CELEBRATION:GKB:ಸಾಮಾಜಿಕ ಸೇವಾ ಕಾರ್ಯಕ್ರಮಗಳ ಮೂಲಕ ಬೇಳೂರು ಗೋಪಾಲಕೃಷ್ಣ ಹುಟ್ಟುಹಬ್ಬ ಆಚರಣೆ..

ಹೊಸನಗರ: ಗೋಪಾಲಕೃಷ್ಣ ಬೇಳೂರು ಹುಟ್ಟುಹಬ್ಬ ಆಚರಣ ಸಮಿತಿಯ ಅಧ್ಯಕ್ಷರಾದ ಮಾಸ್ತಿ ಕಟ್ಟೆ ಸುಬ್ರಮಣ್ಯ ನೇತೃತ್ವದಲ್ಲಿ ಇಂದು ಕಾಂಗ್ರೆಸ್ ಮಹಿಳಾ ಘಟಕ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಶಾಸಕರ ಹುಟ್ಟುಹಬ್ಬವನ್ನು ಆಚರಿಸಿದರು.
ಹೊಸನಗರ ಸರ್ಕಾರಿ ಆಸ್ಪತ್ರೆಗೆ ತೆರಳಿ ರೋಗಿಗಳಿಗೆ ಹಣ್ಣು ಬ್ರೆಡ್ ಹಾಗೂ 500 ರೊ ಹಣವನ್ನು ನೀಡುವ ಮೂಲಕ ಶಾಸಕರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದರು ಹಾಗೆಯೇ ಪಟ್ಟಣದ ಎಲ್ಲಾ ಶಾಲೆಗಳಿಗೆ ತೆರಳಿ ಸಿಹಿಯನ್ನು ಹಂಚಿ ವಿದ್ಯಾರ್ಥಿಗಳನ್ನು ಶಿಕ್ಷಕರನ್ನ ಹಾಗೆಯೇ ಸಾರ್ವಜನಿಕರನ್ನು ಸಂಜೆ ಹೊಸನಗರ ನೆಹರು ಮೈದಾನದಲ್ಲಿ ನಡೆಯುವ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಿದರು ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷ ಸುಮ ಸುಬ್ರಮಣ್ಯ, ಜ್ಯೋತಿ ಚಂದ್ರಮೌಳಿ, ಪಟ್ಟಣ ಪಂಚಾಯತ್ ಅಧ್ಯಕ್ಷರಾದ ನಾಗಪ್ಪ, ಉಪಾಧ್ಯಕ್ಷರಾದ ಚಂದ್ರಕಲಾ ನಾಗರಾಜ್, ಸದಸ್ಯರಾದ ಶಾಹಿನ ನಾಸೀರ್, ಸಿಂಥಿಯಾ ಸೇರವೋ,ಗುಲಾಬಿ ಮರಿಯಪ್ಪ, ಗುರುರಾಜ್ ಕೆ ಎಸ್, ನಿತ್ಯಾನಂದ, ಹಾಗೂ ಹಾಗೂ ಕಾಂಗ್ರೆಸ್ ಮುಖಂಡರಾದ ಸದಾಶಿವ ಶ್ರೇಷ್ಟಿ, ನಾಗರಾಜ್ ಪೂಜಾರಿ, ಸುರೇಶ್ ಕುಮಾರ್, ಮಂಜುನಾಥ್ ಡಿ ಆರ್, ರಾಧಿಕಾ ರತ್ನಾಕರ್,ದೀಪಿಕಾ. ಮುಂತಾದ ಮುಖಂಡರುಗಳು ಉಪಸ್ಥಿತರಿದ್ದರು...

CELEBRATION:GKB...


Discover more from Prasarana news

Subscribe to get the latest posts sent to your email.

  • Related Posts

    HARATHALU HALAPPA:   ಬಡ ಕುಟುಂಬಗಳನ್ನು ಬೀದಿಗೆ ತರುವ ಕೆಲಸವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮಾಡಿದ್ದಾರೆ: ಹರತಾಳು ಹಾಲಪ್ಪ…

    ಹೊಸನಗರ: ಅರಣ್ಯ ಒತ್ತುವರಿ ಜಾಗ ತೆರವು ನೆಪದಲ್ಲಿ ಬಡ ಕುಟುಂಬಗಳನ್ನು ಬೀದಿಗೆ ತರುವ ಕೆಲಸವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಡುತ್ತಿದ್ದಾರೆ ಎಂದು ಹರತಾಳು ಹಾಲಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.ತಾಲೂಕಿನ ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯ ಅರಳಿಕೊಪ್ಪ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು…

    Read more

    RIPPONPET NEWS: ಕಾಲಭೈರವೇಶ್ವರ ಮಹಿಳಾ ಸಂಘದಿಂದ ಶರ್ಮಿನ್ಯಾವತಿ ನದಿಗೆ ಬಾಗಿನ ಅರ್ಪಣೆ..

    ರಿಪ್ಪನ್ ಪೇಟೆ: ಈ ಬಾರಿ ಸಮೃದ್ಧ ಮಳೆಯಾಗಿರುವ ಹಿನ್ನೆಲೆಯಲ್ಲಿ ಪ್ರಕೃತಿಗೆ ಕೃತಜ್ಞತೆ ಸಲ್ಲಿಸುವ ನಿಟ್ಟಿನಲ್ಲಿ ಕಾಲಭೈರವೇಶ್ವರ ಮಹಿಳಾ ಸಂಘದ ವತಿಯಿಂದ ಗವಟೂರಿನ ಶರ್ಮಿನ್ಯಾವತಿ ನದಿಗೆ ಶುಕ್ರವಾರ ಬಾಗಿನ ಅರ್ಪಿಸಲಾಯಿತು. ಈ ಬಗೆಯ ಸಾಂಪ್ರದಾಯಿಕ ಹಾಗೂ ಧಾರ್ಮಿಕ ಆಚರಣೆ ಮಹಿಳಾ ಸಂಘದ ಸದಸ್ಯರ…

    Read more

    Leave a Reply

    Discover more from Prasarana news

    Subscribe now to keep reading and get access to the full archive.

    Continue reading