

ಬೆಂಗಳೂರು: ಕೆಲ ದಿನಗಳಿಂದ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ ಪಾರು ಸೀರಿಯಲ್ ಖ್ಯಾತಿಯ ನಟ ಶ್ರೀಧರ್ ನಾಯಕ್ ಇಂದು ನಿಧನರಾಗಿದ್ದಾರೆ.ಕಿರುತೆರೆಯ ಹಲವು ಸೀರಿಯಲ್ಗಳಲ್ಲಿ ಶ್ರೀಧರ್ ನಾಯಕ್ ನಟಿಸಿದ್ದಾರೆ. ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಪಾರು ಸೀರಿಯಲ್ನಲ್ಲಿ ನಾಯಕನ ಚಿಕ್ಕಪ್ಪನ ಪಾತ್ರದಲ್ಲಿ ಶ್ರೀಧರ್ ಹೆಚ್ಚು ಜನಪ್ರಿಯತೆ ಪಡೆದಿದ್ರು. ಇತ್ತಿಚೆಗಷ್ಟೇ ಪ್ರಸಾರ ಆರಂಭಿಸಿದ ವಧು ಸೀರಿಯಲ್ ನಲ್ಲೂ ಸಹ ವಧುವಿನ ಚಿಕ್ಕಪ್ಪನ ಪಾತ್ರದಲ್ಲಿ ಶ್ರೀಧರ್ ನಾಯಕ್ ನಟಿಸಿದ್ರು.ಸೀರಿಯಲ್ಗಳ ಜೊತೆಗೆ ಶ್ರೀಧರ್ ನಾಯಕ್ ಕೆಲ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಕಿಚ್ಚ ಸುದೀಪ್ ಅವರ ಸೂಪರ್ ಹಿಟ್ ಸಿನಿಮಾ ಮ್ಯಾಕ್ಸ್ ಚಿತ್ರದಲ್ಲೂ ಶ್ರೀಧರ್ ನಾಯಕ್ ನಟಿಸಿದ್ರು. ಕೆಲ ತಿಂಗಳ ಹಿಂದೆ ದಿಢೀರ್ ಆರೋಗ್ಯ ಸಮಸ್ಯೆ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ರು.ಶ್ರೀಧರ್ ನಾಯಯ್ ಅವರು ತೀವ್ರವಾದ ಇನ್ಫೆಕ್ಷನ್ಗೆ ಒಳಗಾಗಿದ್ರು, ಇದ್ರಿಂದ ನಟ ಗುರುತೇ ಸಿಗದಷ್ಟು ಬದಲಾಗಿದ್ರು. ಪ್ರತಿದಿನ ಚಿಕಿತ್ಸೆಗೆ 10 ರಿಂದ 15 ಸಾವಿರ ರೂಪಾಯಿ ಖರ್ಚಾಗುತ್ತಿದ್ದು, ಹಣ ಸಹಾಯಕ್ಕಾಗಿ ನಟ ಹಾಗೂ ಅವರ ಆಪ್ತರು ಮನವಿ ಮಾಡಿದ್ರು. ಅನೇಕರು ಕೂಡ ಸಹಾಯ ಮಾಡಿದ್ರು. ಆದ್ರೆ ಚಿಕಿತ್ಸೆಗೆ ಫಲಿಸದೇ ನಟ ಶ್ರೀಧರ್ ನಿಧನರಾಗಿದ್ದಾರೆ.
SERIAL ACTOR
Discover more from Prasarana news
Subscribe to get the latest posts sent to your email.