

ಹೊಸನಗರ: ಕಾಂತಾರ ಚಾಪ್ಟರ್ 1 ಚಿತ್ರೀಕರಣ ಸಮಯದಲ್ಲಿ ಯಾವುದೇ ಅವಘಡ ನಡೆದಿಲ್ಲ ಎಂದು ಹೊಂಬಾಳೆ ಫಿಲಂಸ್ ಸಂಸ್ಥೆಯ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆದರ್ಶ ಸ್ಪಷ್ಟನೆ ನೀಡಿದ್ದಾರೆ.
ಹೊಸನಗರ ತಾಲ್ಲೂಕು ಯಡೂರು ಸಮೀಪದ ಮೇಲಿನಕೊಪ್ಪ ಮಾಣಿ ಹಿನ್ನೀರಿನ ಪ್ರದೇಶದಲ್ಲಿ ಕಳೆದ ಕೆಲ ದಿನಗಳಿಂದ ಕಾಂತಾರ ಚಾಪ್ಟರ್ 1 ಚಿತ್ರೀಕರಣ ನಡೆಯುತ್ತಿದೆ. ಚಿತ್ರೀಕರಣ ಸಮಯದಲ್ಲಿ ದೋಣಿ ದುರಂತ ಸಂಭವಿಸಿದೆ.ದೊಡ್ಡ ಅವಘಡ ನಡೆದಿದೆ. ನಾಯಕನಟ ರಿಷಬ್ ಶೆಟ್ಟಿ ಸೇರಿದಂತೆ ಹಲವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಇಲ್ಲಿ ಯಾವುದೇ ಅವಘಡ ನಡೆದಿಲ್ಲ. ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ
ಎಂದು ಅವರು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದರು.
ಶನಿವಾರ ಸಂಜೆ ಈ ಭಾಗದಲ್ಲಿ ಬಾರಿ ಗಾಳಿ ಮಳೆ ಹೆಚ್ಚಿದ್ದು ಚಿತ್ರೀಕರಣ ಮಾಡಲು ಹಾಕಿದ್ದ ಶಿಪ್ ಸೆಟ್ಟಿಂಗ್ ಹಾನಿಗೊಳಗಾಗಿದೆ. ಮತ್ಯಾವುದೇ ದುರಂತ ನಡೆದಿಲ್ಲ.
ನಟರು, ಸಹನಟರು ಆರೋಗ್ಯವಾಗಿದ್ದು ಚಿತ್ರೀಕರಣ ನಡೆಯುತ್ತಿದೆ.
ನಾವು ಹಿನ್ನೀರಿನ ಭಾಗದಲ್ಲಿ ಚಿತ್ರೀಕರಣ ನಡೆಸಿಲ್ಲ. ಹಿನ್ನೆಲೆ ಸೆಟ್ಟಿಂಗ್ ಮಾಡಿದ್ದ ಶಿಪ್ ಸೆಟ್ಟಿಂಗ್ ಬಳಸಲಾಗಿದೆ. ಅಷ್ಟೆ.
ಈ ಭಾಗದಲ್ಲಿ ಚಿತ್ರೀಕರಣ ನಡೆಸಲು ಎಲ್ಲಾ ಇಲಾಖೆಗಳ ಪರವಾನಿಗೆ ಪಡೆಯಲಾಗಿದೆ ಎಂದು ತಿಳಿಸಿದರು.
KANTARA CHAPTER1..
Discover more from Prasarana news
Subscribe to get the latest posts sent to your email.