BIG UPDATE: ಶರಾವತಿ ಮುಳುಗಡೆ ಸಂತ್ರಸ್ತರ ಪುನರ್ವಸತಿಗೆ ಜಂಟಿ ಸ್ಥಳ ಪರಿಶೀಲನೆ…ಅಗತ್ಯ ದಾಖಲೆಗಳೊಂದಿಗೆ ಸಿದ್ಧವಿರುವಂತೆ ದಂಡಾಧಿಕಾರಿಗಳಾದ ರಶ್ಮಿ ಹೆಚ್‌ ಜೆ ಮನವಿ …

ಹೊಸನಗರ:ಶರಾವತಿ ಮುಳುಗಡೆ ಸಂತ್ರಸ್ತರ ಪುನರ್ವಸತಿಗೆ ಅರಣ್ಯ ಜಮೀನು ಡಿ-ರಿಸರ್ವ್ ಮಾಡುವ ಸಂಬಂಧ ಜಂಟಿ ಸ್ಥಳ - ಪರಿಶೀಲನೆಗೆ ಕಂದಾಯ-ಅರಣ್ಯ ಇಲಾಖೆ ಸಿಬ್ಬಂದಿಯ ತಂಡ ಬರಲಿದೆ. ಅವರಿಗೆ ಅಗತ್ಯ ಮಾಹಿತಿ/ದಾಖಲೆ ಒದಗಿಸುವಂತೆ ಹೊಸನಗರ ತಾಲ್ಲೂಕು -ತಹಶೀಲ್ದಾರ್  ರಶ್ಮಿ ಹೆಚ್‌ ಜೆ ಮನವಿ ಮಾಡಿದ್ದಾರೆ.
ಶರಾವತಿ ಮುಳಗಡೆ ಸಂತ್ರಸ್ತರ ಪುನರ್ವಸತಿಗೆಂದು ಅರಣ್ಯ ಜಮೀನು ಬಿಡುಗಡೆಗಾಗಿ ಕೇಂದ್ರ ಸರ್ಕಾರ ಹಾಗೂ ಸುಪ್ರೀಂಕೋರ್ಟ್ ಜಿಲ್ಲೆಯಲ್ಲಿ ಜಂಟಿ ತನಿಖೆ ಮತ್ತು ಸಮೀಕ್ಷೆ ನಡೆಸಿ ವರದಿ ನೀಡುವಂತೆ ಸೂಚಿಸಿವೆ.
ಈ ವೇಳೆ ಪ್ರಸ್ತಾವನೆಯಲ್ಲಿನ ದಾಖಲೆ, ಸ್ಕೆಚ್, ಜಿ.ಪಿ.ಎಸ್ ದತ್ತಾಂಶಗಳನ್ನು ಆಧರಿಸಿ ಪ್ರಸ್ತಾಪಿತ ಬ್ಲಾಕ್ ಹಾಗೂ ಸ.ನಂ.ನಲ್ಲಿರುವ ಬ್ಲಾಕ್‌ನ ಗಡಿ ಹಾಗೂ ವಿಸ್ತೀರ್ಣವನ್ನು ಭೂಮಾಪಕರು ಮೋಜಣಿ ಮಾಡಿ ದತ್ತಾಂಶ ಸಂಗ್ರಹಿಸಲಿದ್ದಾರೆ.
ಭೂ ಅನುಭೋಗದಾರ ಸ್ಥಳದಲ್ಲಿದ್ದು ತಮ್ಮ ಅನುಭೋಗದಲ್ಲಿರುವ ಪ್ರದೇಶವನ್ನು ತೋರಿಸಿ ಅಗತ್ಯ ದಾಖಲೆಗಳನ್ನು ಸಲ್ಲಿಸಿದರೆ ಅದರ ಆಧಾರದ ಮೇಲೆ ಸದರಿಯವರ ಆ ಪ್ರದೇಶದ ವಿಸ್ತೀರ್ಣವನ್ನು ಮೋಜಣಿ ಮಾಡಿಕೊಂಡು ಡಿಜಿಪಿಎಸ್ ದತ್ತಾಂಶ ಹಾಗೂ ವಿಸ್ತೀರ್ಣದ ವಿವರಗಳನ್ನು ಸಂಗ್ರಹಿಸಿಕೊಂಡು ನಿಯಮಾನುಸಾರ ಕ್ರಮ ವಹಿಸಲಿದ್ದಾರೆ' ಎಂದು ತಹಶೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೆಳಕಂಡ ಸ್ಥಳದಲ್ಲಿ ಸರ್ವೆ ಕಾರ್ಯ.

ಹೊಸನಗರ ತಾಲ್ಲೂಕಿನ ಕೆಳಕಂಡ ಗ್ರಾಮ ಹಾಗೂ ಸರ್ವೇ ನಂಬ‌ರ್‌ಗಳಲ್ಲಿ ಸಮೀಕ್ಷಾ ಕಾರ್ಯ ನಡೆಯಲಿದೆ.
ಆಲುವಳ್ಳಿ ಗ್ರಾಮದ ಸರ್ವೆ ನಂ -13, 14, 15, 115, 116.
ಬಸವಾಪುರ ಗ್ರಾಮದ ಸರ್ವೆ ನಂ -31.
ಬೆನವಳ್ಳಿ ಗ್ರಾಮದ ಸರ್ವೆ ನಂ -136.
ಬಿದರಹಳ್ಳಿ ಗ್ರಾಮದ ಸರ್ವೆ ನಂ -47.
ಚಿಕ್ಕಜೇನಿ ಗ್ರಾಮದ ಸರ್ವೆ ನಂ -17, 22.
ಹಾರೋಹಿತ್ಲು ಗ್ರಾಮದ ಸರ್ವೆ ನಂ -27, 28, 31.
ಹಿರೇಮೈತಿ ಗ್ರಾಮದ ಸರ್ವೆ ನಂ -7, 8, 25.
ಹೊಸಕೆಸರೆ ಗ್ರಾಮದ ಸರ್ವೆ ನಂ -63, 68.
ಹೊಸೂರು ಗ್ರಾಮದ ಸರ್ವೆ ನಂ -4.
ಜೇನಿ ಗ್ರಾಮದ ಸರ್ವೆ ನಂ -9, 86, 87.
ಕಾರಕ್ಕಿ ಗ್ರಾಮದ ಸರ್ವೆ ನಂ -10, 35.
ಕೊಡೂರು ಗ್ರಾಮದ ಸರ್ವೆ ನಂ -59, 60.
ಕುಸುಗುಂಡಿ ಗ್ರಾಮದ ಸರ್ವೆ ನಂ -10.
ಮಸಗಲ್ಲಿ ಗ್ರಾಮದ ಸರ್ವೆ ನಂ -49.
ಮಸರೂರು ಗ್ರಾಮದ ಸರ್ವೆ ನಂ -90, 94.
ಮತ್ತಿಕೈ ಗ್ರಾಮದ ಸರ್ವೆ ನಂ -160.
ಮುತ್ತೂರು ಗ್ರಾಮದ ಸರ್ವೆ ನಂ -24, 26.
ಪುಣಜೆ ಗ್ರಾಮದ ಸರ್ವೆ ನಂ -5.
ತಳಲೆ ಗ್ರಾಮದ ಸರ್ವೆ ನಂ -61.
ತಮ್ಮಡಿಕೊಪ್ಪ ಗ್ರಾಮದ ಸರ್ವೆ ನಂ -11, 12, 14, 29.

BIG UPDATE...


Discover more from Prasarana news

Subscribe to get the latest posts sent to your email.

  • Related Posts

    DEER ACCIDENT:ಕಾರಿಗೆ ಡಿಕ್ಕಿ ಜಿಂಕೆ ಸಾವು…

    ಹೊಸನಗರ: ಪಟ್ಟಣ ಸಮೀಪ ಕಲ್ಲುಹಳ್ಳ ಬಳಿ ಬೈಂದೂರು ರಾಣಿಬೆನ್ನೂರು ರಾಷ್ಟ್ರೀಯ ಹೆದ್ದಾರಿ 766ಸಿ ಯಲ್ಲಿ ಚಲಿಸುತ್ತಿದ್ದ ಕಾರಿಗೆ  ಜಿಂಕೆಯೊಂದು ಡಿಕ್ಕಿ ಹೊಡೆದು ಸಾವನ್ನಪ್ಪಿದ ಘಟನೆ ಶುಕ್ರವಾರ ನಡೆದಿದೆ.ಹೊಸನಗರದಿಂದ ಹೋಗುತ್ತಿದ್ದ ಕಾರಿಗೆ ರಸ್ತೆ ಪಕ್ಕದಿಂದ ರಭಸದಲ್ಲಿ ಓಡಿ ಬಂದ ಜಿಂಕೆ ಡಿಕ್ಕಿ ಹೊಡೆದಿದ್ದು…

    Read more

    BRAHMESHWAR:ಏ.20 ರಂದು ಇತಿಹಾಸ ಪ್ರಸಿದ್ಧ ಶ್ರೀ ವೀರಭದ್ರೇಶ್ವರ ದೇವಸ್ಥಾನದ ನೂತನ ಶಿಲಾಮಯ ದೇಗುಲದ ಅಡಿಗಲ್ಲು ಸಮಾರಂಭ..

    ಹೊಸನಗರ: ಐತಿಹಾಸಿಕ ಹಿನ್ನೆಲೆಯ ಬ್ರಹ್ಮೇಶ್ವರದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ನೂತನ ಶಿಲಾಮಯ ಅಧಿಷ್ಠಾನ ಅಡಿಗಲ್ಲು ಸಮಾರಂಭ ನಾಳೆ ಬೆಳಿಗ್ಗೆ 10.30 ಕ್ಕೆ ಸಂಸದರಾದ ಬಿ ವೈ ರಾಘವೇಂದ್ರ ನೆರವೇರಿಸಲಿದ್ದಾರೆ ಎಂದು ಶ್ರೀ ವೀರಭದ್ರೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಶ್ರೀ ಸುಧೀರ್…

    Read more

    Leave a Reply

    Discover more from Prasarana news

    Subscribe now to keep reading and get access to the full archive.

    Continue reading