    ಹೊಸನಗರ: ಜಿಲ್ಲೆಯಾದ್ಯಂತ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡುವ ಮೂಲಕ ಪ್ರತಿಷ್ಠಿತ ಸಂಸ್ಥೆ ಎಂದೆನಿಸಿಕೊಂಡಿರುವ ಸಾರ ಸಂಸ್ಥೆ ದಂಬೆಕೊಪ್ಪ ತನ್ನ 10 ವರ್ಷ ಗಳನ್ನು ಪೂರೈಸಿದ್ದು ಈ ನಿಟ್ಟಿನಲ್ಲಿ ಸಂಸ್ಥೆ ಏಪ್ರಿಲ್ 5,6,7 ರಂದು ವಿಶೇಷ ವಿವಿಧ ಪ್ರದರ್ಶನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.ಸಾರ ಸಂಸ್ಥೆ…

    Read more

    Leave a Reply

    Discover more from Prasarana news

    Subscribe now to keep reading and get access to the full archive.

    Continue reading