RIPPONPET NEWS:ಕಳಸವಳ್ಳಿ ಸಿಗಂದೂರು ಸೇತುವೆಗೆ ಬಿ.ಎಸ್.ಯಡಿಯೂರಪ್ಪ ಹೆಸರಿಡುವಂತೆ ಒತ್ತಾಯ…

ರಿಪ್ಪನ್‌ಪೇಟೆ: ಇದೇ 14 ರಂದು ಲೋಕಾರ್ಪಣೆಗೊಳ್ಳುತ್ತಿರುವ ಅಂಬಾರಗೊಡ್ಲು-ಕಳಸವಳ್ಳಿ
ಸಿಗಂದೂರು ಸೇತುವೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಹೆಸರಿಡುವಂತೆ ಹೊಸನಗರ ತಾಲ್ಲೂಕು ಆಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಸರ್ಕಾರವನ್ನು ಆಗ್ರಹಿಸಿ ನಾಡಕಛೇರಿಯ ಉಪತಹಶಿಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿರುವುದಾಗಿ ಹೊಸನಗರ ಆಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾಆಧ್ಯಕ್ಷಎಂ.ಎಸ್.ಉಮೇಶ ಮಾಣಿಕೆರೆ ತಿಳಿಸಿದರು.
ರಿಪ್ಪನ್‌ಪೇಟೆಯ ಶ್ರೀಬಸವೇಶ್ವರ ವೀರಶೈವ ಸಮಾಜದ `ಶಿವಮಂದಿರದಲ್ಲಿ” ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದ ಅವರು ಬಿ.ಎಸ್.ಯಡಿಯೂರಪ್ಪನವರು ಕರ್ನಾಟಕ ರಾಜ್ಯಕ್ಕೆ ವಿಶೇಷವಾಗಿ ಶಿವಮೊಗ್ಗ ಜಿಲ್ಲೆಗೆ ಆಭಿವೃದ್ದಿಯ ಹೊಸ ದಾಖಲೆಯನ್ನು ಸೃಷ್ಠಿಸಿದ್ದಾರೆ.ಜಿಲ್ಲೆಯಲ್ಲಿ ಅನೇಕ ವಿಶ್ವ ಭೂಪಟದಲ್ಲಿ ಗುರುತಿಸುವಂತಹ ಆಭಿವೃದ್ದಿ ಕಾಮಗಾರಿಗಳನ್ನು ಮಾಡಿದ್ದು ಇವರು ಒಂದು ಜಾತಿಗೆ ಸೀಮಿತವಾಗದೆ ಸರ್ವ ಜನಾಂಗದವರ ಜನನಾಯಕರಾಗಿ ತಮ್ಮ ಅಧಿಕಾರಾವಧಿಯಲ್ಲಿ ಸಮಾನತೆಯ ಪಾಲು ನೀಡಿದ್ದಾರೆ.ಇವರ ಪರಿಶ್ರಮದ ಫಲದಿಂದಾಗಿ ಇAದು ಸಿಗಂದೂರು  ಕಳಸವಳ್ಳಿ ಸೇತುವೆ ನಿರ್ಮಾಣವಾಗಿದೆ ಆ ಕಾರಣ ಅವರ ಈ ಪರಿಶ್ರಮದಕಾರಣ ಈ ಸೇತುವೆಗೆ ಬಿ.ಎಸ್.ಯಡಿಯೂರಪ್ಪನವರ ಹೆಸರಿಡಬೇಕು. ರಾಜ್ಯ ಸರ್ಕಾರ ಈ ಕೂಡಲೇ ಅವರ ಹೆಸರನ್ನು ಪರಿಗಣಿಸಿ ಬಿ.ಎಸ್.ಯಡಿಯೂರಪ್ಪ ನವರು ಎಲ್ಲ ವರ್ಗದವರು ಒಪ್ಪುವಂತಹ ಪ್ರೆಶ್ನಾತೀತ ನಾಯಕರಾಗಿದ್ದು ಜಿಲ್ಲೆಗೆ ಅರವಕೊಡುಗೆ ಅಪಾರವಾಗಿದ್ದು ಇದನ್ನು ಪರಿಗಣಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಮನವಿ ಪತ್ರವನ್ನು ಕಳುಹಿಸಲಾಗುತ್ತಿದೆಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಘಟಕದಆಧ್ಯಕ್ಷೆ ಲೀಲಾಉಮಾಶಂಕರ್,ಡಿ.ಎಸ್.ಕರುಣೇಶ್ವರ, ಬಿ.ಎಲ್.ಲಿಂಗಪ್ಪಗೌಡ ಬೆನವಳ್ಳಿ, ವೇದಾಂತಪ್ಪಗೌಡ ಕೋಡೂರು,ತೀರ್ಥೇಶ್ ಬಟ್ಟೆಮಲ್ಲಪ್ಪ, ಯಶೋಧಮಲ್ಲಪ್ಪಗೌಡ ಆನೆಗದ್ದೆ, ಬಸವರಾಜ, ಗಿರೀಶ ಜಂಬಳ್ಳಿ, ವಸಂತ ಹೊಸನಗರ,ವಾಣಿವಿ.ಜಿ.ಶಿವಪ್ರಕಾಶ್,ಕೆ.ಎನ್.ರಾಜಶೇಖರ ಕಮದೂರು,ಲೋಕೇಶ, ಪರಮೇಶ ಕಮದೂರು,ರಚನಾ,ಗಿರೀಶಆನೆಗದ್ದೆ ಹಾಗೂ ಸಮಾಜದ ಮುಖಂಡರು ಹಾಜರಿದ್ದರು.

RIPPONPET NEWS...


Discover more from Prasarana news

Subscribe to get the latest posts sent to your email.

  • Related Posts

    RIPPONPET NEWS:ಜುಲೈ 19 ರಂದು ರಿಪ್ಪನ್ ಪೇಟೆ ರೋಟರಿ ಕ್ಲಬ್ ನ ಪದಗ್ರಹಣ ಸಮಾರಂಭ….

    ರಿಪ್ಪನ್‌ಪೇಟೆ ;-ಜುಲೈ 19 ರ ಶನಿವಾರ ಸಂಜೆ   ಪಟ್ಟಣದ ವಿಶ್ವಮಾನವ ಸಭಾಭವನದಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ.ಹಾಗೂ ಪದವಿ ಕಾಲೇಜ್‌ನಲ್ಲಿ ವ್ಯಾಸಂಗ ಮಾಡಿ ಅತಿ ಹೆಚ್ಚು ಆಂಕಗಳಿಸಿ ತೇರ್ಗಡೆಯಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ಹಾಗೂ 2025-26 ನೇ ಸಾಲಿನ ನೂತನರೋಟರಿಕ್ಲಬ್ ಪದವಿ ಸ್ವೀಕಾರ…

    Read more

    HOSANAGARA NEWS: ಹೊಸನಗರ ತಹಶೀಲ್ದಾರ್ ಸಾಗರಕ್ಕೆ ವರ್ಗಾವಣೆ…

    ಹೊಸನಗರ:ತಮ್ಮ ಉತ್ತಮ ಕಾರ್ಯ ವೈಕರಿಯ ಮೂಲಕ ಜನಮನ್ನಣೆ ಗಳಿಸಿದ್ದ ಹೊಸನಗರ ತಾಲೂಕಿನ ತಹಶೀಲ್ದಾರ್ ರಶ್ಮಿ ಹಾಲೇಶ್ ಅವರನ್ನು ಸಾಗರ ತಾಲೂಕಿಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.ರಶ್ಮಿ ಹಾಲೇಶ್ ಅವರನ್ನು ಸಾಗರಕ್ಕೆ ವರ್ಗಾವಣೆ ಗೊಳಿಸಲಾಗಿದ್ದು ಸಾಗರದ ತಹಶೀಲ್ದಾರ್ ಚಂದ್ರಶೇಖರ್ ನಾಯಕ್ ಅವರಿಗೆ…

    Read more

    Leave a Reply

    Discover more from Prasarana news

    Subscribe now to keep reading and get access to the full archive.

    Continue reading