U T KHADAR:ತಾಳ್ಮೆ ಪ್ರತಿಯೊಬ್ಬರ ಯಶಸ್ಸಿನ ಮೂಲ… ಸೌಹಾರ್ದ ಸಂಗಮ ಸಮಾವೇಶದಲ್ಲಿ ಯು.ಟಿ.ಖಾದರ್  ಕಿವಿ ಮಾತು..

ಹೊಸನಗರ; ತಾಳ್ಮೆ ಪ್ರತಿಯೊಬ್ಬರ ಯಶಸ್ಸಿನ ಮೂಲ ಎಂದು ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ತಿಳಿಸಿದರು.
ತಾಲೂಕಿನ ಮೇಲಿನಬೆಸಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮುಹಿಯುದ್ದೀನ್ ಜುಮ್ಮ ಮಸೀದಿ ಆವರಣದಲ್ಲಿ ಎಸ್‌ಎಸ್‌ಎಫ್, ಎಸ್‌ವೈಎಸ್ ಹಾಗೂ ಎಮ್‌ಜೆಎಮ್ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಸೌಹಾರ್ದ ಸಂಗಮ ಸಮಾವೇಶದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಬಾಲ್ಯದಿಂದಲೇ ಪ್ರತಿಯೊಬ್ಬರೂ ತಾಳ್ಮೆ, ಕ್ಷಮಗುಣ, ಅಗತ್ಯಕ್ಕೆ ತಕ್ಕಂತೆ ಮಾತನಾಡುವುದು, ಸಂಕಷ್ಟದಲ್ಲಿದ್ದವರಿಗೆ ಸಹಾಯ ಹಸ್ತ ನೀಡುವುದು ರೂಡಿಸಿಕೊಂಡಲ್ಲಿ ಸಮಾಜದಲ್ಲಿ ನಿಮ್ಮ ಸ್ಥಾನಮಾನಗಳು ಉತೃಷ್ಟಮಟ್ಟದಲ್ಲಿದ್ದು, ಜನಮನ್ನಣೆ ಗಳಿಸಲು ಸಾಧ್ಯವಿದೆ ಎಂದರು.
ಉತ್ತಮ ವ್ಯಕ್ತಿತ್ವ ಹೊಂದಿ ಪ್ರತಿಯೊಬ್ಬರನ್ನು ಪ್ರೀತಿಸುವ ವ್ಯಕ್ತಿಯನ್ನು ಅಲ್ಲಾಹ: ಸಹ ಇಷ್ಟ ಪಡುತ್ತಾನೆ. ಉತ್ತಮ ಸಂಸ್ಕಾರ, ವ್ಯಕ್ತಿತ್ವ ಹೊಂದುವ ಯುವಜನತೆ ದೇಶದ ಹಾಗೂ ಕುಟುಂಬದ ಸಂಪತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರತಿಯೊಬ್ಬರೂ ಮಕ್ಕಳಿಗೆ ಉತ್ತಮ ಧಾರ್ಮಿಕ ಹಾಗೂ ಲೈಕಿಕ ಶಿಕ್ಷಣ ನೀಡಿ ಬೇಕು. ಎಂತಹ ಕಠಿಣ ಸಮಸ್ಯೆಗಳೇ ಇರಲಿ, ಅದಕ್ಕೆ ಪರಿಹಾರ ಕಂಡು ಕೊಳ್ಳಲು ಶೈಕ್ಷಣ ಕ ಕ್ಷೇತ್ರದಿಂದ ಮಾತ್ರವೇ ಸಾಧ್ಯವೆಂದರು.
ಯಾವುದೇ ಚುನಾಯಿತ ಜನಪ್ರತಿನಿಧಿಗಳು, ಸರ್ಕಾರಗಳು ಸರ್ಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸ ಬಹುದೇ ವಿನಹ: ಒಂದು ಕುಟುಂಬ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿಲ್ಲ. ಅಂತಹ ಸಮಸ್ಯೆಗಳ ಪರಿಹಾರ ಕಂಡುಕೊಳ್ಳಲು ಕುಟುಂಬದ ವಿದ್ಯಾವಂತ ಯುವಸಮೂಹದಿಂದ ಮಾತ್ರವೇ ಸಾಧ್ಯವೆಂದರು.
ಲಿಂಗಭೇದ ತೊರೆದು ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದಲ್ಲಿ ಕುಟುಂಬದಲ್ಲಿ ಶಾಂತಿ ಸೌರ್ಹಾದತೆ ನೆಲೆಸಿ ಉತ್ತಮ ನಾಗರೀಕರಾಗಲು ಶಿಕ್ಷಣ ಸಹಕಾರಿ ಆಗಲಿದೆ ಎಂದರು.
ರಿಪ್ಪನ್‌ಪೇಟೆಯ ಎಮ್‌ಜೆಎಮ್ ಖತೀಬರಾದ ಬಹು|| ಮುನೀರ್ ಸಖಾಫಿ ಕಾರ್ಯಕ್ರಮ ಉದ್ಘಾಟಿಸಿದರು. ರಾಷ್ಟಿçÃಯ ಸುನ್ನೀ ಯುವಜನ ಸಂಘದ ಪ್ರಧಾನ ಕಾರ್ಯದರ್ಶಿ ಬಹು|| ಡಾ. ಎಮ್ಮೆಸ್ಸೆಂ ಅಬ್ದುಲ್ ರಶೀದ್ ಝೈನಿ ಅಲ್ ಕಾಮಿಲ್ ಸಖಾಫಿ ಮುಖ್ಯ ಭಾಷಣ ನೆರವೇರಿಸಿದರು. 
ಜಯನಗರ ಎಮ್‌ಜೆಎಮ್ ಅಧ್ಯಕ್ಷ ಬಹು|| ಅಬ್ದುಲ್ ಖಾದರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಖತೀಬರಾದ ಬಹು|| ಶಾಹುಲ್ ಹಮೀದ್ ಸಖಾಫಿ, ಬಹು|| ಉಮರುಲ್ ಫಾರೂಕ್ ಸಖಾಫಿ, ಎಸ್‌ಎಸ್‌ಎಫ್ ಅಧ್ಯಕ್ಷ ನಾಸೀರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ಚಂದ್ರಮೌಳಿ, ಬಹು|| ಸಿದ್ದೀಖಾ ಹಾಜಿ, ಹೆಚ್. ಹಚಿಝ, ಮುಹಮ್ಮದ್ ಜೆ.ಎಂ. ಆಶ್ರಫ್ ಅಹ್ಮದ್, ಯಾಸೀರ್ ಅಹ್ಮದ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

U T KHADAR.


Discover more from Prasarana news

Subscribe to get the latest posts sent to your email.

  • Related Posts

    DEPARTMENT OF HORTICULTURAL:ತಾಳೆ ಬೆಳೆ ವಿಸ್ತರಣೆಗೆ ಅರ್ಜಿ ಆಹ್ವಾನ

    ಹೊಸನಗರ: 2025-26ನೇ‌ ಸಾಲಿನ ಕೇಂದ್ರ ಪುರಸ್ಕೃತ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ ತಾಳೆಬೆಳೆ ಯೋಜನೆ ಅಡಿಯಲ್ಲಿ  ತಾಲೂಕಿನಲ್ಲಿ ಹೊಸದಾಗಿ ತಾಳೆ ಬೆಳೆಯನ್ನು ಬೆಳೆಯಲು ಇಚ್ಛಿಸುವ ರೈತರಿಗೆ ಉಚಿತವಾಗಿ ತಾಳೆ ಸಸಿಗಳನ್ನು ವಿತರಿಸಿ, ಪ್ರಸಕ್ತ  ಹಾಗೂ ಮುಂದಿನ ಮೂರು ವರ್ಷಗಳ ಕಾಲ ನೆಟ್ಟ…

    Read more

    CLOSING CEREMONY: ಕಾಲೇಜಿನ ಬೆಳವಣಿಗೆಯಲ್ಲಿ ಹಳೆಯ ವಿದ್ಯಾರ್ಥಿಗಳ ಕೊಡುಗೆ ನಿರಂತರವಾಗಿರಬೇಕು:ಬೇಳೂರು ಗೋಪಾಲಕೃಷ್ಣ…

    ಹೊಸನಗರ: ಪ್ರತಿಯೊಬ್ಬ ವಿದ್ಯಾರ್ಥಿಯ ತಮ್ಮ ಶಿಕ್ಷಣದ ನಂತರ ತಾವು ಓದಿದ ಕಾಲೇಜಿನ ಅಭಿವೃದ್ಧಿಯಲ್ಲಿ ಕೈಜೋಡಿಸಬೇಕು ಜೊತೆಗೆ ನಿರಂತರವಾಗಿ ಆ ಕಾಲೇಜಿನೊಂದಿಗೆ ಸಂಪರ್ಕವನ್ನು ಹೊಂದಿರಬೇಕು ಇದು ಆ ಕಾಲೇಜಿನ ಏಳಿಗೆಗೆ ಸಹಕಾರಿಯಾಗಲಿದೆ ಎಂದು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.ಇಂದು ಹೊಸನಗರ ಕೊಡಚಾದ್ರಿ…

    Read more

    Leave a Reply

    Discover more from Prasarana news

    Subscribe now to keep reading and get access to the full archive.

    Continue reading