PERVERSION:ಇದೆಂತಾವಿಕೃತಿ… ಹಸುಗಳ ಕೆಚ್ಚಲು ಕೊಯ್ದ ದುರುಳರು. ಹೊಸನಗರದಲ್ಲೊಂದು ಅಮಾನವೀಯ ಘಟನೆ….

ಹೊಸನಗರ ; ಹಸುವಿನ ಕೆಚ್ಚಲು ಕೊಯ್ದು ವಿಕೃತಿ ಮೆರೆದಿರುವ ಘಟನೆ ಹೊಸನಗರ ತಾಲೂಕಿನ ತೋಟದಕೊಪ್ಪ ಗ್ರಾಮದ ವಿಜಾಪುರ ಎಂಬಲ್ಲಿ ಶನಿವಾರ ನಡೆದಿದೆ.
ಗ್ರಾಮದ ನವೀನ್ ಎಂಬುವರು ತಾವು ಸಾಕಿದ ಗೋವನ್ನ ಮೇಯಲು ಬಿಟ್ಟಿದ್ದು ಶನಿವಾರ ಸಂಜೆ 4:30ರ ಸುಮಾರಿಗೆ ಊರಿನ ಜನರು ಫೋನ್ ಕರೆ ಮಾಡಿ, ನಿಮ್ಮ ದನದ ಕೆಚ್ಚಲಿನಲ್ಲಿ ರಕ್ತ ಸೋರುತ್ತಿರುವುದಾಗಿ ವಿಷಯ ತಿಳಿಸಿದ್ದು ತಕ್ಷಣ ಸ್ಥಳಕ್ಕೆ ಧಾವಿಸಿ ನೋಡಿದಾಗ 9 ವರ್ಷ ಪ್ರಾಯದ ಕರು ಹಾಕಿದ ಮಲೆನಾಡು ಗಿಡ್ಡ ತಳಿಯ ಹಸುವಿನ ಕೆಚ್ಚಲಿನಿಂದ ರಕ್ತ ಸೋರುತ್ತಿರುವುದು ಕಂಡು ಬಂದಿದ್ದು ಯಾರೋ ದನದ ಕೆಚ್ಚಲು ಕೊಯ್ದಿರುವ ಬಗ್ಗೆ ಅನುಮಾನ ಬಂದಿದೆ. ನಂತರ ಗ್ರಾಮಸ್ಥರ ಸಹಾಯದಿಂದ ದನವನ್ನು ಮನೆಗೆ ಕರೆತಂದು ಪಶು ವೈದ್ಯರಿಂದ ಹೊಲಿಗೆ ಹಾಕಿಸಿ ಚಿಕಿತ್ಸೆ ಕೊಡಿಸಿರುವುದಾಗಿ ಹಾಗೂ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ವಸಂತ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿರುತ್ತಾರೆ...

PERVERSION...


Discover more from Prasarana news

Subscribe to get the latest posts sent to your email.

  • Related Posts

    DIESEL THIEVES:                ಕಳ್ಳರ ಕರಾಮತ್ತು: ಮೆಸ್ಕಾಂ ಕಚೇರಿ ಮುಂಭಾಗ ನಿಲ್ಲಿಸಿದ್ದ ಮೆಸ್ಕಾಂ ಲಾರಿಯಿಂದ 135 ಲೀಟರ್ ಡೀಸೆಲ್ ಕಳವು…

    ಹೊಸನಗರ: ಮೆಸ್ಕಾಂ ಇಲಾಖೆ ಹೊಸನಗರದ ಕಚೇರಿ ಮುಂಭಾಗ ನಿಲ್ಲಿಸಿದ್ದ ಮೆಸ್ಕಾಂ ಲಾರಿಯಿಂದ 135 ಲೀಟರ್ ಡೀಸೆಲ್ ಕಳವು ಮಾಡಿದ ಘಟನೆ ನಡೆದಿದೆ. ಮೆಸ್ಕಾಂ ಹೊಸನಗರ ಉಪವಿಭಾಗದ ದಿನದ ಕೆಲಸ ಮುಗಿಸಿ ಕಚೇರಿ ಎದುರು ಲಾರಿ‌ ನಿಲ್ಲಿಸಿದ್ದ ವೇಳೆ ಬರೋಬ್ಬರಿ 135 ಲೀ…

    Read more

    ACCUSED ARRESTED: ಹೊಸನಗರ: 39 ಕೆ.ಜಿ ಶ್ರೀಗಂಧ ವಶ ಓರ್ವನ ಬಂಧನ…

    ಹೊಸನಗರ : ಹೊಸನಗರ ವಲಯದ ವ್ಯಾಪ್ತಿಯಲ್ಲಿ ಅಕ್ರಮವಾಗಿ ಶ್ರೀಗಂಧಮರ ಮರಗಳನ್ನು ಕಡಿದಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಪ್ರಕರಣದಲ್ಲಿ ಭಾಗಿಯಾಗಿದ್ದ ಇನ್ನೊಬ್ಬ  ಆರೋಪಿ ತಪ್ಪಿಸಿಕೊಂಡಿದ್ದಾನೆ. ಇಂದು ಅರಣ್ಯ ಸಂಚಾರಿ ದಳದ ಪೊಲೀಸರು ನಿಖರ ಮಾಹಿತಿ ಮೇರೆಗೆ ಹೊಸನಗರ ವಲಯದ ವ್ಯಾಪ್ತಿಯಲ್ಲಿ  ಕಾರ್ಯಾಚರಣೆ ನಡೆಸಿ…

    Read more

    Leave a Reply

    Discover more from Prasarana news

    Subscribe now to keep reading and get access to the full archive.

    Continue reading

    Subscribe