

ಹೊಸನಗರ: ತಾಲೂಕಿನ ಅರಮನೆ ಕೊಪ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಂದಗಲ್ ಗ್ರಾಮದಲ್ಲಿ ಬಾರಿ ಪ್ರಮಾಣದ ಭೂಕುಸಿತ ಉಂಟಾಗಿ ಅ ಭಾಗದ ಜನರಲ್ಲಿ ಆತಂಕ ಸೃಷ್ಟಿಸಿತ್ತು ಬಳಿಕ ಕಂದಾಯ ಇಲಾಖೆ ಅಧಿಕಾರಿಗಳು ಶಾಸಕರು ಭೂಕುಸಿತ ಉಂಟಾದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ತಜ್ಞರನ್ನು ಕರೆಸಿ ಬಳಿಕ ಮುಂದಿನ ಕ್ರಮದ ಬಗ್ಗೆ ಚರ್ಚಿಸಿ ತೀರ್ಮಾನವನ್ನ ಕೈಗೊಳ್ಳುವ ಭರವಸೆಯನ್ನು ನೀಡಿದ್ದರು.
ಆದರೆ ಕುಂದಗಲ್ ಗ್ರಾಮದಲ್ಲಿ ಆರಂಭದಲ್ಲಿ ಉಂಟಾದ ಭೂಕುಸಿತ ಪ್ರಮಾಣ ಅಂದಾಜು 200 ಮೀಟರ್ ಗಳಷ್ಟು ಉದ್ದ ಹಾಗೂ ಒಂದುವರೆ ಅಡಿಗಳಷ್ಟು ಕೆಳಗೆ ಭೂಮಿ ಕುಸಿದಿತ್ತು ಆದರೆ ಇಂದಿನ ಭೂಕುಸಿತ ಪ್ರಮಾಣ ಅಂದಾಜು 6 ರಿಂದ 8 ಅಡಿಗಳೆಷ್ಟು ಕುಸಿದಿದೆ ಅಲ್ಲದೆ ಸಮೀಪ ಇರುವಂತಹ ಅಡಿಗೆ ತೋಟಗಳ ಬಳಿ ಇರುವ ದರೆಗಳು ಕುಸಿದಿದ್ದು ತೋಟಗಳಿಗೆ ಹಾನಿಯಾಗಿದೆ.
ಬಹುಷ್ಯ ಭೂಕುಸಿತ ಪ್ರಮಾಣ ಹೀಗೆ ಮುಂದುವರೆದರೆ ಅಲ್ಲಿರುವಂತಹ 20 ಎಕ್ಕರೆಗಳಿಗಿಂತ ಅಡಿಕೆ ತೋಟಗಳು ನಾಶವಾಗಲಿದೆ. ಮೂಲಸೌಕರ್ಯ ವಂಚಿತ ಕುಂದಗಲ್ ಗ್ರಾಮಕ್ಕೆ ಭೂಕುಸಿತ ಅಲ್ಲಿನ ಜನರ ಬದುಕನ್ನು ಕಿತ್ತುಕೊಳ್ಳುವ ಸಾಧ್ಯತೆ ಹೆಚ್ಚಿದೆ ಕೂಡಲೇ ಕಂದಾಯ ಇಲಾಖೆ ಈ ಬಗ್ಗೆ ಗಮನವನ್ನು ಹರಿಸಿ ಸೂಕ್ತವಾದ ಕ್ರಮವನ್ನು ಕೈಗೊಳ್ಳಬೇಕು ಎಂಬುದು ಜನರ ಅಳಲು...
LANDSLIDE:HOSANAGARA.
Discover more from Prasarana news
Subscribe to get the latest posts sent to your email.