

ಹೊಸನಗರ ; ಪಟ್ಟಣದ ಜಯಲಕ್ಷ್ಮಿ ವಿಜಯಕುಮಾರ್ ರವರ ಪುತ್ರಿ ವೈಷ್ಣವಿ ವಿಜಯಕುಮಾರ್ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶದ ಮರು ಮೌಲ್ಯಮಾಪನದಲ್ಲಿ 625 ಕ್ಕೆ 623 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ತೃತೀಯ ರ‍್ಯಾಂಕ್ ಪಡೆದಿದ್ದಾರೆ. ಪಟ್ಟಣದ ಶ್ರೀ ರಾಮಕೃಷ್ಣ ವಿದ್ಯಾಲಯದಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಯಾಗಿ ಈ ಸಾಲಿನ ಪರೀಕ್ಷೆ ಎದುರಿಸಿದ್ದು ಇತ್ತೀಚೆಗೆ ಪ್ರಕಟಗೊಂಡ ಫಲಿತಾಂಶದಲ್ಲಿ 625ಕ್ಕೆ 618 ಅಂಕ ಗಳಿಸಿದ್ದು ಇದರಿಂದ ಅಸಮಾಧಾನಗೊಂಡ ವಿದ್ಯಾರ್ಥಿನಿ ವೈಷ್ಣವಿ ಹಾಗೂ ಪೋಷಕರೂ ಉತ್ತರ ಪತ್ರಿಕೆಯನ್ನು ಮರು ಮೌಲ್ಯಮಾಪನಕ್ಕೇ ಒಳಪಡಿಸಿದ್ದರು ಇದೀಗ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು ವೈಷ್ಣವಿ 625ಕ್ಕೆ 623 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ರ‍್ಯಾಂಕ್ ಪಡೆದಿದ್ದಾರೆ.ವೈಷ್ಣವಿ ಕನ್ನಡ, ಹಿಂದಿ, ವಿಜ್ಞಾನ, ಗಣಿತ ವಿಷಯಗಳಲ್ಲಿ 100ಕ್ಕೆ 100 ಅಂಕ ಗಳಿಸಿದ್ದು ಇಂಗ್ಲಿಷ್, ಸಮಾಜ ವಿಷಯದಲ್ಲಿ 99 ಅಂಕ ಗಳಿಸಿ ತಾಲೂಕಿಗೆ ಪ್ರಥಮ ಸ್ಥಾನ ಹಾಗೂ ರಾಜ್ಯಕ್ಕೆ ಮೂರನೇ ರ‍್ಯಾಂಕ್ ಪಡೆದಿದ್ದಾರೆ.ವೈಷ್ಣವಿಯ ಹೊಸನಗರ ಮೆಸ್ಕಾಂ ಗುತ್ತಿಗೆದಾರ ಸತೀಶ್ ಬಾವಿಕಟ್ಟೆ ಸಹೋದರಿಯ ಪುತ್ರಿಯಾಗಿದ್ದು ಇವರ ಈ ಸಾಧನೆಯನ್ನು ಶಾಲಾ ಆಡಳಿತ ಮಂಡಳಿಯವರು, ಶಿಕ್ಷಕವೃಂದದವರು, ತಾಲೂಕು ಮೊಗವೀರ ಸಂಘ ಅಭಿನಂದಿಸಿದೆ...
RE-EVALUATION...
Discover more from Prasarana news
Subscribe to get the latest posts sent to your email.