

ಹೊಸನಗರ: ತಾಲೂಕಿನ ರಿಪ್ಪನ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಕೊಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳನ್ನ ತಡೆಗಟ್ಟುವ ನಿಟ್ಟಿನಲ್ಲಿ ಮಂಗಳವಾರ ರಿಪ್ಪಿನ್ ಪೇಟೆ ಪೊಲೀಸ್ ಠಾಣೆ ಪಿಎಸ್ಐ ಪ್ರವೀಣ್ ನೇತೃತ್ವದ ತಂಡ ಹಾಗೂ ಕೂಡೂರು ಗ್ರಾಮ ಪಂಚಾಯತ್ ಆಡಳಿತ ಮಂಡಳಿಯವರೂ ಅದೇ ಗ್ರಾಮ ಪಂಚಾಯತ್ ವ್ಯಾಪ್ತಿಯ ಶಾಂತಪುರ ಗ್ರಾಮದಲ್ಲಿ ಅತಿ ಹೆಚ್ಚು ಅಪಘಾತಗಳು ನಡೆಯುವ ಹಾಗೂ ಅಪಾಯಕಾರಿ ತಿರುವುಗಳು ಪ್ರದೇಶಗಳನ್ನು ಗುರುತಿಸಿ ಅಲ್ಲಿ ಜಾಗೃತಿ ಸೂಚನಾ ನಾಮಫಲಕಗಳನ್ನು ಹಾಗೂ ಮರಗಳಿಗೆ ರೇಡಿಯಮ್ ರಿಫ್ಲೆಕ್ಟರ್ ಹಚ್ಚುವ ಮೂಲಕ ರಸ್ತೆ ಸುರಕ್ಷತೆ ಹಾಗೂ ಅಪಾಯಕಾರಿ ಸ್ಥಳಗಳು ಮತ್ತು ತಿರುಗಳ ಬಗ್ಗೆ ಸವಾರರಿಗೆ ಅರಿವನ್ನ ಮೂಡಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಈ ಮೂಲಕ ಹೊರಗಿನಿಂದ ಬರುವ ಪ್ರವಾಸಿಗರಿಗೆ ಮತ್ತು ವಾಹನ ಚಾಲಕರಿಗೆ ಮುಂದಾಗುವ ಅಪಾಯವನ್ನು ತಪ್ಪಿಸಲು, ಸುಖಕರ ಪ್ರಯಾಣ ಮಾಡಲು ಮತ್ತು ಮುಂಜಾಗ್ರತೆ ವಹಿಸಲು ಸಹಕಾರಿಯಾಗುವಂತೆ ಸೂಚನಾ ಫಲಕ ಅಳವಡಿಸುವ ಕೆಲಸವನ್ನ ಪೋಲಿಸ ಇಲಾಖೆ ಮಾಡಿದೆ
ಪೊಲೀಸ್ ಇಲಾಖೆಗಳು ಕೇವಲ ಅಪರಾಧ ತಡೆ, ಕಾನೂನು ಪಾಲನೆ ಅಷ್ಟೇ ಅಲ್ಲದೆ ಇಂತಹ ಜನಪರ ಸಮಾಜಮುಖಿ ಕೆಲಸಗಳನ್ನ ಮಾಡಬಹುದು ಎನ್ನುವ ಮೂಲಕ ಜನರ ಪ್ರಶಂಸೆಗೆ ಪಾತ್ರರಾಗಿದೆ.
ಈ ಸಮಾಜಮುಖಿ ಕಾರ್ಯದಲ್ಲಿ ಪೊಲೀಸ್ ಸಿಬ್ಬಂದಿಗಳಾದ ಉಮೇಶ್, ವಿಕ್ಟರ್, ನಾಗೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಜಯಪ್ರಕಾಶ್ ಶೆಟ್ಟಿ ಇನ್ನಿತರರು ಪಾಲ್ಗೊಂಡಿದ್ದರು.
NOTICE BOARD...
Discover more from Prasarana news
Subscribe to get the latest posts sent to your email.