

ಹೊಸನಗರ: ಜೆಜೆಎಂ ಕುಡಿಯುವ ನೀರು ಯೋಜನೆ ಅಡಿಯಲ್ಲಿ ಕುಡಿಯುವ ನೀರು ನಿರ್ವಹಣೆ ಮಾಡಬೇಕಾಗಿದೆ. ಇರುವ ನೀರಿನ ಲಭ್ಯತೆ ಆಧಾರದಲ್ಲಿ ನೀರು ಸರಬರಾಜು ಮಾಡಲು ಯೋಜನೆ ರೂಪಿಸಬೇಕಾಗಿದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ತಿಳಿಸಿದರು.
ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ನಡೆದ ತಾಲ್ಲೂಕು ಕುಡಿಯುವ ನೀರು ನಿರ್ವಹಣೆ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಿಪ್ಪನ್ಪೇಟೆ, ಹರಿದ್ರಾವತಿ, ಕೆಂಚನಾಲ, ಜೇನಿ, ಮೇಲಿನ ಬೆಸಿಗೆ, ಅರಸಾಳು, ಪುರಪ್ಪೆಮನೆ, ಮಾರುತಿಪುರ, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಅಧಿಕವಾಗಿದೆ ಎಂದು ಪಿಡಿಒ ಗಳು ಸಭೆ ಗಮನಕ್ಕೆ ತಂದರು. ಇದಕ್ಕೆ ಉತ್ತರಿಸಿದ ಶಾಸಕ ಬೇಳೂರು, ಅಗತ್ಯ ಬಿದ್ದರೇ ಕೊಳವೆಬಾವಿ ಕೊರೆಸಿ. ಸಾಧ್ಯವಾದಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಿ. ಇಲ್ಲಿನ ಅಧಿಕಾರಿಗಳು ಸಮಸ್ಯೆಗೆ ತಕ್ಷಣ ಸ್ಪಂದಿಸಬೇಕಾಗಿದೆ ಎಂದು ಸೂಚಿಸಿದರು.
ಬೋರ್ವೆಲ್ ಗಳನ್ನು ಕೊರೆದರೂ ನೀರು ಬರುತ್ತಿಲ್ಲ. 700 ಅಡಿವರೆಗೂ ಕೊಳವೆಬಾವಿಗಳು ವಿಫಲವಾಗುತ್ತಿದೆ. ಎಲ್ಲಾ ಮನೆಗಳಿಗೂ ನೀರು ಸರಬರಾಜು ಮಾಡಲು ಸಾಧ್ಯ ಆಗುತ್ತಿಲ್ಲ ಎಂದು ಗ್ರಾಮ ಪಂಚಾಯಿತಿ ಪಿಡಿಒ ಸಭೆ ಗಮನಕ್ಕೆ ತಂದರು. ಇದಕ್ಕೆ ಉತ್ತರ ನೀಡಿದ ಶಾಸಕ ಬೇಳೂರು ಗೋಪಾಲಕೃಷ್ಣ ಒಳ್ಳೆಯ ಪಾಯಿಂಟ್ ನೋಡಿ ಬೋರ್ ಕೊರೆಸಿ. ಅಲ್ಲದೆ ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡು ಬೋರ್ ಕೊರೆಸಿ ಎಂದು ಸೂಚಿಸಿದರು.
ಹೊಸನಗರ ಪಟ್ಟಣದಲ್ಲಿ ನೀರು ನಿರ್ವಹಣೆ ಸಧ್ಯಕ್ಕೆ ಸಮಸ್ಯೆ ಇಲ್ಲ. ನಂತರ ಕಲ್ಲು ಹಳ್ಳ ಸಮೀಪದಲ್ಲಿ ದಂಡೆ ನಿರ್ಮಾಣ ಮಾಡಿ ನೀರು ತರಲು ಉದ್ದೇಶಿಸಲಾಗಿದೆ ಎಂದು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಹರೀಶ್ ತಿಳಿಸಿದರು. ತಕ್ಷಣ ಹಳ್ಳಕ್ಕೆ ದಂಡೆ ನಿರ್ಮಾಣ ಮಾಡಿ ನೀರು ಸರಬರಾಜು ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಗೆ ಹಾಜರಾಗದ ಮೆಸ್ಕಾಂ ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದ ಶಾಸಕ ಬೇಳೂರು ಗೋಪಾಲಕೃಷ್ಣ ಇಂತಹ ಪರಿಸ್ಥಿತಿಯಲ್ಲಿ ಜನರು ಸಮಸ್ಯೆ ಬಗೆಹರಿಸಲು ಸಭೆ ಕರೆದರೇ ಮೆಸ್ಕಾಂ ಅಧಿಕಾರಿಗಳು ಸಭೆಗೆ ಬಾರದೇ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ. ಇಂತಹ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ತಾಲ್ಲೂಕು ಪಂಚಾಯಿತಿ ಇಒಗೆ ಸೂಚಿಸಿದರು.
ಸಭೆಯಲ್ಲಿ ತಹಸೀಲ್ದಾರ್ ರಶ್ಮಿ ಹಾಲೇಶ್, ತಾಲ್ಲೂಕು ಪಂಚಾಯಿತಿ ಇಒ ವೈ. ನರೇಂದ್ರ ಕುಮಾರ್, ಶಾಸಕರ ಆಪ್ತ ಕಾರ್ಯದರ್ಶಿ ಮಂಜು ಸಣ್ಣಕ್ಕಿ ಇದ್ದರು.
TASK FORCE...
Discover more from Prasarana news
Subscribe to get the latest posts sent to your email.