PRESS DAY: ವಂಶವಾಹಿನಿಯಿಂದ ಬಟ್ಟೆಮಲ್ಲಪ್ಪದಲ್ಲಿ ಪತ್ರಿಕಾ ದಿನಾಚರಣೆ…

ಹೊಸನಗರ:ಕೈಯಲ್ಲಿ ಮೊಬೈಲ್ ಇದೆ ಎಂದ ಮಾತ್ರಕ್ಕೆ ಎಲ್ಲರೂ ಪತ್ರಕರ್ತರಾಗುವುದಕ್ಕೆ ಸಾಧ್ಯವಿಲ್ಲ, ಹಾಗಾದರೆ ಅದು ಅಪಾಯವೂ ಹೌದು.  ಪತ್ರಕರ್ತರಾಗಲು ನಿರಂತರ ಅಧ್ಯಾಯನ, ವಿಷಯ ಸಂಗ್ರಹ, ಪಾರದರ್ಶಕ ಮನಸ್ಸು ಮತ್ತು ಆಸಕ್ತಿ ಇದ್ದಾಗ ನಿಜಪತ್ರಕರ್ತರಾಗಿ ಹೆಸರು ಗಳಿಸುವುದಕ್ಕೆ ಸಾಧ್ಯ ಎಂದು ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ  ಎಚ್.ಯು. ಸುರೇಶ್ ವಾಟಗೋಡು  ಹೇಳಿದರು.
ವಂಶವಾಹಿನಿ ಟ್ರಸ್ಟ್ ಗುಂಡೂಮನೆ ಇವರ ಆಶ್ರಯದಲ್ಲಿ ಪತ್ರಿಕಾ ಸ್ನೇಹಿತರ ಬಳಗದವತಿಯಿಂದ ತಾಲೂಕಿನ ಬಟ್ಟೆಮಲ್ಲಪ್ಪ ಶ್ರೀ ರಾಮಕೃಷ್ಣ ವಿದ್ಯಾಲಯದ ಸಭಾಂಗಣದಲ್ಲಿ  ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ, ಸನ್ಮಾನ ಹಾಗೂ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ನಂತರ ಅವರು ಮಾತನಾಡಿದರು. ಒಬ್ಬ ಆದರ್ಶ ಪತ್ರಕರ್ತ ಸಮಸ್ಯೆಗಳ ಪರಿಹಾರಕ್ಕೆ ಗಟ್ಟಿಧ್ವನಿಯಾಗಬಲ್ಲ ಆ ಕಾರಣಕ್ಕಾಗಿ ಆತ ಆ ಕ್ಷೇತ್ರದ ಆಸ್ತಿ ಎಂದು ಪರಿಗಣ ಸಲ್ಪಡುತ್ತಾನೆ ಎಂದ ಅವರು ಪ್ರಸ್ತುತ ದಿನಮಾನದಲ್ಲಿ ಪತ್ರಿಕೋದ್ಯಮ ಕುರಿತು ದೂರುಗಳಿದೆ ಇದಕ್ಕೆ ಸಮಾಜವೂ ಕಾರಣ ಎಂದರು.
ಅಕಾಡೆಮಿ ಪ್ರಶಸ್ತಿ ಪುರಸ್ಕೃತ  ಬಿದನೂರು ರವಿಯಯವರಿಗೆ  ಸಂಸ್ಥೆಯವತಿಯಿAದ ಸನ್ಮಾನ ಪ್ರದಾನ ಮಾಡಿದ ಮಹಿಳಾ ಒಕ್ಕೂಟದ ತಾಲೂಕು ಅಧ್ಯಕ್ಷೆ ಸುಮಾಸುಬ್ರಮಣ್ಯ ಮಾತನಾಡಿ, ಸಮಾಜದ ಅಂಕುಡೊAಕುಗನ್ನು ತಿದ್ದುವುದು ಸುಲಭದ ಕೆಲಸವಲ್ಲ ಅದು ಸವಾಲಿನ ಕೆಲಸ ಆದರೆ ಅಂತಹ ಕಾರ್ಯಕ್ಕೆ ಸಮರ್ಥರು ಬಾರದಿದ್ದರೆ ಇಡೀ ವ್ಯವಸ್ಥೆಯಲ್ಲಿ ಏರುಪೇರಾಗುವುದು ಖಚಿತ ಎಂದರು.
  ಪತ್ರಿಕೆ ಮತ್ತು ಓದು ಕುರಿತು ಉಪನ್ಯಾಸ ನೀಡಿದ ಯುವ ಸಾಹಿತಿ, ಯಕ್ಷ ಗಾಯಕ ಸೃಜನ್‌ಗಣೇಶ್ ಹೆಗಡೆ, ಆದರ್ಶ ಎನ್ನುವುದಕ್ಕೆ ಕನ್ನಡಿ ಎನ್ನುವ ಅರ್ಥವೂ ಇದೆ ನಮ್ಮನ್ನು ನಾವು ಆದರ್ಶರಾಗಿಸಿಕೊಳ್ಳುವುದಕ್ಕೆ ಜ್ಞಾನದ ಒಳ ಹರಿವಿರುವ ಪತ್ರಿಕೆ ಎಂಬ ಕನ್ನಡಿಯ ದರ್ಶನ ನಿರಂತರ ಮಾಡುತ್ತಿರಬೇಕು ಎಂದರು.  ಪ್ರಶಸ್ತಿ ಪುರಸ್ಕೃತ ಪತ್ರಕರ್ತ ರವಿ ಬಿದನೂರು ಮಾತನಾಡಿದರು.
ವಂಶವಾಹಿನಿ ಪತ್ರಿಕಾ ಸ್ನೇಹಿತರ ಬಳಗದ ಅಧ್ಯಕ್ಷ ರಮೇಶ್ ಹೆಗಡೆ ಗುಂಡೂಮನೆ ಅಧ್ಯಕ್ಷತೆವಹಿಸಿದ್ದರು. ವಿದ್ಯಾಸಂಸ್ಥೆಯ ಮುಖ್ಯಸ್ಥ ದೇವರಾಜ್, ಮುಖ್ಯ ಶಿಕ್ಷಕ ಕರುಣಾಕರ್, ಶಾಲಾ ಸಮಿತಿಯ ಗಣಪತಿ, ಬಸವರಾಜ್, ಅಶ್ವಿನಿ ಪಂಡಿತ್, ಜ್ಯೋತಿ ಮಣೂರು ಮತ್ತಿತರರು  ಇದ್ದರು.

PRESS DAY....


Discover more from Prasarana news

Subscribe to get the latest posts sent to your email.

  • Related Posts

    SAGARA NEWS:ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ, ಕಳಸವಳ್ಳಿ-ಅಂಬರಗೊಂಡ್ಲು ಸೇತುವೆ ಲೋಕಾರ್ಪಣೆ ಕಾರ್ಯಕ್ರಮ: ಹರತಾಳು ಹಾಲಪ್ಪ..

    ಹೊಸನಗರ: ಕಳಸವಳ್ಳಿ-ಅಂಬರಗೊಂಡ್ಲು  ಸೇತುವೆ ಉದ್ಘಾಟನಾ ಕಾರ್ಯಕ್ರಮ ಒಂದು ಐತಿಹಾಸಿಕ ಕಾರ್ಯಕ್ರಮವಾಗಲಿದೆ. ನಾಡಿಗೆ ಬೆಳಕು ನೀಡಿ ಸರ್ವಸ್ವವನ್ನು ಕಳೆದುಕೊಂಡ ಈ ಭಾಗದ ಸಂತ್ರಸ್ತರ ಆರು ದಶಕಗಳ ಕನಸು ನನಸಾಗುವ ಸಂದರ್ಭ ಸಮೀಪಿಸುತ್ತಿದ್ದು ಜುಲೈ 14 ರ ದಿನ ಆ ದಿನಕ್ಕೆ ಸಾಕ್ಷಿಯಾಗಲಿದೆ ಎಂದು…

    Read more

    HOSANAGARA NEWS:    ಅಗತ್ಯ ವೈದ್ಯರ ನೇಮಕಕ್ಕಾಗಿ ಮುಂದುವರೆದ ಪ್ರತಿಭಟನೆ…
    ಪ್ರತಿಭಟನಾ ಸ್ಥಳಕ್ಕೆ ಬಾರದ ಅಧಿಕಾರಿಗಳು…

    ಹೊಸನಗರ: ರಾಜ್ಯದಲ್ಲೇ  ಅತಿ ಹೆಚ್ಚು ಮಳೆ ಬೀಳುವ ಪ್ರದೇಶವಾದ ತಾಲೂಕಿನ ನಗರ ಹೋಬಳಿಯ ಮೂಡುಗೊಪ್ಪ ಗ್ರಾಮದ  ಸರ್ಕಾರಿ ಪ್ರಾಥಮಿಕ ಆಸ್ಪತ್ರೆಗೆ ಅಗತ್ಯ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಕೊರತೆಯನ್ನು ಸರಿಪಡಿಸುವಂತೆ ನಿನ್ನೆ ರಾತ್ರಿಯಿಂದಲೇ ಅಹೋರಾತ್ರಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು ಇಂದು ಸಹ ವೈದ್ಯರನ್ನು…

    Read more

    Leave a Reply

    Discover more from Prasarana news

    Subscribe now to keep reading and get access to the full archive.

    Continue reading