

ಹೊಸನಗರ: ತಾಲೂಕಿನ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಸೇವನೆ ಪ್ರಕರಣ ದಾಖಲಾಗಿದೆ.
ನಾಗೋಡಿ ಗ್ರಾಮದ ಮಾಗಲು ನಿವಾಸಿ ಅಜಿತ್ ಕುಮಾರ್ ಎಂ.ಪಿ (28) ಬಂಧಿತ ಆರೋಪಿ. ನಗರ ಠಾಣೆ ಪಿಎಸ್ಐ ಶಿವಾನಂದ್ ವೈ.ಕೆ ಹಾಗೂ ಸಿಬ್ಬಂದಿಗಳಾದ ಎಎಸ್ಐ ಕುಮಾರ್, ವಿಶ್ವನಾಥ್, ಪ್ರವೀಣ್, ಚಾಲಕ ಶಶಿಧರ್ ಗಸ್ತು ತಿರುಗುತ್ತಿದ್ದಾಗ ನಿಟ್ಟೂರು ಬಸ್ ನಿಲ್ದಾಣದಲ್ಲಿ ಗಾಂಜಾ ಸೇವಿಸಿ ಅಸಭ್ಯವಾಗಿ ವರ್ತನೆ ಮಾಡುತ್ತಾ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ ಈತನನ್ನು ವಶಕ್ಕೆ ಪಡೆದಿದ್ದಾರೆ. ನಂತರ ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದ್ದು ಈತನ ಮೇಲೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
CRIME NEWS..
Discover more from Prasarana news
Subscribe to get the latest posts sent to your email.