SOLAR AND SCOOTER: ಶಾಸಕರಿಂದ ಫಲಾನುಭವಿಗಳಿಗೆ ತ್ರಿಚಕ್ರ ವಾಹನ ಹಾಗೂ ಸೋಲಾರ್ ವಿತರಣೆ..

ಹೊಸನಗರ: ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಇಲಾಖೆ ವತಿಯಿಂದ ಬುಧವಾರ ತಾಲೂಕು ಪಂಚಾಯತ್ ಆವರಣದಲ್ಲಿ ವಿಕಲಚೇತನರಿಗೆ  ತ್ರಿಚಕ್ರ ವಾಹನ ಹಾಗೂ ಪರಿಶಿಷ್ಟ ಪಂಗದವರಿಗೆ ಸೋಲಾರ್ ಗಳನ್ನ ಶಾಸಕರಾದ ಗೋಪಾಲಕೃಷ್ಣ ಬೇಳೂರು ವಿತರಿಸಿದರು.
ವಿತರಣೆ ಬಳಿಕ ಮಾತನಾಡಿದ ಅವರು ಸರ್ಕಾರ ವಿವಿಧ ಜನಪರ ಯೋಜನೆಗಳ ಮೂಲಕ ಕೋಟ್ಯಾಂತರ ರೂಗಳನ್ನು ನಾಗರಿಕರಿಗೆ ಮೀಸಲಿಡುತ್ತಿದೆ ಈ ನಿಟ್ಟಿನಲ್ಲಿ ಅಂಗವಿಕಲರಿಗೆ ಉಚಿತ ಬೈಕ್ ಗಳನ್ನು ಹಾಗೆಯೇ ಪರಿಶಿಷ್ಟ ಪಂಗಡದವರಿಗೆ ಸೋಲಾರ್ ಗಳನ್ನ ವಿತರಿಸುವ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನಗಳಿಂದ ಗ್ಯಾರಂಟಿ ಸೇರಿ ವಿವಿಧ ಜನಪರ ಯೋಜನೆಗಳನ್ನ ನೀಡುತ್ತಲೇ ಬಂದಿದೆ ಅದರಲ್ಲಿಯೂ ಅಂಗವಿಕಲರಿಗೆ ಮುಖ್ಯ ವಾಹಿನಿಗೆ ಬರಲು ಸರ್ಕಾರ ವಿವಿಧ ಯೋಜನೆಗಳನ್ನು ರೂಪಿಸಿ ಪ್ರತ್ಯೇಕ ಅನುದಾನವನ್ನು ಮೀಸಲಿಡುತ್ತಿದೆ ಎಂದರು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಜೊತೆಯಲ್ಲಿ ರಾಜ್ಯದ ಅಭಿವೃದ್ಧಿಯಲ್ಲಿ ಜನಪರವಾದ ಯೋಜನೆಗಳನ್ನು ಅನುಷ್ಠಾನಗೊಳಿಸುವುದರಲ್ಲಿ ರಾಜ್ಯ ಸರ್ಕಾರ ಪ್ರಾಮಾಣಿಕವಾದ ಕೆಲಸವನ್ನು ಮಾಡುತ್ತಿದ್ದು ರಾಜ್ಯದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳನ್ನು ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ ಎಂದರು. ತಹಸಿಲ್ದಾರ್ ರಶ್ಮಿ ಎಚ್ ಜೆ,
ತಾಲೂಕ್ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ನರೇಂದ್ರ ಕುಮಾರ್, ಮುಂತಾದ ಅಧಿಕಾರಿಗಳು ಉಪಸ್ಥಿತರಿದ್ದರು.

SOLAR AND SCOOTER:...


Discover more from Prasarana news

Subscribe to get the latest posts sent to your email.

  • Related Posts

    HOSANAGARA NEWS: ಹೊಸನಗರ ತಹಶೀಲ್ದಾರ್ ಸಾಗರಕ್ಕೆ ವರ್ಗಾವಣೆ…

    ಹೊಸನಗರ:ತಮ್ಮ ಉತ್ತಮ ಕಾರ್ಯ ವೈಕರಿಯ ಮೂಲಕ ಜನಮನ್ನಣೆ ಗಳಿಸಿದ್ದ ಹೊಸನಗರ ತಾಲೂಕಿನ ತಹಶೀಲ್ದಾರ್ ರಶ್ಮಿ ಹಾಲೇಶ್ ಅವರನ್ನು ಸಾಗರ ತಾಲೂಕಿಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.ರಶ್ಮಿ ಹಾಲೇಶ್ ಅವರನ್ನು ಸಾಗರಕ್ಕೆ ವರ್ಗಾವಣೆ ಗೊಳಿಸಲಾಗಿದ್ದು ಸಾಗರದ ತಹಶೀಲ್ದಾರ್ ಚಂದ್ರಶೇಖರ್ ನಾಯಕ್ ಅವರಿಗೆ…

    Read more

    HOSANAGARA NEWS: ನಟಿ ಸರೋಜಾ ದೇವಿ ನಿಧನ:  ಚುಂಚಾದ್ರಿ ಮಹಿಳಾ ಸಂಘದಿಂದ ಸಂತಾಪ..

    ಹೊಸನಗರ:ಬಹುಭಾಷಾ ನಟಿ ಬಿ. ಸರೋಜಾದೇವಿ (87) ಅವರು ಸೋಮವಾರ ನಿಧನರಾಗಿಧು. ಅವರ ನಿಧನಕ್ಕೆ   ಚುಂಚಾದ್ರಿ ಮಹಿಳಾ ಸಂಘ ಸಂತಾಪ ಸೂಚಿಸಿದೆ.ಹಿರಿಯ ನಟಿಯ ಅಗಲಿಕೆಗೆ ಶ್ರದ್ದಾಂಜಲಿ ಸಭೆ ನಡೆಸಿ ಮಾತನಾಡಿದ ಚುಂಚಾದ್ರಿ ಮಹಿಳಾ ಸಂಘದ ಅಧ್ಯಕ್ಷರಾದ ಮೈನಾವತಿ ರಾಜಮೂರ್ತಿ. ಆರೂವರೆ ದಶಕಗಳು ಚಿತ್ರರಂಗದಲ್ಲಿ‌…

    Read more

    Leave a Reply

    Discover more from Prasarana news

    Subscribe now to keep reading and get access to the full archive.

    Continue reading