RIPPONPET NEWS: ವರ್ಗಾವಣೆಗೊಂಡ ಅಧಿಕಾರಿಗಳಿಗೆ ಗ್ರಾಮಸ್ಥರಿಂದ ಬೀಳ್ಕೊಡುಗೆ….

ರಿಪ್ಪನ್‌ಪೇಟೆ;- ಪಟ್ಟಣದ ಠಾಣೆಯಲ್ಲಿ ಕಳೆದ ಎರಡು ವರ್ಷಕಾಲ ಜನಸ್ನೇಹಿ ಪಿಎಸ್‌ಐಯಾಗಿ ಕರ್ತವ್ಯ ನಿರ್ವಹಿಸಿ ಈಗ ಆನಂದಪುರ ಠಾಣೆಗೆ ವರ್ಗಾವಣೆಗೊಂಡ ಪಿಎಸ್‌ಐ ಪ್ರವೀಣ್ಎಸ್.ಪಿ ಮತ್ತು  ಹೊಸನಗರ ವಲಯಅರಣ್ಯಇಲಾಖೆಯ ರಿಪ್ಪನ್‌ಪೇಟೆ ವಲಯದಲ್ಲಿಕರ್ತವ್ಯ ನಿರ್ವಹಿಸಿ ನಗರ ವಲಯದ ನಿಟ್ಟೂರು  ಗೆ ವರ್ಗಾವಣೆಯಾಗಿರುವ ಡಿಆರ್‌ಎಫ್‌ಓ ಅಕ್ಷಯಕುಮಾರ್ ಇವರ ಕಾರ್ಯವನ್ನು ಪ್ರಶಂಸಿಸಿ ನಾಗರೀಕರು ಇಂದುಗ್ರಾಮ ಪಂಚಾಯ್ತಿ ಕಾರ್ಯಾಲಯದಲ್ಲಿ ಬೀಳ್ಕೋಡಿಗೆ ಮಾಡಿದರು.
ನಾಗರೀಕರ ಬೀಳ್ಕೋಡಿಗೆ ಸ್ವೀಕರಿಸಿ ಮಾತನಾಡಿದ ಪಿಎಸ್‌ಐ ಪ್ರವೀಣ್ಎಸ್.ಪಿ.ಕರ್ತವ್ಯದ ಅವಧಿಯಲ್ಲಿ ಕಾನೂನು ಬಿಟ್ಟುಯಾವುದೇಕಾರ್ಯ ಮಾಡಲು ಸಾಧ್ಯವಿಲ್ಲ ಕಾನೂನಿನಡಿಯಲ್ಲಿ ಮಾನವೀಯತೆಯಿಂದ ಬರುವ ದೂರುಗಳಿಗೆ ಸ್ಪಂದಿಸಿ ಅವರಿಗೆ ಪರಿಹಾರ ಕಲ್ಪಿಸಿದಾಗ ಮಾತ್ರ ವೃತ್ತಿಗೌರವ ಹೆಚ್ಚಾಗಲು ಸಾಧ್ಯ ಎಂಬುದಕ್ಕೆ  ಇಂದು ರಿಪ್ಪನ್‌ಪೇಟೆಯಲ್ಲಿ ನಾಗರೀಕರು ನಮ್ಮ ಸೇವಾವಧಿಯಲ್ಲಿ ಮಾಡಿರುವಕಾರ್ಯವನ್ನು ಗುರುತಿಸಿ ಸನ್ಮಾನಿ ಆಭಿನಂದಿಸಿರುವುದು ನನಗೆ ಇನ್ನೂ ಹೆಚ್ಚಿನ ಜನಹಿತಕಾರ್ಯ ಮಾಡಲು ಸ್ಪೂರ್ತಿಯಾಗಿದೆ ಎಂದರು.
ಡಿ.ಆರ್.ಎಫ್.ಓಆಕ್ಷಯಕುಮಾರ್ ಸನ್ಮಾನ ಸ್ವಿಕರಿಸಿ ಮಾತನಾಡಿ ನಮ್ಮ ವೃತ್ತಿ ಅಲಗಿನ ಕತ್ತಿಯ ಮೇಲೆ ಇದ್ದಂತೆ ಎಲ್ಲರಿಗೂ ಒಳ್ಳೆಯದನ್ನು ಮಾಡಿ ಹೌದು ಅನಿಸಿಕೊಳ್ಳುವುದು ಕಷ್ಟ ನನ್ನ ವ್ಯಾಪ್ತಿಯಲ್ಲಿ ಸಾದ್ಯವಾದಷ್ಟು ಒಳ್ಳೆಯ ಕೆಲಸ ಮಾಡುವ ಮೂಲಕ ಮನೆಕೊಟ್ಟಿಗೆ ನಿರ್ಮಾಣಕ್ಕಾಗಿ ಮರಕಡಿತಲೆ ಮಾಡಿಕೊಳ್ಳುತ್ತೇವೆಂದು ಸಹಾಯ ಕೇಳಿ ಬಂದವರಿಗೆ ಅದಷ್ಟು ಒಣಗಿದ ಮರಗಳನ್ನು ಮಾತ್ರ ಬಳಸಿಕೊಳ್ಳುವಂತೆ ಮತ್ತು ಹಿರಿಯ ಅಧಿಕಾರಿಗಳ ಸಲಹೆ ಪಡೆದು ಉಪಕಾರ ಮಾಡಿರುವುದೇ ನನಗೆ ಇಷ್ಟು ಗೌರವ ದೊರೆಯಲು ಕಾರಣವಾಗಿದೆ ಎಂದರು.
ಬೀಳ್ಕೊಡಿಗೆ ಸಮಾರಂಭದಆಧ್ಯಕ್ಷತೆಯನ್ನು ಅಧ್ಯಕ್ಷೆಧನಲಕ್ಷಿö್ಮ ವಹಿಸಿದ್ದರು.
ಉಪಾಧ್ಯಕ್ಷ ಸುದೀಂದ್ರಪೂಜಾರಿ,ಸದಸ್ಯರಾದ ಡಿ.ಈ,ಮಧುಸೂಧನ್,ಗಣಪತಿ ಗವಟೂರು,ಆಶೀಫ್‌ಭಾಷಾ,ಜಿ.ಡಿ.ಮಲ್ಲಿಕಾರ್ಜುನ,ದೀಪಾಸುದೀರ್,
ಅನುಪಮ ರಾಕೇಶ್,ವೇದಾವತಿ,ಸಾರಾಭಿ,ಮಂಜುಳ,ವನಮಾಲ,ದಾನಮ್ಮ, ಪ್ರಕಾಶಪಾಲೇಕ್,ಪಿಡಿಓ ನಾಗರಾಜ್,ಕಾರ್ಯದರ್ಶಿ ಮಧುಶ್ರೀ, ಮುಖಂಡರಾದಆರ್.ಎನ್.ಮAಜುನಾಥ, ಶ್ರೀಧರ,ಆರ್.ರಾಘವೇಂದ್ರ,ನರಸಿAಹ ಇನ್ನಿತರರು ಸಭೆಯಲ್ಲಿ ಪಾಲ್ಗೊಂಡು ವರ್ಗಾವಣೆಗೊಂಡ ಪಿಎಸ್.ಐ ಮತ್ತುಡಿ.ಆರ್.ಎಫ್ ಓ ಕಾರ್ಯವನ್ನು ಪ್ರಶಂಸಿಸಿದರು.

RIPPONPET NEWS..


Discover more from Prasarana news

Subscribe to get the latest posts sent to your email.

  • Related Posts

    RIPPONPET NEWS:ಜುಲೈ 19 ರಂದು ರಿಪ್ಪನ್ ಪೇಟೆ ರೋಟರಿ ಕ್ಲಬ್ ನ ಪದಗ್ರಹಣ ಸಮಾರಂಭ….

    ರಿಪ್ಪನ್‌ಪೇಟೆ ;-ಜುಲೈ 19 ರ ಶನಿವಾರ ಸಂಜೆ   ಪಟ್ಟಣದ ವಿಶ್ವಮಾನವ ಸಭಾಭವನದಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ.ಹಾಗೂ ಪದವಿ ಕಾಲೇಜ್‌ನಲ್ಲಿ ವ್ಯಾಸಂಗ ಮಾಡಿ ಅತಿ ಹೆಚ್ಚು ಆಂಕಗಳಿಸಿ ತೇರ್ಗಡೆಯಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ಹಾಗೂ 2025-26 ನೇ ಸಾಲಿನ ನೂತನರೋಟರಿಕ್ಲಬ್ ಪದವಿ ಸ್ವೀಕಾರ…

    Read more

    HOSANAGARA NEWS: ಹೊಸನಗರ ತಹಶೀಲ್ದಾರ್ ಸಾಗರಕ್ಕೆ ವರ್ಗಾವಣೆ…

    ಹೊಸನಗರ:ತಮ್ಮ ಉತ್ತಮ ಕಾರ್ಯ ವೈಕರಿಯ ಮೂಲಕ ಜನಮನ್ನಣೆ ಗಳಿಸಿದ್ದ ಹೊಸನಗರ ತಾಲೂಕಿನ ತಹಶೀಲ್ದಾರ್ ರಶ್ಮಿ ಹಾಲೇಶ್ ಅವರನ್ನು ಸಾಗರ ತಾಲೂಕಿಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.ರಶ್ಮಿ ಹಾಲೇಶ್ ಅವರನ್ನು ಸಾಗರಕ್ಕೆ ವರ್ಗಾವಣೆ ಗೊಳಿಸಲಾಗಿದ್ದು ಸಾಗರದ ತಹಶೀಲ್ದಾರ್ ಚಂದ್ರಶೇಖರ್ ನಾಯಕ್ ಅವರಿಗೆ…

    Read more

    Leave a Reply

    Discover more from Prasarana news

    Subscribe now to keep reading and get access to the full archive.

    Continue reading