

ರಿಪ್ಪನ್ ಪೇಟೆ:ಪಟ್ಟಣದ ಪ್ರಾಥಮಿಕಆರೋಗ್ಯಕೇಂದ್ರದಲ್ಲಿ ಖಾಯಂ ವೈದ್ಯಾಧಿಕಾರಿಗಳು ಇಲ್ಲದೆ ಶುಕ್ರವಾರ ಬೆಳಗ್ಗೆ ಕಲ್ಲೂರು ಗ್ರಾಮದ ರಾಮಪ್ಪ ಎಂಬುವರಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಲಭಿಸದೇ ಸಾವನ್ನಪ್ಪಿದ್ದಾರೆಂದು ಆರೋಪಿಸಿ ಬಿಜೆಪಿ ಪಕ್ಷದವರು ದಿಡೀರ್ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.
ತಾಲ್ಲೂಕ್ ಪಂಚಾಯ್ತಿ ಮಾಜಿಅಧ್ಯಕ್ಷ ವಿರೇಶ್ ಆ ಲುವಳ್ಳಿ ನೇತೃತ್ವದಲ್ಲಿಆಸ್ಪತ್ರೆಗೆ ಬೇಟಿ ನೀಡಿ ಇರುವ ವೈದ್ಯರ ಬಳಿ ಚರ್ಚೆ ನಡೆಸಿ ನಂತರ ಪತ್ರಿಕಾಗೋಷ್ಠಿ ನಡೆಸಿ ಇಲ್ಲಿನ ವೈದ್ಯಾಧಿಕಾರಿಗಳು ಇನ್‌ಚಾರ್ಜ್ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದು ಬೆಳಗ್ಗೆಯಿಂದ ಸಂಜೆಯ ವರಗೆ ಕರ್ತವ್ಯ ಮಾಡಲಾಗುತ್ತಿದೆ ಹರಿಗೆ ಇನ್ನಿತರ ಅಗತ್ಯ ಸೌಲಭ್ಯಗಳು ಸಾರ್ವಜನಿಕ ರಿಗೆ ದೊರಕುತ್ತಿಲ್ಲ. ರಾತ್ರಿ ವೇಳೆ ಬಂದರೆಯಾರುಇರುವುದಿಲ್ಲ ಇದರಿಂದಾಗಿ ಸಮಸ್ಯೆಉದ್ಬವವಾಗುವಂತಾಗಿದೆ.ಅಲ್ಲದೆಆರೋಗ್ಯಕಾರ್ಯಕರ್ತೆಯರು ಸಹ ಡೆಪ್ಟೇಷನ್ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದು ಕಾಯಂ ಆರೋಗ್ಯಕಾರ್ಯಕರ್ತೆ ನಿಯೋಜನ ಇಲ್ಲದೆ ಇರುವುದರಿಂದ ಅಸ್ಪತ್ರೆಯಲ್ಲಿಡಿ.ಗ್ರೂಪ್ ನೌಕರರೇ ಚುಚ್ಚು ಮದ್ದು ನೀಡುವುದು ಅನಿವಾರ್ಯವಾಗಿ
ದೆ ಡಿ.ಗ್ರೂಪ್ನೌಕರರು ಇಂಜೆಕ್ಷನ್ ನೀಡಿ ಏನಾದರೂಅವಘಡ ಸಂಭವಿಸಿದರೆ ಹೂಣೆಯಾರು ಎಂಬ ಪ್ರಶ್ನೆ ಸಾರ್ವಜನಿಕರನ್ನುಕಾಡುವಂತಾಗಿದೆ ತಕ್ಷಣ ಈ ಅವ್ಯವಸ್ಥೆಯನ್ನು ಸರಿಪಡಿಸಿಕೊಡುವುದರೊಂದಿಗೆ ರೋಗಿಗಳಿಗೆ ಸಮರ್ಪಕ ಸೇವೆ ಕಲ್ಪಿಸುವಂತೆ ಸರ್ಕಾರವನ್ನು ಆಗ್ರಹಿಸಿದರು.
ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ನಾವು ಆಸ್ಪತ್ರೆಯ ಮುಂಭಾಗಆಥವಾಜಿಲ್ಲಾ ಪಂಚಾಯಿತ್ ಮುಖ್ಯಕಾರ್ಯನಿರ್ವಾಹಣಾಧಿಕಾರಿಗಳ ಮತ್ತುಜಿಲ್ಲಾ ಅರೋಗ್ಯಾಧಿಕಾರಿಗಳ ಕಛೇರಿ ಸೇರಿದಂತೆ ಜಿಲ್ಲಾಧಿಕಾರಿಗಳ ಕಛೇರಿಗೆ ರಿಪ್ಪನ್‌ಪೇಟೆಯಿಂದಕಾಲ್ನುಡಿಗೆ ಮೂಲಕ ಬೃಹತ್ ಪ್ರತಿಭಟನೆ ನಡೆಸುವುದಾಗಿ ಸರ್ಕಾರಕ್ಕೆಎಚ್ಚರಿಕೆ ನೀಡಿದರು.
ಈ ಹಿಂದೆ ಬಿಜೆಪಿ ಸರ್ಕಾರದ ಶಾಸಕ ಹರತಾಳು ಹಾಲಪ್ಪನವರುಆಧಿಕಾರದಲ್ಲಿದ್ದಆವಧಿಯಲ್ಲಿ ಹಾಲಿ ಶಾಸಕ ಬೇಳೂರು ಗೋಪಾಲಕೃಷ್ಣ ಇವರು ಸರ್ಕಾರಿಅಸ್ಪತ್ರೆಯ ವಿರುದ್ದ ಪಾದಯಾತ್ರೆ ನಡೆಸುವ ಮೂಲಕ ಆಸ್ಪತ್ರೆಯಅವ್ಯವಸ್ಥೆ ವಿರುದ್ದ ಪ್ರತಿಭಟನೆ ನಡೆಸಿ ಈ ಅಸ್ಪತ್ರೆಯನ್ನು ಮೇಲ್ದರ್ಜೆಗೆಏರಿಸುವುದಾಗಿ ಭರವಸೆ ನೀಡಿದವರು ಈಗ ಎಲ್ಲಿ ಹೋಗಿದ್ದಾರೆ.ಅಧಿಕಾರ ಬಂದು ಹತ್ತಿರ ಹತ್ತಿರಎರಡುವರೆವರ್ಷಕಳೆದರು ಆಸ್ಪತ್ರೆಯ ಅಭಿವೃದ್ದಿಗೆ ಸರ್ಕಾರದಿಂದ ಒಂದು ನೈಯಾ ಪೈಸೆ ಅನುದಾನ ತರದೇ ಶಾಸನ ಸಭೆಯಲ್ಲಿ ಆಸ್ಪತ್ರೆಯ ಉನ್ನತಿಕರಣದ ಬಗ್ಗೆ ಚರ್ಚಿಸದೇಇರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿ ಶಾಸಕರ ಕಾರ್ಯವೈಖರಿಯನ್ನು ಲೇವಡಿ ಮಾಡಿ ಇಚ್ಚಾಶಕ್ತಿಯಕೊರತೆಯಿಂದಾಗಿ ಈ ರೀತಿಯಲ್ಲಿಆಸ್ಪತ್ರೆಅವ್ಯಸ್ಥೆಗೆಕಾರಣವಾಗಿದೆಎಂದು ವಿಷಾದ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿಜಿಜೆಪಿ ಮಹಾಶಕ್ತಿಕೇಂದ್ರದ ಆಧ್ಯಕ್ಷಎನ್.ಸತೀಶ್ ಮುಖಂಡರಾದ ಪದ್ಮಸುರೇಶ್,ಎಂ.ಬಿ. ಮಂಜುನಾಥ್,ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಸುದೀಂದ್ರಪೂಜಾರಿ,ಗ್ರಾಮ ಪಂಚಾಯ್ತಿ ಸದಸ್ಯರಾದ ಜಿ.ಡಿ.ಮಲ್ಲಿಕಾರ್ಜುನ,ಸುಂದರೇಶ್,ಆಶ್ವಿನಿರವಿಶಂಕರ್ ,ತಾಲ್ಲೂಕ್ ಪಂಚಾಯಿತ್ ಮಾಜಿಅಧ್ಯಕ್ಷೆ ನಾಗರತ್ನದೇವರಾಜ್,ಪಿ.ಸುದೀರ್ಇನ್ನಿತರರು ಹಾಜರಿದ್ದರು.
RIPPONPET NEWS.
Discover more from Prasarana news
Subscribe to get the latest posts sent to your email.