SUHAS SHETTY:ಸುಹಾಸ್ ಶೆಟ್ಟಿ ಹತ್ಯೆ: ಟೈರ್‌ಗೆ ಬೆಂಕಿ ಹಚ್ಚಿ ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ..

ಹೊಸನಗರ: ಬಜರಂಗದಳ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯ ಖಂಡಿಸಿ ಹೊಸನಗರದ ಹಲವು ಹಿಂದೂಪರ ಸಂಘಟನೆಗಳು ಪ್ರತಿಭಟನೆಯನ್ನು ನಡೆಸಿದವು.
ಹೊಸನಗರ ಖಾಸಗಿ ಬಸ್ ನಿಲ್ದಾಣ ಮುಂಭಾಗ ನೆರೆದಿದ್ದ ಪ್ರತಿಭಟನಾಕಾರರು ಶಿವಮೊಗ್ಗ ಮಂಗಳೂರು ರಾಜ್ಯ ಹೆದ್ದಾರಿ ತಡೆ ನಡೆಸಿ ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಹತ್ಯೆಯಲ್ಲಿ ಭಾಗಿಯಾದವರ ವಿರುದ್ಧ ಘೋಷಣೆಗಳನ್ನು ಕೂಗಿದರು ಬಳಿಕ ರಸ್ತೆಯಲ್ಲಿ ಟೈಯರ್ ಗೆ ಬೆಂಕಿ ಹಚ್ಚಿ ಆಕ್ರೋಶವನ್ನು ವ್ಯಕ್ತಪಡಿಸಿದರು.
ನಂತರ ತಾಲೂಕು ಕಚೇರಿಯವರಿಗೆ ಮೆರವಣಿಗೆ ಮೂಲಕ ತೆರಳಿ ಅಲ್ಲಿ ತಹಶೀಲ್ದಾರ್ ಗೆ ಮನವಿಯನ್ನ ಸಲ್ಲಿಸಿದರು ಮನವಿ ಪತ್ರದಲ್ಲಿ ಸುಭಾಷ್ ಶೆಟ್ಟಿ ಅವರ ನ್ನು ಹಿಂದೂ ವಿರೋಧಿ ಜಿಹಾದ್ಗಳು ನಡು ರಸ್ತೆಯಲ್ಲಿ ಭೀಕರವಾಗಿ ಕೊಲೆ ಮಾಡಿದ್ದು ಇದನ್ನು ಹೊಸನಗರ ತಾಲೂಕಿನ ಸಮಸ್ತ ಹಿಂದೂ ಬಾಂಧವರು ಉಗ್ರವಾಗಿ ಖಂಡಿಸುತ್ತೇವೆ.
ರಕ್ಷಣೆ ಇಲಾಖೆಯ ಅಧಿಕಾರಿಗಳು ಕೆಲವು ದಿನಗಳ ಹಿಂದೆ ಸುಹಾಸ್ ಅವರಿಗೆ ಕೊಲೆ ಬೆದರಿಕೆ ಬಂದಿದ್ದರು ಅವರ ಆತ್ಮ ರಕ್ಷಣೆಗೆ ಯಾವುದೇ ಆಯುಧವನ್ನು ಇಟ್ಟುಕೊಳ್ಳಲು ಅವಕಾಶವನ್ನ ನೀಡದೇ ಇದ್ದದ್ದು ಕರ್ನಾಟಕ ರಾಜ್ಯ ಸರ್ಕಾರದ ಹಿಂದು ವಿರೋಧಿ ನೀತಿ ಇದಕ್ಕೆ ಕಾರಣವಾಗಿದೆ ಕೆಜಿ ಹಳ್ಳಿ ಮತ್ತು ಡಿ ಜೇ ಹಳ್ಳಿ ಹಾಗೂ ಹುಬ್ಬಳ್ಳಿ ಗಳ ಆರೋಪಿಗಳ ಮೇಲಿನ ಮುಖದ್ದಮೆಯನ್ನು ಕೈಬಿಟ್ಟು ಅವರಿಗೆ ಬ್ರದರ್ ಎಂದು ಕರೆದದ್ದು ರಾಜ್ಯದಲ್ಲಿ ಹಿಂದುಗಳನ್ನು ಕೊಚ್ಚಿ ಹಾಕಲು ಕಾರಣವಾಗಿದೆ ವೋಟ್ ಬ್ಯಾಂಕ್ ಗಳ ತುಷ್ಟಿಕರಣಕ್ಕಾಗಿ ರಾಜ್ಯದಲ್ಲಿ ಹಿಂದುಗಳ ಬದುಕು ಕಷ್ಟವಾಗಿದ್ದು ರಾಜ್ಯ ಸರ್ಕಾರದ ಹಿಂದು ವಿರೋಧಿ ನೀತಿಯನ್ನು ಖಂಡಿಸುತ್ತೇವೆ ಹಾಗೂ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮವನ್ನು ಕೈಗೊಳ್ಳುವಂತೆ ಮನವಿಯಲ್ಲಿ ಉಲ್ಲೇಖಿಸಲಾಗಿತ್ತು.
ಈ ಪ್ರತಿಭಟನೆಯಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷರಾದ ಸುಬ್ರಹ್ಮಣ್ಯ ಮತ್ತಿ ಮನೆ, ಬಿಜೆಪಿ ಜಿಲ್ಲಾ ಓಬಿಸಿ ಮೋರ್ಚಾ ಅಧ್ಯಕ್ಷರಾದ ಎಂ ಎನ್ ಸುಧಾಕರ್, ಹಿರಿಯ ಮುಖಂಡರಾದ ಉಮೇಶ್ ಕಂಚುಗಾರ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸುರೇಶ್ ಸ್ವಾಮಿರಾವ್, ಮಾಜಿ ತಾಲೂಕ ಪಂಚಾಯತ್ ಅಧ್ಯಕ್ಷ ವೀರೇಶ್ ಅಲವಳ್ಳಿ, ಮುಖಂಡರಾದ ಕೆವಿ ಕೃಷ್ಣಮೂರ್ತಿ, ಗಣಪತಿ ಬೆಳಗೋಡು, ಮೋಹನ್ ಮಂಡಾನಿ ನಗರ ನಿತಿನ್, ರಮೇಶ್, ಸತೀಶ್ ಸೊನಲೇ ಮುಂತಾದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪಾಲ್ಗೊಂಡಿದ್ದರು...

SUHAS SHETTY.


Discover more from Prasarana news

Subscribe to get the latest posts sent to your email.

  • Related Posts

    RIPPONPET NEWS:ಕಳಸವಳ್ಳಿ ಸಿಗಂದೂರು ಸೇತುವೆಗೆ ಬಿ.ಎಸ್.ಯಡಿಯೂರಪ್ಪ ಹೆಸರಿಡುವಂತೆ ಒತ್ತಾಯ…

    ರಿಪ್ಪನ್‌ಪೇಟೆ: ಇದೇ 14 ರಂದು ಲೋಕಾರ್ಪಣೆಗೊಳ್ಳುತ್ತಿರುವ ಅಂಬಾರಗೊಡ್ಲು-ಕಳಸವಳ್ಳಿ ಸಿಗಂದೂರು ಸೇತುವೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಹೆಸರಿಡುವಂತೆ ಹೊಸನಗರ ತಾಲ್ಲೂಕು ಆಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಸರ್ಕಾರವನ್ನು ಆಗ್ರಹಿಸಿ ನಾಡಕಛೇರಿಯ ಉಪತಹಶಿಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿರುವುದಾಗಿ ಹೊಸನಗರ ಆಖಿಲ ಭಾರತ…

    Read more

    RIPPONPET NEWS: ಇರುಳುಗಣ್ಣು ನಿವಾರಣೆ ವಿಟಮಿನ್ ಡ್ರಾಪ್ ಸೇವಿಸಿ 10 ಕ್ಕೂ ಆಧಿಕ ಮಕ್ಕಳು ಅಸ್ವಸ್ಥ…..

    ರಿಪ್ಪನ್‌ಪೇಟೆ;-ಮಂಗಳವಾರ ದಿನ ಅಂಗನವಾಡಿ ಮಕ್ಕಳಿಗೆ ನೀಡಲಾದ ವಿಟಮಿನ್ ಹನಿ ಡ್ರಾಪ್ ಸೇವನೆಯಿಂದಾಗಿ 11 ಕ್ಕೂ ಅಧಿಕ ಮಕ್ಕಳಲ್ಲಿ ವಾಂತಿ ಬೇದಿ ಕಾಣಿಸಿಕೊಂಡು ಅಸ್ವಸ್ಥರಾಗಿರುವ ಘಟನೆ ಬೆಳ್ಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಿರೇಸಾನಿ ಆಂಗನವಾಡಿ ಕೇಂದ್ರದಲ್ಲಿ ನಡೆದಿದೆ.ಇರುಳುಗಣ್ಣು ನಿವಾರಣೆಗಾಗಿ  ಮುಂಜಾಗ್ರತಾ ಕ್ರಮವಾಗಿ ಅAಗನವಾಡಿಯಲ್ಲಿ…

    Read more

    Leave a Reply

    Discover more from Prasarana news

    Subscribe now to keep reading and get access to the full archive.

    Continue reading