PATTANA PANCHAYAT: ಗದ್ದಲ,ಗಲಾಟೆ, ವಿರೋಧದ ನಡುವೆ ನಡೆಯಿತು ಹೊಸನಗರ ಪ.ಪಂ ಸಾಮಾನ್ಯ ಸಭೆ..

ಹೊಸನಗರ: ಸದಸ್ಯರಿಗೆ ಅಗೌರವ, ಸಾಮಾನ್ಯ ಸಭೆಗೆ ನಿಗದಿಪಡಿಸಿದ ಸಮಯ ಹಾಗೂ ಹಿಂದಿನ ಸಭೆಯಲ್ಲಿ ತೀರ್ಮಾನ ವಾದಂತಹ ವಿಷಯಗಳ ತಿದ್ದುಪಡಿ ವಿಚಾರವಾಗಿ ಪಟ್ಟಣ ಪಂಚಾಯತ್ ಅಧ್ಯಕ್ಷ ನಾಗಪ್ಪ ಹಾಗೂ ಸದಸ್ಯರುಗಳ ನಡುವೆ ಗದ್ದಲ, ಗಲಾಟೆ, ವಾಗ್ವಾದ ಏರ್ಪಟ್ಟ ಘಟನೆ ಶುಕ್ರವಾರ ನಡೆದ ಪಟ್ಟಣ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಡೆಯಿತು.
ಸಭೆಯ ಆರಂಭದಲ್ಲಿ ಪಟ್ಟಣ ಪಂಚಾಯತ್ ಸದಸ್ಯ ಅಶ್ವಿನಿ ಕುಮಾರ್ ಮಾತನಾಡಿ ಹಿಂದಿನ ಸಭೆಯಲ್ಲಿ ತೀರ್ಮಾನವಾಗಿದ್ದ ವಿಷಯಗಳನ್ನು ತಿದ್ದುಪಡಿ ಮಾಡಿದ್ದು ತಪ್ಪು. ಅಲ್ಲದೆ ತೀರ್ಮಾನವಾದ ವಿಷಯಗಳ ತಿದ್ದುಪಡಿ ಮಾಡಲು ನಿಮಗೆ ಅಧಿಕಾರವನ್ನು ನೀಡಿದ್ದು ಯಾರು ಎಂದು ಅಧ್ಯಕ್ಷರನ್ನ ಪ್ರಶ್ನಿಸಿದರು ಈ ಸಂದರ್ಭದಲ್ಲಿ ಇವರಿಬ್ಬರ ನಡುವೆ ವಾಗ್ವಾದ ನಡೆಯಿತು ಅಲ್ಲದೆ ಅಧ್ಯಕ್ಷರು ನನ್ನನ್ನ ಅಗೌರವದಿಂದ ಮಾತನಾಡಿಸುತ್ತಿದ್ದು ಇದು ಒಬ್ಬ ಸದಸ್ಯನಿಗೆ ಮಾಡಿದ ಅವಮಾನ ಎಂದು ತಾವು ಕುಳಿತಿದ್ದ ಅಸನದಿಂದ ಎದ್ದು ನೆಲದ ಮೇಲೆ ಕುಳಿತು ಪ್ರತಿಭಟಿಸಿದರು ಅಲ್ಲದೆ ಅಲ್ಲಿಯೇ ಕುಳಿತು ಸಭೆಯಲ್ಲಿ ಪಾಲ್ಗೊಂಡರು.
ಹಾಗೆಯೇ ಪಟ್ಟಣ ಪಂಚಾಯತ್ ಬಸ್ಟಾಂಡ್ ಮುಂಭಾಗ ಹಾಕಿರುವಂತಹ ವೆಟ್ ಮಿಕ್ಸ್ ಅನ್ನು ಜನರ ಅನುಕೂಲಕ್ಕೆ ತಕ್ಕಂತೆ ಹಾಕಲಾಗಿದೆ ಅಥವಾ ನೆಪಮಾತ್ರಕ್ಕೆ ಹಾಕಲಾಗಿದೆಯೋ ಎಂದು ಅಭಿಯಂತರ ರನ್ನು ಪ್ರಶ್ನಿಸಿದರು ಹಾಗೆಯೇ ಫುಡ್ ಕೋರ್ಟ್ ಕಾಮಗಾರಿ ಸಂಪೂರ್ಣಗೊಳ್ಳಬೇಕು ಅಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲವಾಗುವಂತೆ ವ್ಯವಸ್ಥಿತವಾಗಿ ಅಂಗಡಿಗಳನ್ನು ನಿರ್ಮಾಣ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಬಳಿಕ ಮಾತನಾಡಿದ ಸದಸ್ಯ ಸುರೇಂದ್ರ ಕೋಟ್ಯಾನ್ ಇವರ ಇಚ್ಛೆಗೆ ತಕ್ಕಂತೆ ಅಜಂಡವನ್ನು ಸಿದ್ಧಪಡಿಸಿಕೊಂಡು ಬಳಿಕ ಅದನ್ನು ಸದಸ್ಯರಿಗೆ ನೀಡುತ್ತಾರೆ ಅಲ್ಲದೆ 33 ವಿಷಯಗಳನ್ನು ಒಳಗೊಂಡ ಸಾಮಾನ್ಯ ಸಭೆಯನ್ನು ಸಂಜೆ 4:00 ಗಂಟೆಗೆ ನಿಗದಿ ಮಾಡಿದ್ದೀರಾ ಸಾಮಾನ್ಯ ಸಭೆಗಳು ಜನರ ಮತ್ತು ಪಟ್ಟಣ ದ ಸಮಸ್ಯೆಗಳನ್ನು ಚರ್ಚಿಸಿ ಅವುಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ಸಲುವಾಗಿ ನಡೆಸಲಾಗುತ್ತದೆ ಆದರೆ ಇಲ್ಲಿ ಯಾರದ್ದು ಅನುಕೂಲಕ್ಕಾಗಿ ಅವರಿಗೆ ಸೂಕ್ತವಾದ ಸಮಯಕ್ಕೆ ಹೊಂದಿಕೊಳ್ಳುವಂತೆ ಸಭೆಯನ್ನು ಕರೆದಿದ್ದೀರಿ ಇದಕ್ಕೆ ನನ್ನ ವಿರೋಧವಿದೆ ಎಂದು ಹೇಳಿ ಅಜಂಡವನ್ನು ಎಸೆದು ಸಭೆಯಿಂದ ಹೊರ ನಡೆದರು ಇವರ ಜೊತೆಗೆ ಬಿಜೆಪಿಯ ಸದಸ್ಯರಾದ ಕೃಷ್ಣವೇಣಿ. ಹಾಗೂ ಗಾಯತ್ರಿ ನಾಗರಾಜ್ ಸಭೆಯಿಂದ ಹೊರ ನಡೆದರು.
ಬಳಿಕ ಸಭೆಯನ್ನು ಮುಂದುವರಿಸಿದ ಅಧ್ಯಕ್ಷರು ಅಲ್ಪಸಮಯದಲ್ಲಿ ನಿಗದಿತ ವಿಷಯಗಳ ಬಗ್ಗೆ ಚರ್ಚಿಸಿ ಸಭೆಯನ್ನು ಮುಕ್ತಾಯಗೊಳಿಸಿದರು.
ಸಭೆಯಲ್ಲಿ ಉಪಾಧ್ಯಕ್ಷರಾದ ಚಂದ್ರಕಲಾ,ಪ ಪಂ ಮುಖ್ಯ ಅಧಿಕಾರಿ ಹರೀಶ್ ಎಂ ಎನ್ ಸದಸ್ಯರಾದ ಗುಲಾಬಿ ಮರಿಯಪ್ಪ, ಗುರುರಾಜ್,  ಸಿಂಥಿಯಾ ಸೇರಾವ್, ಶಾಹಿನ ನಾಸಿರ್, ನಿತ್ಯಾನಂದ, ನೇತ್ರಾವತಿ,..

PATTANA PANCHAYAT...


Discover more from Prasarana news

Subscribe to get the latest posts sent to your email.

  • Related Posts

    BYR:HOSANAGARA: ಸಂಸದರಿಂದ: ವಿದ್ಯಾರ್ಥಿಗಳಿಗೆ ಸ್ವೆಟರ್ ವಿತರಣೆ…

    ಹೊಸನಗರ:ಕೇಂದ್ರ ಸರ್ಕಾರದ ರಾಷ್ಟ್ರೀಯ ಗ್ರಾಮೀಣ ಸಾಕ್ಷರತಾ ಮಿಷನ್ ಯೋಜನೆಯಡಿ ಇಂದು  ಸರ್ಕಾರಿ ಶಾಲೆಯಲ್ಲಿ ಶಿಕ್ಷಣಾಭ್ಯಾಸ ಮಾಡುತ್ತಿರುವ ಪ್ರಾಥಮಿಕ ಶಾಲೆಯ 1 ರಿಂದ 4 ನೆ ತರಗತಿ ಮಕ್ಕಳಿಗೆ ಸ್ವಟರ್ ಅನ್ನು ಸಂಸದರಾದ ಬಿ ವೈ ರಾಘವೇಂದ್ರ ವಿತರಿಸಿದರು.ವಿತರಣೆ ಬಳಿಕ ಮಾತನಾಡಿದ ಅವರು…

    Read more

    RIPPONPET NEWS:ಜುಲೈ 19 ರಂದು ರಿಪ್ಪನ್ ಪೇಟೆ ರೋಟರಿ ಕ್ಲಬ್ ನ ಪದಗ್ರಹಣ ಸಮಾರಂಭ….

    ರಿಪ್ಪನ್‌ಪೇಟೆ ;-ಜುಲೈ 19 ರ ಶನಿವಾರ ಸಂಜೆ   ಪಟ್ಟಣದ ವಿಶ್ವಮಾನವ ಸಭಾಭವನದಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ.ಹಾಗೂ ಪದವಿ ಕಾಲೇಜ್‌ನಲ್ಲಿ ವ್ಯಾಸಂಗ ಮಾಡಿ ಅತಿ ಹೆಚ್ಚು ಆಂಕಗಳಿಸಿ ತೇರ್ಗಡೆಯಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ಹಾಗೂ 2025-26 ನೇ ಸಾಲಿನ ನೂತನರೋಟರಿಕ್ಲಬ್ ಪದವಿ ಸ್ವೀಕಾರ…

    Read more

    Leave a Reply

    Discover more from Prasarana news

    Subscribe now to keep reading and get access to the full archive.

    Continue reading