KDP MEETING:ಹೊಸನಗರ ಕೆಡಿಪಿ ಸಭೆಯಲ್ಲಿ ಪ್ರತಿಧ್ವನಿಸಿದ ನಕಲಿ ಹಕ್ಕು ಪತ್ರ ಪ್ರಕರಣ…

ಹೊಸನಗರ: ಈ ಹಿಂದೆ ಎಲ್ ಗುಡ್ಡೆ ಕೊಪ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ದಾಖಲಾದಂತಹ ನಕಲಿ ಹಕ್ಕು ಪತ್ರ ಜಾಲ ಪ್ರಕರಣ ಕುರಿತಂತೆ ತನಿಖೆ ಯಾವ ಹಂತದಲ್ಲಿದೆ ಮತ್ತು ತಪ್ಪಿತಸ್ಥರ ವಿರುದ್ಧ ಏನು ಕ್ರಮವನ್ನು ಕೈಗೊಳ್ಳಲಾಗಿದೆ ಅಲ್ಲದೆ ಆಪಕರಣದಲ್ಲಿ ಇನ್ಯಾರು ಭಾಗಿಯಾಗಿದ್ದಾರೆ ಎಂಬುದನ್ನ ಶೀಘ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮವನ್ನು ಜರುಗಿಸುವಂತೆ ಶಾಸಕದ ಗೋಪಾಲಕೃಷ್ಣ ಬೇಳೂರು ಹಾಗೂ ಆರಗ ಜ್ಞಾನೇಂದ್ರ ಪೋಲಿಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಿದರು.
ಇಂದು ಹೊಸನಗರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ತ್ರೈಮಾಸಿಕ ಪ್ರಗತಿ ಪರಿಶೀಲನ(KDP) ಸಭೆಯಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಇಬ್ಬರು ಶಾಸಕರು ರಾಜ್ಯದಲ್ಲಿ ಕೊವಿಡ್ ಪ್ರಕರಣಗಳು ವರದಿಯಾಗಿವೆ ಮುಂಜಾಗ್ರತೆ ಕ್ರಮವಾಗಿ ಪ್ರತಿ ತಾಲೂಕು ಆಸ್ಪತ್ರೆಗಳಲ್ಲಿ ಅದಕ್ಕೆ ಸಂಬಂಧಿಸಿದಂತೆ ಅಗತ್ಯ ಉಪಕರಣಗಳು ಹೆಚ್ಚುವರಿ ಬೆಡ್ ಗಳ ವ್ಯವಸ್ಥೆ ಆಕ್ಸಿಜನ್ ಹಾಗೆಯೇ ಸಿಬ್ಬಂದಿಗಳನ್ನು ನಿಯೋಜಿಸಿಕೊಳ್ಳುವಂತೆ ವೈದ್ಯಾಧಿಕಾರಿಗಳಿಗೆ ಸೂಚಿಸಿದರು ಜೊತೆಗೆ ಮಂಗನ ಕಾಯಿಲೆ ಸಹ ಮಲೆನಾಡ ಭಾಗದಲ್ಲಿದ್ದು ಈ ಬಗ್ಗೆಯೂಗಮನಹರಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು ಬಳಿಕ ತಾಲೂಕಿನ ವಿವಿಧ ಅಭಿವೃದ್ಧಿ ಹಂತದ ಕಾಮಗಾರಿಗಳಾದ ಜೆಜೆಎಂ. ವಿದ್ಯುತ್ ಘಟಕಗಳ ಸ್ಥಾಪನೆ ಮತ್ತು ನಿರ್ವಹಣೆ ಹಾಗೆಯೇ ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದು ರೈತರಿಗೆ ಅನುಕೂಲವಾಗುವಂತಹ ಎಲ್ಲಾ ಕೆಲಸಗಳು ಶೀಘ್ರವಾಗಿ ಮಾಡಿಕೊಡುವಂತೆ ಸೂಚಿಸಿದರು ಕೃಷಿ ಪ್ರಧಾನ ತಾಲೂಕಿನಲ್ಲಿ ರೈತರಿಗೆ ಸಮಸ್ಯೆಯಾಗದಂತೆ ಅಧಿಕಾರಿಗಳ ಎಚ್ಚರವಹಿಸಬೇಕು. ನಿಯಮಿತವಾಗಿ ರೈತರ ಸಭೆ ನಡೆಸಬೇಕು, ಕಚೇರಿ ಬಿಟ್ಟು ರೈತರ ಹೊಲಗಳಿಗೆ ಭೇಟಿ ನೀಡಿ ಸಲಹೆ ನೀಡಬೇಕು, ಬಿತ್ತನೆ ಬೀಜ, ರಸಗೊಬ್ಬರ ಲಭ್ಯತೆ ಬಗ್ಗೆ ಮಾಹಿತಿ ನೀಡಬೇಕು’ ಎಂದು ಕಟ್ಟಪ್ಪಣೆ ಮಾಡಿದರು. ಹಾಗೆಯೇ ನಗರ ನಿಟ್ಟೂರು ಸಂಪೇಕಟ್ಟೆಆಸ್ಪತ್ರೆಗಳಲ್ಲಿ ವೈದ್ಯರು ಹಾಗೂ ಸಿಬ್ಬಂದಿಗಳ ಕೊರತೆ ಇದ್ದು ಅವುಗಳನ್ನು ಬೇಗ ಪೂರ್ಣಗೊಳಿಸುವಂತೆ ವೈದ್ಯಾಧಿಕಾರಿ ಶಾಸಕ ಅರಗ ಜ್ಞಾನೇಂದ್ರ ಸೂಚಿಸಿದರು ಬಳಿಕ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ರಸ್ತೆ ಬದಿಗಳಲ್ಲಿ ಅಪಾಯದ ಅಂಚಿನಲ್ಲಿರುವ ಮರಗಳನ್ನು ಶೀಘ್ರವಾಗಿ ಕಡಿತಲೆ ಮಾಡುವಂತೆ ಹಾಗೂ ಜನಪರವಾದ ಸರ್ಕಾರಿ ಕಾಮಗಾರಿಗಳಿಗೆ ತೊಂದರೆಯನ್ನು ನೀಡಿದಂತೆ ಮತ್ತು ಕಾಮಗಾರಿಗೆ ಸಹಕರಿಸುವಂತೆ ತಿಳಿಸಿದರು.
ಅಪಾಯ ಹಂತದಲ್ಲಿರುವ ಶಾಲಾ ಕಟ್ಟಡಗಳು ಹಾಗೂ ಶಾಲಾ ಕಟ್ಟಡದ ಮೇಲೆ ವಾಲಿರುವಂತಹ ಮರಗಳ ಕುರಿತು ಮಾಹಿತಿಯನ್ನು ಸಂಗ್ರಹಿಸಿ ಅದನ್ನು ಶಾಸಕರುಗಳ ಗಮನಕ್ಕೆ ತರುವಂತೆ ಜೊತೆಗೆ ಫಲಿತಾಂಶದ ಕಡೆ ಹೆಚ್ಚು ಗಮನವನ್ನು ಕೊಡುವಂತೆ ಶಿಕ್ಷಣಾಧಿಕಾರಿಗಳಿಗೆ ತಾಕಿತು ಮಾಡಿದರು.
ಹೊಸನಗರ ಪಟ್ಟಣದಲ್ಲಿ ವಿದ್ಯುತ್ ಸಮಸ್ಯೆ ಹೆಚ್ಚಿದ್ದು ಸಾರ್ವಜನಿಕರಿಂದ ಸಮಸ್ಯೆ ಕುರಿತು ಹೆಚ್ಚಿನ ದೂರುಗಳು ಬರುತ್ತಿದ್ದು ಮೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ಇದನ್ನ ಶೀಘ್ರ ಸರಿಪಡಿಸುವಂತೆ ಹಾಗೂ ವಿದ್ಯುತ್ ಸಮಸ್ಯೆ ಆಗದಂತೆ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳಬೇಕೆಂದು ಶಾಸಕ ಬೇಳೂರು ಗೋಪಾಲಕೃಷ್ಣ ಮೆಸ್ಕಾಂ ಅಧಿಕಾರಿಗಳಿಗೆ ಕಾರವಾಗಿ ನೋಡಿದರು. ಮಳೆಗಾಲ ಸಮಯದಲ್ಲಿ ಅಕೇಶಿಯ ಮರಗಳ ಕಟಾವಿಗೆ ಅವಕಾಶವನ್ನು ನೀಡಬಾರದು ಇದರಿಂದ ರಸ್ತೆಗಳು ಹಾಳಾಗುತ್ತಿದ್ದು ಒಂದು ವೇಳೆ ಇಂತಹದ್ದು ನಮ್ಮ ಗಮನಕ್ಕೆ ಬಂದರೆ ಅಧಿಕಾರಿಗಳ ವಿರುದ್ಧ ನಿರ್ಧಕ್ಷಣಿ ಕ್ರಮವನ್ನು ಕೈಗೊಳ್ಳುವುದಾಗಿ ಶಾಸಕರು ತಿಳಿಸಿದರು ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಜಯಲಕ್ಷ್ಮಿ ಆರ್ ಎಫ್ ಓ ಮೋಹನ್ ಕುಮಾರ್, ತಹಶೀಲ್ದಾರ್ ರಶ್ಮಿ ಹೇಚ್ ಜೇ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ನರೇಂದ್ರ ಕುಮಾರ್ ಕೆಡಿಪಿ ಸಮಿತಿಯ ಸದಸ್ಯರಾದ ವಾಟ್ ಗೊಡ್ ಸುರೇಶ್, ಸುಮ ಸುಬ್ರಹ್ಮಣ್ಯ
ಎಂ ಎಂ ಪರಮೇಶ್ವರ್, ಆಸಿಫ್, ಚಂದ್ರೇಶ್, ಚಿದಂಬರ್, ನಾಗೇಂದ್ರ ನಾಗು ತಾಲ್ಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ವಿಶೇಷ ಅಧಿಕಾರಿಗಳ ನೇಮಕ ಮಾಡಿ: ವಾಟಗೋಡ್ ಸುರೇಶ್

Daರ್ಕಾಸ್ತು, ಬಗರುಕ್ಕು ಮಂಜೂರಾತಿಯಾಗಿದ್ದು ಹಾಗೂ 94 ಸಿ ಹಕ್ಕುಪತ್ರ ಜನತಾ ನಿವೇಶನ ಆಶ್ರಯ ನಿವೇಶನ ಗಳ ದಾಖಲಾತಿ ಪರಿಶೀಲನೆಗೆ ವಿಶೇಷ ಅಧಿಕಾರಿಗಳಾದ ಸೂಚಿಸುವಂತೆ ಕೆಡಿಪಿ ಸದಸ್ಯರಾದ ವಾಟಗೋಡ್ ಸುರೇಶ್ ಸಭೆಯಲ್ಲಿ ಆಗ್ರಹಿಸಿದರು ಈ ಭಾಗದಲ್ಲಿ ಶಾಸಕರಾಗಿದ್ದ ಬಿ ಸ್ವಾಮಿರಾವ್, ಆಯನೂರು ಮಂಜುನಾಥ್, ಆರಗ ಜ್ಞಾನೇಂದ್ರ, ಅರತಾಳು ಹಾಲಪ್ಪ, ಜಿಡಿ ನಾರಾಯಣಪ್ಪ ರವರ ಅವಧಿಯಿಂದಲೂ ಆಶ್ರಯ, ಜನತಾ. ನಿವೇಶನ 94c ಹಕ್ಕುಪತ್ರಗಳನ್ನು ನೀಡಿದ್ದು ಆದರೆ ಈವರೆಗೂ ಅವುಗಳನ್ನು ಪಹಣಿಗೆ ಸೇರಿಸಿ ಇರುವುದಿಲ್ಲ ಈ ಕುರಿತಾಗಿ ಸಂಬಂಧಪಟ್ಟ ಅಧಿಕಾರಿಗಳು ಹರಕೆಯ ಉತ್ತರಗಳನ್ನು ನೀಡುತ್ತಿದ್ದ ಈ ಸಮಸ್ಯೆಯನ್ನು ಪರಿಹರಿಸಲು ವಿಶೇಷವಾದ ಅಧಿಕಾರಿಗಳನ್ನು ನೇಮಿಸಿ ದಾಖಲಾತಿ ಅವರ ಮೂಲಕ ಪರಿಶೀಲಿಸಿ ಸಮಸ್ಯೆಗೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳಲು ಅವಕಾಶವನ್ನು ನೀಡಬೇಕು ಎಂದು ಸಭೆಯಲ್ಲಿ ಆಗ್ರಿಸಿದರು.

ನಗರ ಭಾಗದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ನೀಡಿ: ಸುಮಾ ಸುಬ್ರಮಣ್ಯ.

ಮುಳುಗಡೆಯಿಂದ ಅಭಿವೃದ್ಧಿ ವಂಚಿತವಾದಅಂತಹ ನಾಡಿಗೆ ಬೆಳಕನ್ನು ನೀಡಿ ಕತ್ತಲಾಗಿರುವಂತಹ ನಗರ ಹೋಬಳಿ ವಿದ್ಯುತ್, ನೆಟ್ವರ್ಕ್, ರಸ್ತೆ ಸಂಪರ್ಕ, ಪ್ರವಾಸೋದ್ಯಮ ಅಭಿವೃದ್ಧಿ, ಭೂಮಾಲಿಕತ್ವ ಇನ್ನಿತರೆ ಸಮಸ್ಯೆಗಳಿಗೆ ಪರಿಹಾರವನ್ನು ನೀಡುವ ಮೂಲಕ ಆ ಭಾಗದ ಜನರ ಬದುಕಿಗೆ ಬೆಳಕನ್ನು ನೀಡುವ ಕೆಲಸ ಶೀಘ್ರಾಗಬೇಕು ಎಂದು ಕೆಡಿಪಿ ಸಮಿತಿಯ ಇನ್ನೋರ್ವ ಸದಸ್ಯ ಸುಮಸುಬ್ರಮಣ್ಯ ಶಾಸಕರಲ್ಲಿ ಮನವಿಯನ್ನ ಮಾಡಿದರು.

KDP MEETING..


Discover more from Prasarana news

Subscribe to get the latest posts sent to your email.

  • Related Posts

    RIPPONPET NEWS:ಜುಲೈ 19 ರಂದು ರಿಪ್ಪನ್ ಪೇಟೆ ರೋಟರಿ ಕ್ಲಬ್ ನ ಪದಗ್ರಹಣ ಸಮಾರಂಭ….

    ರಿಪ್ಪನ್‌ಪೇಟೆ ;-ಜುಲೈ 19 ರ ಶನಿವಾರ ಸಂಜೆ   ಪಟ್ಟಣದ ವಿಶ್ವಮಾನವ ಸಭಾಭವನದಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ.ಹಾಗೂ ಪದವಿ ಕಾಲೇಜ್‌ನಲ್ಲಿ ವ್ಯಾಸಂಗ ಮಾಡಿ ಅತಿ ಹೆಚ್ಚು ಆಂಕಗಳಿಸಿ ತೇರ್ಗಡೆಯಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ಹಾಗೂ 2025-26 ನೇ ಸಾಲಿನ ನೂತನರೋಟರಿಕ್ಲಬ್ ಪದವಿ ಸ್ವೀಕಾರ…

    Read more

    HOSANAGARA NEWS: ಹೊಸನಗರ ತಹಶೀಲ್ದಾರ್ ಸಾಗರಕ್ಕೆ ವರ್ಗಾವಣೆ…

    ಹೊಸನಗರ:ತಮ್ಮ ಉತ್ತಮ ಕಾರ್ಯ ವೈಕರಿಯ ಮೂಲಕ ಜನಮನ್ನಣೆ ಗಳಿಸಿದ್ದ ಹೊಸನಗರ ತಾಲೂಕಿನ ತಹಶೀಲ್ದಾರ್ ರಶ್ಮಿ ಹಾಲೇಶ್ ಅವರನ್ನು ಸಾಗರ ತಾಲೂಕಿಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.ರಶ್ಮಿ ಹಾಲೇಶ್ ಅವರನ್ನು ಸಾಗರಕ್ಕೆ ವರ್ಗಾವಣೆ ಗೊಳಿಸಲಾಗಿದ್ದು ಸಾಗರದ ತಹಶೀಲ್ದಾರ್ ಚಂದ್ರಶೇಖರ್ ನಾಯಕ್ ಅವರಿಗೆ…

    Read more

    Leave a Reply

    Discover more from Prasarana news

    Subscribe now to keep reading and get access to the full archive.

    Continue reading