PSI HOSANAGARA:ಬಕ್ರೀದ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸಿ: ಪಿಎಸ್ಐ ಶಂಕರ್ ಗೌಡ ಪಾಟೀಲ್…

ಹೊಸನಗರ: ಬಕ್ರೀದ್‌ ಹಬ್ಬವನ್ನು ಶಾಂತಿ ಮತ್ತು ಸೌಹಾರ್ದದಿಂದ ಆಚರಿಸಬೇಕು. ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಆಸ್ಪದ ನೀಡಬಾರದು’ ಎಂದು ಹೊಸನಗರ ಪೊಲೀಸ್ ಠಾಣ ಪಿಎಸ್ಐ ಶಂಕರ್ ಗೌಡ ಪಟೇಲ್ ಹೇಳಿದರು.
ಹೊಸನಗರ ಪೊಲೀಸ್‌ ಠಾಣೆಯಲ್ಲಿ ಬಕ್ರೀದ್‌ ನಿಮಿತ್ತ ಏರ್ಪಡಿಸಿದ್ದ ಶಾಂತಿ ಸಭೆ ಉದ್ಧೇಶಿಸಿ ಮಾತನಾಡಿದ ಅವರು, ಹೊಸನಗರ ಸಾಮರಸ್ಯಕ್ಕೆ ಹೆಸರಾಗಿದೆ. ಅಂಥ ಹೆಸರಿಗೆ ಚ್ಯುತಿಯಾಗದಂತೆ ನೋಡಿಕೊಳ್ಳಬೇಕು. ಕಾನೂನು
ಸು ವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಸದಾ ಸಿದ್ಧವಿರುತ್ತದೆ ಹಿಂದೂ ಮುಸ್ಲಿಮರು ಒಟ್ಟಾಗಿ ಶಾಂತಿಯಿಂದ ಹಬ್ಬವನ್ನು ಆಚರಿಸುವಂತೆ ಅವರು ಮನವಿಯನ್ನ ಮಾಡಿದರು. ಶಾಂತಿ ಭಂಗ ಉಂಟಾಗುವಂತಹ ಯಾವುದೇ ಹೇಳಿಕೆಗಳನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವುದು ಹಾಗೂ ಫಾರ್ವರ್ಡ್ ಮಾಡಿ ಮತ್ತೊಬ್ಬರಿಗೆ ನೋವನ್ನು ಉಂಟು ಮಾಡುವುದು ಕಾನೂನಿನಲ್ಲಿ ಅಪರಾಧ ಹಾಗಾಗಿ ಈ ಸಭೆಯಲ್ಲಿರುವ ಎಲ್ಲ ಧರ್ಮದ ಮುಖಂಡರುಗಳು ಯುವಕರಿಗೆ ತಿಳಿ ಹೇಳಬೇಕು ಎಂದು ತಿಳಿಸಿದರು.
ಈ ಶಾಂತಿ ಸಭೆಯಲ್ಲಿ ವಿವಿಧ ಧರ್ಮದ ಮುಖಂಡರು ಪಾಲ್ಗೊಂಡಿದ್ದರು.

PSI HOSANAGARA...


Discover more from Prasarana news

Subscribe to get the latest posts sent to your email.

  • Related Posts

    HOSANAGARA NEWS: ನಟಿ ಸರೋಜಾ ದೇವಿ ನಿಧನ:  ಚುಂಚಾದ್ರಿ ಮಹಿಳಾ ಸಂಘದಿಂದ ಸಂತಾಪ..

    ಹೊಸನಗರ:ಬಹುಭಾಷಾ ನಟಿ ಬಿ. ಸರೋಜಾದೇವಿ (87) ಅವರು ಸೋಮವಾರ ನಿಧನರಾಗಿಧು. ಅವರ ನಿಧನಕ್ಕೆ   ಚುಂಚಾದ್ರಿ ಮಹಿಳಾ ಸಂಘ ಸಂತಾಪ ಸೂಚಿಸಿದೆ.ಹಿರಿಯ ನಟಿಯ ಅಗಲಿಕೆಗೆ ಶ್ರದ್ದಾಂಜಲಿ ಸಭೆ ನಡೆಸಿ ಮಾತನಾಡಿದ ಚುಂಚಾದ್ರಿ ಮಹಿಳಾ ಸಂಘದ ಅಧ್ಯಕ್ಷರಾದ ಮೈನಾವತಿ ರಾಜಮೂರ್ತಿ. ಆರೂವರೆ ದಶಕಗಳು ಚಿತ್ರರಂಗದಲ್ಲಿ‌…

    Read more

    RIPPONPET NEWS:         ರಿಪ್ಪನ್ ಪೇಟೆ ಹಿಂದೂ ಮಹಾಸಭಾ ಗಣೇಶೋತ್ಸವ ಸಮಿತಿ  ಅಧ್ಯಕ್ಷರಾಗಿ ಸುಧೀರ್ ಪಿ ಆಯ್ಕೆ…

    ರಿಪ್ಪನ್‌ಪೇಟೆ : ಪಟ್ಟಣದ ಕರ್ನಾಟಕ ಪ್ರಾಂತಿಯ ಹಿಂದೂ ರಾಷ್ಟ್ರ ಸೇನಾ ಸಮಿತಿಯ  58ನೇ ಗಣೇಶೋತ್ಸವದ ಅಧ್ಯಕ್ಷರಾಗಿ ಸುಧೀರ್ ಪಿ ಹಾಗೂ ಕಾರ್ಯದರ್ಶಿಯಾಗಿ ಮುರುಳಿ ಕೆರೆಹಳ್ಳಿ ಆಯ್ಕೆಯಾಗಿದ್ದಾರೆ. ಪಟ್ಟಣದ ಹಿಂದೂ ರಾಷ್ಟ್ರಸೇನಾದ ಸಭಾಂಗಣದಲ್ಲಿ ನಡೆದ ಗಣೇಶ್ೋತ್ಸವ  ಸಮಿತಿಯ ಸಭೆಯಲ್ಲಿ 2024 ರ ಹಿಂದೂ…

    Read more

    Leave a Reply

    Discover more from Prasarana news

    Subscribe now to keep reading and get access to the full archive.

    Continue reading