SMART TV:ಅಂಗನವಾಡಿಗಳಿಗೆ ಸ್ಮಾರ್ಟ್ ಟಿವಿ ವಿಸ್ತರಣೆ…

ಹೊಸನಗರ: ಇಲ್ಲಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನೆ ಅಡಿಯಲ್ಲಿ ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ ಸ್ಮಾರ್ಟ್ ಟಿವಿ ವಿತರಣಾ ಕಾರ್ಯಕ್ರಮವನ್ನು ಈಡಿಗ ಸಭಾಭವನ ದಲ್ಲಿ ಹಮ್ಮಿಕೊಳ್ಳಲಾಗಿತ್ತು
ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಶಾಸಕ ಆರಗ ಜ್ಞಾನೇಂದ್ರ ತಂತ್ರಜ್ಞಾನ ಆಧಾರಿತ ಕಲಿಕಾ ಅಭಿವೃದ್ಧಿಗೆ ಸಹಾಯವಾಗಲು ಸ್ಮಾರ್ಟ್ ಟಿವಿಗಳನ್ನ ನೀಡಲಾಗುತ್ತಿದೆ ಅದರ ಸದ್ಬಳಕೆಯನ್ನು ಅಲ್ಲಿನ ಸಿಬ್ಬಂದಿಗಳು ಅಂಗನವಾಡಿಯ ಮಕ್ಕಳ ಕಲಿಕೆಗೆ ಸರಿಯಾಗಿ ಉಪಯೋಗಿಸಿಕೊಳ್ಳಬೇಕು ಎಂದರು ಹಾಗೆ  ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಶ್ರಮಕ್ಕೆ ಸರಿಯಾದ ವೇತನ ದೊರೆಯುತ್ತಿಲ್ಲ ಇತ್ತೀಚಿನ ದಿನಗಳಲ್ಲಿ ಕೂಲಿ ಕೆಲಸ ಮಾಡುವ ಒಬ್ಬರಿಗೆ 500 ಸಂಬಳವನ್ನು ನಿಗದಿಪಡಿಸಲಾಗಿದೆ ಆದರೆ ಅಂಗನವಾಡಿ ಕಾರ್ಯಕರ್ತರಿಗೆ ಕನಿಷ್ಠ ವೇತನವು ಸಹ ಸಿಗುತ್ತಿಲ್ಲ ಈ ಬಗ್ಗೆ ಮುಂದಿನ ಅಧಿವೇಶನದಲ್ಲಿ ಪ್ರಸ್ತಾಪಿಸುವುದಾಗಿ ಅವರು ತಿಳಿಸಿದರು.
ಬಳಿಕ ಮಾತನಾಡಿದ ಶಾಸಕ ಗೋಪಾಲಕೃಷ್ಣ ಬೇಳೂರು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಕೆಲಸವನ್ನು ಖಾಯಂಗೊಳಿಸುವಲ್ಲಿ ಸರ್ಕಾರ ದಿಟ್ಟ ಕ್ರಮವನ್ನು ಕೈಗೊಳ್ಳಬೇಕು ಇದಕ್ಕೆ ನಾನು ಸರ್ಕಾರವನ್ನ ಒತ್ತಾಯಿಸುತ್ತೇನೆ ಎಂದರು ಕೋವಿಡ್ ಸೇರಿ ವಿವಿಧ ಸಂದರ್ಭಗಳಲ್ಲಿ ಇವರ ಸೇವೆ ಗಣನೀಯವಾದದ್ದು ಅದನ್ನ ಎಂದಿಗೂ ಮರೆಯುವಂತಿಲ್ಲ ಹಾಗೆಯೇ ಕೆಪಿಸಿ ಶಾಲೆಗಳು ಆರಂಭವಾಗುವುದರಿಂದ ಯಾವುದೇ ಅಂಗನವಾಡಿಗಳಿಗೆ ತೊಂದರೆಯಾಗುವುದಿಲ್ಲ ಹಾಗೂ ಅವುಗಳನ್ನು ಮುಚ್ಚುವುದಿಲ್ಲ ಕೇವಲ ಮಕ್ಕಳ ಸಂಖ್ಯೆ ಗಣನೀಯವಾಗಿ ಇಳಿಕೆಯಾದರೆ ಮಾತ್ರ ಅಂಗನವಾಡಿಗಳನ್ನು ಮುಚ್ಚಿಸಲಾಗುವುದು ಆದ್ದರಿಂದ ಈ ಬಗ್ಗೆ ಯಾರಿಗೂ ಭಯಬೇಡ ಹಾಗೆಯೇ ಸರ್ಕಾರ ನೀಡಿರುವಂತಹ ಸ್ಮಾರ್ಟ್ ಟಿವಿಗಳನ್ನ ಸರಿಯಾಗಿ ಸದ್ಬಳಕೆ ಮಾಡಿಕೊಂಡು ಮಕ್ಕಳ ಕಲಿಕೆಗೆ ಅದನ್ನ ಉಪಯೋಗಿಸಿಕೊಳ್ಳಿ ಹಾಗೆಯೇ ಮಕ್ಕಳಂತೆ ಅವುಗಳನ್ನು ಸಹ ಮುತುವರ್ಜಿಯಿಂದ ನೋಡಿಕೊಳ್ಳುವ ಕೆಲಸ ನಿಮ್ಮದು. ಸರ್ಕಾರ ಅಂಗನವಾಡಿಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಈ ಹಿಂದೆ ನಿಮಗೆಲ್ಲಾ ಸ್ಮಾರ್ಟ್ ಫೋನ್ ಗಳನ್ನು ನೀಡಿತ್ತು ಅದರಂತೆಯೇ ಈಗ ಮಕ್ಕಳ ಕಲಿಕೆಯ ಉದ್ದೇಶದಿಂದ ಸ್ಮಾರ್ಟ್ ಟಿವಿಗಳನ್ನ ನೀಡುತ್ತಿದ್ದು ಸರ್ಕಾರದ ಮಹತ್ವಕಾಂಕ್ಷಿಯ ಯೋಜನೆ ಇದಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿಗಳಾದ ರಶ್ಮಿ ಹೆಚ್ ಜೇ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ನರೇಂದ್ರ ಕುಮಾರ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ನಾಗಪ್ಪ, ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪನಿರ್ದೇಶಕರಾದ ಕೃಷ್ಣಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ, ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿ ಹರೀಶ್ ಎಂ ಏನ್, ಚಿದಂಬರ್, ಉಪಸ್ಥಿತರಿದ್ದರು

SMART TV...


Discover more from Prasarana news

Subscribe to get the latest posts sent to your email.

  • Related Posts

    RIPPONPET NEWS:ಕಳಸವಳ್ಳಿ ಸಿಗಂದೂರು ಸೇತುವೆಗೆ ಬಿ.ಎಸ್.ಯಡಿಯೂರಪ್ಪ ಹೆಸರಿಡುವಂತೆ ಒತ್ತಾಯ…

    ರಿಪ್ಪನ್‌ಪೇಟೆ: ಇದೇ 14 ರಂದು ಲೋಕಾರ್ಪಣೆಗೊಳ್ಳುತ್ತಿರುವ ಅಂಬಾರಗೊಡ್ಲು-ಕಳಸವಳ್ಳಿ ಸಿಗಂದೂರು ಸೇತುವೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಹೆಸರಿಡುವಂತೆ ಹೊಸನಗರ ತಾಲ್ಲೂಕು ಆಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಸರ್ಕಾರವನ್ನು ಆಗ್ರಹಿಸಿ ನಾಡಕಛೇರಿಯ ಉಪತಹಶಿಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿರುವುದಾಗಿ ಹೊಸನಗರ ಆಖಿಲ ಭಾರತ…

    Read more

    RIPPONPET NEWS: ಇರುಳುಗಣ್ಣು ನಿವಾರಣೆ ವಿಟಮಿನ್ ಡ್ರಾಪ್ ಸೇವಿಸಿ 10 ಕ್ಕೂ ಆಧಿಕ ಮಕ್ಕಳು ಅಸ್ವಸ್ಥ…..

    ರಿಪ್ಪನ್‌ಪೇಟೆ;-ಮಂಗಳವಾರ ದಿನ ಅಂಗನವಾಡಿ ಮಕ್ಕಳಿಗೆ ನೀಡಲಾದ ವಿಟಮಿನ್ ಹನಿ ಡ್ರಾಪ್ ಸೇವನೆಯಿಂದಾಗಿ 11 ಕ್ಕೂ ಅಧಿಕ ಮಕ್ಕಳಲ್ಲಿ ವಾಂತಿ ಬೇದಿ ಕಾಣಿಸಿಕೊಂಡು ಅಸ್ವಸ್ಥರಾಗಿರುವ ಘಟನೆ ಬೆಳ್ಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಿರೇಸಾನಿ ಆಂಗನವಾಡಿ ಕೇಂದ್ರದಲ್ಲಿ ನಡೆದಿದೆ.ಇರುಳುಗಣ್ಣು ನಿವಾರಣೆಗಾಗಿ  ಮುಂಜಾಗ್ರತಾ ಕ್ರಮವಾಗಿ ಅAಗನವಾಡಿಯಲ್ಲಿ…

    Read more

    Leave a Reply

    Discover more from Prasarana news

    Subscribe now to keep reading and get access to the full archive.

    Continue reading