

ಹೊಸನಗರ: ಮಾಜಿ ಸಚಿವ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪನವರ ಹುಟ್ಟುಹಬ್ಬ ನಿಮಿತ್ತ ಹೊಸನಗರ ಬಿಜೆಪಿ ಮಂಡಲದಿಂದ ವಿವಿಧ ಸೇವ ಕಾರ್ಯಗಳನ್ನ ಮಾಡುವ ಮೂಲಕ ಆಚರಿಸಲಾಯಿತು.
ದೇವಾಲಯಗಳಲ್ಲಿ ವಿಶೇಷ ಪೂಜೆ ಜೊತೆಗೆ ಹೊಸನಗರ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಿ ಬಳಿಕ ರಾಮಚಂದ್ರ ಪುರ ಮಠದ ಗೋಶಾಲೆ ಹಾಗೂ ತಾಲೂಕಿನ ವಿವಿಧ ಗೋಶಾಲೆ ಗಳಿಗೆ ಮೇವುಗಳನ್ನ ನೀಡಿ ಮಾಜಿ ಶಾಸಕರ ಹುಟ್ಟು ಹಬ್ಬವನ್ನು ತಾಲೂಕು ಬಿಜೆಪಿ ಮಂಡಲ ಆಚರಿಸು ಈ ಸಂದರ್ಭದಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷರಾದ ಸುಬ್ರಮಣ್ಯ ಮತ್ತಿ ಮನೆ, ಜಿಲ್ಲಾ ಬಿಜೆಪಿ ಒಬಿಸಿ ಮೋರ್ಚಾದ ಅಧ್ಯಕ್ಷರಾದ ಎಂಎನ್ ಸುಧಾಕರ್ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸುರೇಶ್ ಸ್ವಾಮಿರಾವ್, ಮಾಜಿ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಹಾಲಗದ್ದೆ ಉಮೇಶ್, ಪ್ರಮುಖರಾದ ಗಣಪತಿ ಬೆಳಗೋಡು, ಶ್ರೀಪತಿ ರಾವ್, ಮೋಹನ್ ಮಂಡಾನಿ, ಬಸವರಾಜ್, ಗಣೇಶ್,ಸತೀಶ್, ರಮೇಶ್ ನೆರಲೆ, ಅಭಿಲಾಶ್ ಚಿಕ್ಕಮಣತಿ, ವಿಶ್ವನಾಥ್ ಗಂದರಳ್ಳಿ, ಮಹೇಂದ್ರ,ಕಿರಣ್. ಮುಂತಾದವರು ಉಪಸ್ಥಿತರಿದ್ದರು
SERVICE WORK..
Discover more from Prasarana news
Subscribe to get the latest posts sent to your email.