

ಹೊಸನಗರ: ತಾಲೂಕಿನ ಯಡೂರು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ನಿಧಿ ಬಿ. ಜಿ. ಈ ಬಾರಿಯ ಎಸ್ ಎಸ್ ಎಲ್ ಸಿ ಯಲ್ಲಿ 625 ಕ್ಕೆ 621 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ 5 ನೇ ರ‌್ಯಾಂಕ್ ಪಡೆದಿದ್ದು, ಇಂದು ಅವರ ನಿವಾಸಕ್ಕೆ ಮಾಜಿ ಗೃಹ ಮಂತ್ರಿ, ತೀರ್ಥಹಳ್ಳಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಭೇಟಿ ನೀಡಿ ಅಭಿನಂದಿಸಿದರು. ಬಡತನ ಮತ್ತು ಗ್ರಾಮೀಣ ಪ್ರದೇಶದ ಅನಾನುಕೂಲತೆಯ ನಡುವೆಯೂ ನಿಧಿ ಸಾಧನೆ ಶ್ಲಾಘನೀಯ ಹಾಗೂ ಇತರೆ ಮಕ್ಕಳಿಗೆ ಸ್ಫೂರ್ತಿದಾಯಕವಾಗಿದೆ ಎಂದರು. ಈ ವೇಳೆ ಬಿಜೆಪಿ ಮುಖಂಡ ಹಾಲಗದ್ದೆ ಉಮೇಶ್, ಬಂಕ್ರಿಬೀಡು ಮಂಜುನಾಥ್, ರಾಜೇಶ್ ಹಿರೇಮನೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
SSLC 5TH RANK..
Discover more from Prasarana news
Subscribe to get the latest posts sent to your email.