

ರಿಪ್ಪನ್‌ಪೇಟೆ;-ಮಂಗಳವಾರ ದಿನ ಅಂಗನವಾಡಿ ಮಕ್ಕಳಿಗೆ ನೀಡಲಾದ ವಿಟಮಿನ್ ಹನಿ ಡ್ರಾಪ್ ಸೇವನೆಯಿಂದಾಗಿ 11 ಕ್ಕೂ ಅಧಿಕ ಮಕ್ಕಳಲ್ಲಿ ವಾಂತಿ ಬೇದಿ ಕಾಣಿಸಿಕೊಂಡು ಅಸ್ವಸ್ಥರಾಗಿರುವ ಘಟನೆ ಬೆಳ್ಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಿರೇಸಾನಿ ಆಂಗನವಾಡಿ ಕೇಂದ್ರದಲ್ಲಿ ನಡೆದಿದೆ.
ಇರುಳುಗಣ್ಣು ನಿವಾರಣೆಗಾಗಿ ಮುಂಜಾಗ್ರತಾ ಕ್ರಮವಾಗಿ ಅAಗನವಾಡಿಯಲ್ಲಿ ಮಕ್ಕಳಿಗೆ ವಿಟಮಿನ್ ಹನಿಯಡ್ರಾಫ್ಸ್ ನೀಡಲಾಗುತ್ತಿದ್ದು ಆದರಂತೆ ಆಶಾ ಕಾರ್ಯಕರ್ತೆಯರು ಮನೆಮನೆಗೆ ತೆರಳಿ ೬ ವರ್ಷದೊಳಗಿನ ಮಕ್ಕಳಿಗೆ ನೀಡಲಾಗುವ ಡ್ರಾಫ್ಸ್ಯನ್ನು ಮಂಗಳವಾರ ನೀಡಲಾಗಿದ್ದು ಅಂದೇ ಸಂಜೆ ಮಕ್ಕಳಲ್ಲಿ ವಾಂತಿ ಬೇದಿ ಕಾಣಿಸಿಕೊಂಡು ತಕ್ಷಣ ಮಕ್ಕಳನ್ನ ಖಾಸಗಿ ಅಸ್ಪತ್ರೆಯಲ್ಲಿತೋರಿಸಲಾಗಿ ಉಲ್ಬಣಗೊಂಡ ಪರಿಣಾಮದಿಂದಾಗಿ ಮಕ್ಕಳು ತೀವ್ರ ನಿತ್ರಾಣಗೊಂಡಿದ್ದರ ಹಿನ್ನಲೆಯಲ್ಲಿ ಇಂದು ಇಲ್ಲಿನ ಸರ್ಕಾರಿ ಪ್ರಾಥಮಿಕಅರೋಗ್ಯಕೇಂದ್ರಕ್ಕೆ ಕರೆತರಲಾಗಿತ್ತು ತಕ್ಷಣ ಶಾಸಕರಾದ ಗೋಪಾಲಕೃಷ್ಣ ರವರ ಸಹಾಕಾರದಿಂದ ಖಾಸಗಿ ಆಂಬುಲೆನ್ಸ್ನಲ್ಲಿ ಶಿವಮೊಗ್ಗ ಮೆಗ್ಗಾನ್ಅಸ್ಪತ್ರೆಗೆ ಹೆಚ್ಚಿನಚಿಕಿತ್ಸೆಗಾಗಿ ಕಳುಹಿಸಿಕೊಡಲಾಯಿತು.
ಸುದ್ದಿ ಹರಡುತ್ತಿದ್ದಂತೆ ಶಿವಮೊಗ್ಗ ಜಿಲ್ಲಾ ಪಂಚಾಯ್ತಿ ಉಪಕಾರ್ಯದರ್ಶಿ ಯವರು ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣಇಲಾಖೆಯ ಅಧಿಕಾರಿಗಳು ಹೊಸನಗರ ಸಿಡಿಪಿಓ ಕಛೇರಿ ಅಧಿಕಾರಿಗಳು ಸೇರಿದಂತೆ ಇತರ ತಾಲ್ಲೂಕ್ ಮಟ್ಟದ ಅಧಿಕಾರಿಗಳು ದೌಡಾಯಿಸಿ ತಕ್ಷಣ ಚಿಕಿತ್ಸೆಗಾಗಿ ಕಳುಹಿಸ ಲಾಗಿದೆ...
RIPPONPET NEWS.
Discover more from Prasarana news
Subscribe to get the latest posts sent to your email.