

ಹೊಸನಗರ: ತಾಲೂಕು ಪ್ರವಾಸೋದ್ಯಮ ಕೇಂದ್ರವಾಗಿ ರೂಪುಗೊಳ್ಳುತ್ತಿದ್ದು ಇದಕ್ಕೆ ಪೂರಕವಾಗುವಂತಹ ಎಲ್ಲ ಕಾಮಗಾರಿಗಳು ಅತ್ಯಂತ ಬರದಿಂದ ಸಾಗುತ್ತಿದೆ ಎಂದು ಸಂಸದರಾದ ಬಿ ವೈ ರಾಘವೇಂದ್ರ ತಿಳಿಸಿದರು.
ಹೊಸನಗರ ಪಟ್ಟಣ ಸಮೀಪ ನಿರ್ಮಾಣ ಹಂತದ ಸುತ್ತ ಪರ್ಯಾಯ ಸೇತುವೆ ಹಾಗೂ ಬೇಕ್ಕೊಡಿ ಸೇತುವೆ ಕಾಮಗಾರಿ ವೀಕ್ಷಿಸಿ ಮಾತನಾಡಿದ ಅವರು ಬೈಂದೂರ್-ರಾಣಿಬೆನ್ನೂರು ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಸೇತುವೆ ಯಾದಂತಹ ಈ ಸುತ್ತ ಪರ್ಯಾಯ ಸೇತುವೆ ಕಾಮಗಾರಿ ಅತ್ಯಂತ ವೇಗವಾಗಿ ಸಾಗುತ್ತಿದೆ.
ಪಟ್ಟಣದ ಮಾವಿನಕೊಪ್ಪದಿಂದ ಅಡಗೋಡಿಯವರೆಗಿನ ರಸ್ತೆಯಲ್ಲಿ ಸುಮಾರು 122 ತಿರುಗುಗಳಿದ್ದು ಅದನ್ನು ನೇರ ರಸ್ತೆ ಯಾಗಿ ನಿರ್ಮಾಣ ಮಾಡುವ ಈ ಕಾಮಗಾರಿ ಇಂದ ಒಟ್ಟು ದೂರವಾದ 34 ಕಿಲೋಮೀಟರ್ ದೂರವನ್ನು ಕೇವಲ 13 ಕಿ ಮಿ ಗೆ ಇಳಿಕೆಯಾಗುತ್ತಿದೆ ಇದರಿಂದ ಕೇವಲ 15 ನಿಮಿಷಗಳಲ್ಲಿ ಹದಿಮೂರು ಕಿಲೋಮೀಟರ್ಗಳು ಸುಖಕರ ಪ್ರಯಾಣವನ್ನು ಪ್ರವಾಸಿಗರು ಮಾಡಬಹುದು ಎಂದರು.
ಒಟ್ಟು 320 ಕೋಟಿ ಅನುದಾನದಲ್ಲಿ ಈ ಒಂದುವರೆ ಕಿಲೋಮೀಟರ್ ಉದ್ದದ ಬದಲಿಸೇತುವೆ ನಿರ್ಮಾಣವಾಗುತ್ತಿದ್ದು ಬೇಕ್ಕೋಡಿ ಸೇತುವೆ ಕಾಮಗಾರಿಗೆ 200 ಕೋಟಿ ಅನುದಾನ ಬಿಡುಗಡೆಯಾಗಿ ಆ ಕಾಮಗಾರಿಯು ಸಹ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಈ ಭಾಗದ ಪ್ರವಾಸೋದ್ಯಮವನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ನಗರಕೋಟೆ, ದೇವಗಂಗೆ ಕೊಳ, ಜೈನಬಸದಿ, ಅಭಿವೃದ್ಧಿ ಹಾಗೂ ಕೊಡಚಾದ್ರಿ ಕೊಲ್ಲೂರು ನಡುವಿನ ಕೇಬಲ್ ಕರ್ ಸಂಪರ್ಕಕ್ಕೆ ಚಿಂತನೆ ನಡೆದಿದ್ದು ಶೀಘ್ರ ಅವುಗಳ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಲಾಗುವುದು ಎಂದು ತಿಳಿಸಿದರು.
ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷರಾದ ಸುಬ್ರಮಣ್ಯ ಮತ್ತಿಮನ್ ಜಿಲ್ಲಾ ಒಬಿಸಿ ಮೋರ್ಚಾದ ಅಧ್ಯಕ್ಷರಾದ ಎಂ ಎನ್ ಸುಧಾಕರ್, ಬಿಜೆಪಿ ಜಿಲ್ಲಾ ನಿಕಟಪೂರ್ವ ಅಧ್ಯಕ್ಷರಾದ ಟಿ ಡಿ ಮೇಘರಾಜ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸುರೇಶ್ ಸ್ವಾಮಿರಾಮ್, ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷ ವೀರೇಶ್ ಅಲವಳ್ಳಿ. ಮಾಜಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾಲಗದ್ದೆ ಉಮೇಶ್, ಮುಖಂಡರಾದ ದೇವಾನಂದ್, ಗಣಪತಿ ಬೆಳಗೋಡು, ಕೆ ವಿ ಕೃಷ್ಣಮೂರ್ತಿ, ಮೋಹನ್ ಮಂಡಾನಿ ಮುಂತಾದವರು ಉಪಸ್ಥಿತರಿದ್ದರು.
SUTTA BRIDGE..
Discover more from Prasarana news
Subscribe to get the latest posts sent to your email.